ಕ್ರೀಡೆ/ಸಿನಿಮಾ

ನಟ ದರ್ಶನ್‌ಗೆ ಆಪರೇಷನ್ ತಕ್ಷಣವೇ ಆಗಬೇಕಾಗಿದೆ-ಸಿ.ವಿ ನಾಗೇಶ್‌, ವಿಮ್ಸ್‌ ಆಸ್ಪತ್ರೆ ವೈದ್ಯರು ನೀಡಿರುವ ವೈದ್ಯಕೀಯ ವರದಿ ಏನೇನಿದೆ?

ನ್ಯೂಸ್‌ ನಾಟೌಟ್‌ : ರೇಣುಕಾಸ್ವಾಮಿ ಕೇಸ್‌ನಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್‌ಗೆ ಇದೀಗ ಬೆನ್ನು ನೋವಿನ ತೀವ್ರತೆ ಜಾಸ್ತಿಯಾಗಿದ್ದು, ಬೆಂಬಿಡದೆ ಕಾಡುತ್ತಿದೆ ಎಂದು ಹೇಳಲಾಗಿದ್ದು, ತುಂಬಾ ನೋವಿನಿಂದ ಬಳಲುತ್ತಿರುವ ದರ್ಶನ್ ಅವರು ಇದೀಗ ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋಗಿದ್ದಾರೆ.

ದರ್ಶನ್ ಜಾಮೀನು ಅರ್ಜಿಯ ವಿಚಾರಣೆ ವೇಳೆ ಕೋರ್ಟ್‌ಗೆ ವೈದ್ಯಕೀಯ ವರದಿಯನ್ನು ಸಲ್ಲಿಸಲಾಗಿದ್ದು,ದರ್ಶನ್ ಜಾಮೀನು ಅರ್ಜಿ ವಿಚಾರಣೆ ಆರಂಭದಲ್ಲಿ ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು ಹೈಕೋರ್ಟ್‌ಗೆ ವಿಮ್ಸ್‌ ಆಸ್ಪತ್ರೆ ವೈದ್ಯರು ನೀಡಿರುವ ವೈದ್ಯಕೀಯ ವರದಿಯನ್ನು ಸಲ್ಲಿಕೆ ಮಾಡಿದ್ದಾರೆ.

ದರ್ಶನ್ ಪರ ವಕೀಲ ಸಿ.ವಿ ಅವರು ‌ನಾಗೇಶ್ ಅವರು ಈಗಾಗಲೇ ದರ್ಶನ್‌ಗೆ ಸಿಟಿ ಸ್ಕ್ಯಾನ್ ಮಾಡಲಾಗಿದೆ. MRI ಸಹ ಮಾಡಲಾಗಿದೆ. ಅವರ ಸ್ಪೈನಲ್ ಕಾರ್ಡ್ ಗೆ ರಕ್ತ ಚಲನೆ ಆಗುತ್ತಾ ಇಲ್ಲ. ಇದರಿಂದ ಕಿಡ್ನಿಯ ಸಮಸ್ಯೆಯೂ ಆಗ್ತಾ ಇದೆ. ಡಿಸ್ಕ್ ಕೂಡ ಪ್ರಾಬ್ಲಂ ಆಗಿದೆ. ತಕ್ಷಣವೇ ಆಪರೇಷನ್ ಆಗಬೇಕಿದೆ. ಇಲ್ಲದಿದ್ದರೆ ಪ್ಯಾರಾಲಿಸಿಸ್ ಆಗುವ ಸಾಧ್ಯತೆ ಇದೆ. ಹೀಗಾಗಿ ಅವರಿಗೆ ಮಧ್ಯಂತರ ಜಾಮೀನು ನೀಡಬೇಕು ಎಂದು ಮನವಿ ಮಾಡಿದ್ದಾರೆ.ಮಧ್ಯಂತರ ಜಾಮೀನು ನೀಡಿ ಎನ್ನುವ ಸಿ.ವಿ ನಾಗೇಶ್ ಮನವಿಗೆ ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು ಆಕ್ಷೇಪ ವ್ಯಕ್ತಪಡಿಸಿದರು. ಮೆಡಿಕಲ್ ರಿಪೋರ್ಟ್ ಓದಿದ ಜಡ್ಜ್‌ ಬೆಂಗಳೂರು ಅಥವಾ ಬಳ್ಳಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಬಹುದು ಎಂದು ಹೇಳಲಾಗಿದೆ. ಆರೋಪಿ ಪರ ವಕೀಲರು ಹಾಗೂ SPP ಇಬ್ಬರಿಗೂ ಕಾಪಿ ನೀಡಲು ಆದೇಶಿಸುತ್ತೇನೆ. ನಾಳೆ ಮಧ್ಯಾಹ್ನ ವಿಚಾರಣೆ ಮಾಡೋಣ ಬಿಡಿ ಎಂದು ವಿಚಾರಣೆಯನ್ನು ಮುಂದೂಡಿದ್ದಾರೆ.

ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್‌ಗೆ ಶಸ್ತ್ರ ಚಿಕಿತ್ಸೆ ಮಾಡುವ ಅವಶ್ಯಕತೆ ಇದ್ದು,ಕಿಡ್ನಿ, ಪೂಟ್ ನಂಬ್ನೆಸ್, ಆರ್ಥೋಪೆಡಿಕ್, ನ್ಯೂರೋ ಪ್ರಾಬ್ಲಂ ಇದೆ. ಕಾಲಿನಲ್ಲಿ ನಂಬ್ನೆಸ್ (ಮರಗಟ್ಟುವಿಕೆ) ಕಾಣಿಸಿಕೊಂಡಿದೆ. ಬೆಂಗಳೂರು & ಬಳ್ಳಾರಿಯಲ್ಲಿ ಚಿಕಿತ್ಸೆ ನೀಡುವ ಸಾಧ್ಯತೆ ಇದೆ.

Related posts

ರಶ್ಮಿಕಾ ಮಂದಣ್ಣ ವಿಡಿಯೋ ಡೀಪ್‌ಫೇಕ್ ಮಾಡಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿದ್ರಾ..? ಈ ಬಗ್ಗೆ ದೆಹಲಿ ಪೊಲೀಸರು ಹೇಳಿದ್ದೇನು?

IND vs WI 1st Test: ನಾಳೆಯಿಂದ (ಜು.12) ರೋಹಿತ್ ಪಡೆಗೆ ಆತಿಥೇಯ ವಿಂಡೀಸ್ ಎದುರಾಳಿ, ಕಠಿಣ ಅಭ್ಯಾಸಕ್ಕಿಳಿದ ಟೀಂ ಇಂಡಿಯಾದ ವಿಡಿಯೋ ವೈರಲ್

ದಾರವಾಹಿಯಲ್ಲಿ ನಟಿಸಲಿರುವ ಖ್ಯಾತ ಹಾಸ್ಯ ನಟ, 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಟೆನ್ನಿಸ್ ಕೃಷ್ಣ ನಟನೆಯ ಸಿರಿಯಲ್ ಯಾವುದು..?