ಕರಾವಳಿ

ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಒಂದು ವರ್ಷ:ಅಟೋ ಚಾಲಕನಿಗೆ ಸಿಗದ ಪರಿಹಾರ..!,ಕೊರಗಜ್ಜನ ಚಾಕರಿ ಮಾಡಿದ್ದರಿಂದ ಬದುಕುಳಿದಿದ್ದೇನೆ -ಪುರುಷೋತ್ತಮ ಪೂಜಾರಿ

ನ್ಯೂಸ್ ನಾಟೌಟ್ :ಕಳೆದ ವರ್ಷ(ನ.19ರಂದು) ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದ್ದ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ ಮಂಗಳೂರಿನ ಕಂಕನಾಡಿಯ ಪಂಪ್‌ವೆಲ್‌ ಸಮೀಪದ ನಾಗುರಿಯಲ್ಲಿ ಆಟೋರಿಕ್ಷಾದಲ್ಲಿ ಸಂಭವಿಸಿತ್ತು. ಈ ಘಟನೆಯಲ್ಲಿ ಅನ್ಯಾಯವಾಗಿ ಆಟೋರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರು ಗಂಭೀರವಾಗಿ ಗಾಯಗೊಂಡಿದ್ದರು.ಇದೀಗ ಈ ಘಟನೆ ಸಂಭವಿಸಿ ನಾಳೆಗೆ ಭರ್ತಿ ಒಂದು ವರ್ಷವಾದರೂ(ನ.19) ಪುರುಷೋತ್ತಮ ಪೂಜಾರಿಯವರಿಗೆ ಸರಕಾರದಿಂದ ಯಾವುದೇ ಪರಿಹಾರ ಸಿಕ್ಕಿಲ್ಲವೆಂದು ನೋವು ಹಂಚಿಕೊಂಡಿದ್ದಾರೆ.

ತಮ್ಮ ಮನದಾಳದ ನೋವಿನ ವಿಚಾರವನ್ನು ತೆರೆದಿಟ್ಟಿದ್ದು,ಘಟನೆ ಬಳಿಕ ನಾನು ಪಟ್ಟ ನೋವು ಅಷ್ಟಿಷ್ಟಲ್ಲ..ನಾನು ನನ್ನ ಪಾಡಿಗೆ ರಿಕ್ಷಾ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದವನು ಅನ್ಯಾಯವಾಗಿ ಈಗ ನೋವು ತಿನ್ನುತ್ತಿದ್ದೇನೆ.ಅಂದು ತೀವ್ರ ನಿಗಾ ಘಟಕ (ಐಸಿಯು)ದಲ್ಲಿ 80 ದಿನ ಸೇರಿದಂತೆ ಒಟ್ಟು 100 ದಿನ ಆಸ್ಪತ್ರೆಯಲ್ಲಿ ಯಾತನೆ ಅನುಭವಿಸಿದ್ದೆ. ಈಗಲೂ ದಿನಕ್ಕೆ 3 ಮಾತ್ರೆ ತೆಗೆದುಕೊಳ್ಳುತ್ತಿದ್ದೇನೆ. ಆಟೋರಿಕ್ಷಾ ಓಡಿಸಲು ಆಗುತ್ತಿಲ್ಲ. 5 ಕೆಜಿ ಭಾರ ಎತ್ತುವುದಕ್ಕೂ ಆಗುತ್ತಿಲ್ಲ. 46 ವರ್ಷಗಳಿಂದ ನಡೆಸಿಕೊಂಡು ಬಂದಿದ್ದ ಕೊರಗಜ್ಜನ ಚಾಕರಿಯೂ ಇದೀಗ ಸಾಧ್ಯವಾಗುತ್ತಿಲ್ಲ. ಸರಕಾರದ ಪರಿಹಾರವೂ ಕೈ ಸೇರಿಲ್ಲ ಎಂದು ಬೇಸರವನ್ನು ಹೊರ ಹಾಕಿದ್ದಾರೆ.ನನಗೆ ಬೇರೆ ಕೆಲಸ ಮಾಡಲಾಗುತ್ತಿಲ್ಲ. ನಾನು ಇನ್ನೂ ಆಟೋರಿಕ್ಷಾ ಓಡಿಸಬೇಕಿದೆ. ಆದರೆ ಕೈಯಲ್ಲಿ ಬಲವಿಲ್ಲ. 15 ವರ್ಷದವನಿರುವಾಗ ಉಜ್ಜೋಡಿ ಕೊರಗಜ್ಜ ಕ್ಷೇತ್ರದಲ್ಲಿ ಚಾಕರಿ ಆರಂಭಿಸಿ ಬಾಂಬ್‌ ಸ್ಫೋಟದ ದಿನದವರೆಗೂ ಮಾಡುತ್ತಿದ್ದೆ. ಆದರೆ ಸದ್ಯ ಅದ್ಯಾವುದೂ ಸಾಧ್ಯವಾಗುತ್ತಿಲ್ಲ. ಗಂಧದ ಹರಿವಾಣ ಹಿಡಿಯಲು ಕೂಡ ಆಗುತ್ತಿಲ್ಲ. ಕೊರಗಜ್ಜನ ಚಾಕರಿ ಮಾಡಿದ್ದರಿಂದ ಬದುಕಿದೆ. ಈಗಲೂ ಕ್ಷೇತ್ರಕ್ಕೆ ಹೋಗುತ್ತೇನೆ. ನನ್ನ ಕೈಯಿಂದ ಏನೂ ಮಾಡಲು ಆಗುವುದಿಲ್ಲ. ಅಲ್ಲೇ ಇದ್ದು ಇತರರಿಂದ ಮಾಡಿಸುತ್ತಿದ್ದೇನೆ. ಕೈಗೆ ಬಲ ಬರಲು ಇನ್ನೂ ವರ್ಷವಾದರೂ ಬೇಕಾಗಬಹುದು’ ಎನ್ನುತ್ತಾರೆ 61 ವರ್ಷದ ಪುರುಷೋತ್ತಮ ಅವರು. ಶಾಸಕ ವೇದವ್ಯಾಸ ಕಾಮತ್‌ ಹೊಸ ರಿಕ್ಷಾ ಕೊಡಿಸಿದ್ದರು. ಅದನ್ನು ಬಾಡಿಗೆಗೆ ನೀಡಿ ಸ್ವಲ್ಪ ಆದಾಯ ಗಳಿಸುತ್ತಿದ್ದೇನೆ. ಅಲ್ಲದೆ ಶಾಸಕರು 3 ಲ.ರೂ. ನೆರವು ನೀಡಿದ್ದಾರೆ. ಗುರುಬೆಳದಿಂಗಳು ಫೌಂಡೇಶನ್‌ನಿಂದ ಮನೆ ನವೀಕರಿಸಲಾಗಿದೆ. ಆದರೆ ಔಷಧ ಖರ್ಚು ಇದೆ. ಸ್ಫೋಟಕ್ಕೂ ಮೊದಲು ಮಗಳ ಮದುವೆ ನಿಶ್ಚಯವಾಗಿತ್ತು. ಆಸ್ಪತ್ರೆಯಿಂದ ಬಿಡುಗಡೆಯಾದ ಮೇಲೆ ವಿವಾಹವಾಗಿದೆ.

ಶಂಕಿತ ಉಗ್ರ ಮೊಹಮ್ಮದ್‌ ಶಾರೀಕ್‌ ಮೈಸೂರಿನ ತನ್ನ ಬಾಡಿಗೆ ಮನೆಯಲ್ಲಿ ಕುಕ್ಕರ್‌ ಬಾಂಬ್‌ ತಯಾರಿಸಿ ಮಂಗಳೂರಿನ ಕದ್ರಿ ಮಂಜುನಾಥ ಕ್ಷೇತ್ರದ ಬಳಿ ಸ್ಫೋಟಿಸುವ ಯೋಜನೆ ರೂಪಿಸಿದ್ದ. 2022ರ ನ.19ರಂದು ಬಸ್‌ನಲ್ಲಿ ಬಂದು ಪಡೀಲ್‌ನಲ್ಲಿ ಇಳಿದು ಪುರುಷೋತ್ತಮ ಪೂಜಾರಿ ಅವರ ಆಟೋ ಹತ್ತಿ ಪಂಪ್‌ವೆಲ್‌ಗೆ ಡ್ರಾಪ್‌ ಕೇಳಿದ್ದ.ಪಂಪ್‌ವೆಲ್‌ ತಲುಪುವ ಮೊದಲೇ ಬಾಂಬ್‌ ಸ್ಫೋಟವಾಗಿತ್ತು.ದಟ್ಟ ಹೊಗೆ ಆವರಿಸಿತ್ತು.ಇಬ್ಬರೂ ಗಂಭೀರವಾಗಿ ಗಾಯಗೊಂಡರು. ಆಸ್ಪತ್ರೆಯಲ್ಲಿ ಸಾವು ಬದುಕಿನಲ್ಲಿ ಹೋರಾಟ ನಡೆಸಿ ಬದುಕುಳಿದಿದ್ದ ಶಾರೀಕ್‌ನನ್ನು ಎನ್‌ಐಎ(ರಾಷ್ಟ್ರೀಯ ತನಿಖಾ ದಳ) ವಶಕ್ಕೆ ಪಡೆದುಕೊಂಡಿತ್ತು. ಅನಂತರ ಇದರ ಮಾಸ್ಟರ್‌ ಮೈಂಡ್‌ ಆಗಿದ್ದ ಅರಾಫ‌ತ್‌ ಆಲಿ ವಿದೇಶದಿಂದ ಭಾರತಕ್ಕೆ ಬರುತ್ತಿದ್ದಾಗ ಬಂಧಿಸಲಾಗಿತ್ತು. ಮೊಹಮ್ಮದ್‌ ಶಾರೀಕ್‌ ಕದ್ರಿ ದೇವಸ್ಥಾನಕ್ಕೆ ಬಾಂಬ್‌ ಇಡಲು ಬಂದಿದ್ದ ಎಂಬುದು ತನಿಖೆ ವೇಳೆ ತಿಳಿದು ಬಂತು.ಘಟನೆಯಿಂದಾಗಿ ಶಾರೀಕ್ ದೇಹಸ್ಥಿತಿ ಇಂದಿಗೂ ಸರಿ ಇಲ್ಲ ಆದರೆ ನಾನು ಕೊರಗಜ್ಜನ ದಯೆಯಿಂದ ಬದುಕಿದೆ. ದೇವರೇ ಅವನಿಗೆ ಶಿಕ್ಷೆ ನೀಡಿದ್ದಾರೆ ಎನ್ನುತ್ತಾರೆ ಪುರುಷೋತ್ತಮ ಪೂಜಾರಿಯವರು.

Related posts

ಭಯ ಹುಟ್ಟಿಸುವ ಉದ್ದೇಶದಿಂದಲೇ ಪ್ರವೀಣ್ ನೆಟ್ಟಾರ್ ಹತ್ಯೆ

ಮಂಗಳೂರು: ಕನ್ನಡ ಕಲಿಯುವಂತೆ ರೈಲ್ವೆ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆ ನೀಡಿದ ಕೇಂದ್ರ ಸಚಿವ..! ನಾನು ಚಿಕ್ಕವನಿದ್ದಾಗ ಹಿಂದಿ ಹೇರಿಕೆ ವಿರುದ್ಧ ಪ್ರತಿಭಟನೆ ನಡೆಸಿ ಜೈಲು ಪಾಲಾಗಿದ್ದೆ ಎಂದ ವಿ.ಸೋಮಣ್ಣ..!

ಕೊಡಗಿನ ಕುವರಿ , ನಟಿ ಪ್ರೇಮಾ ಕುಕ್ಕೇ ಸುಬ್ರಹ್ಮಣ್ಯಕ್ಕೆ ಭೇಟಿ