ಕರಾವಳಿ

ಮಂಗಳೂರು: ನಂತೂರು ಬಳಿ ಭೀಕರ ರಸ್ತೆ ಅಪಘಾತ!ಬಿಜೆಪಿ ನಾಯಕಿಯ ಮೊಮ್ಮಗ ಮೃತ್ಯು,ಸ್ನೇಹಿತನ ಮನೆಗೆ ದೈವದ ನೇಮಕ್ಕೆ ಹೋಗಿ ಮರಳುವಾಗ ದುರ್ಘಟನೆ

ನ್ಯೂಸ್‌ ನಾಟೌಟ್‌:ಮಂಗಳೂರಿನ ನಂತೂರು ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ.ಘಟನೆಯಲ್ಲಿ ಯುವಕನೋರ್ವ ದುರಂತ ಸಾವನ್ನಪ್ಪಿದ್ದಾನೆ.ಇಂದು ಮುಂಜಾನೆ ವೇಳೆಗೆ ಈ ದುರ್ಘಟನೆ ಸಂಭವಿಸಿದ್ದು, ಬಿಜೆಪಿ ನಾಯಕಿ ತೊಕ್ಕೊಟ್ಟಿನ ಲಲಿತಾ ಸುಂದರ್ ಅವರ ಮೊಮ್ಮಗ ಶಮಿತ್ ಶೆಟ್ಟಿ (30) ಮೃತರಾದವರು ಎಂದು ತಿಳಿದು ಬಂದಿದೆ.

ಸ್ನೇಹಿತನ ಮನೆಗೆ ದೈವದ ನೇಮಕ್ಕೆ ಹೋಗಿ ಮರಳುವಾಗ ಈ ದುರ್ಘಟನೆ ನಡೆದಿದೆ. ಮಂಗಳೂರು ರಾಷ್ಟ್ರೀಯ ಹೆದ್ದಾರಿ 66ರ ನಂತೂರಿನ ಬಳಿ ಕಾರು ನಿಯಂತ್ರಣ ತಪ್ಪಿ ವಿಭಜಕಕ್ಕೆ ಡಿಕ್ಕಿಯಾಗಿದೆ. ತೀವ್ರ ಗಾಯಗಳಿಂದಾಗಿ ಶಮಿತ್ ಶೆಟ್ಟಿ ಮೃತ ಪಟ್ಟಿದ್ದಾರೆ ಎಂದು ವರದಿಯಾಗಿದೆ.

Related posts

ಕುಂಬ್ರ: ಓವರ್‌ ಟೇಕ್ ಮಾಡುವ ಭರದಲ್ಲಿ ಆಂಬ್ಯುಲೆನ್ಸ್ ಗೆ ಗುದ್ದಿದ ಕಂಟೈನರ್..! 5 ಮಂದಿಗೆ ಗಾಯ..!

ಕೊಕ್ಕಡ: ಸಂಶಯಾಸ್ಪದ ರೀತಿಯಲ್ಲಿ ಯುವಕ ಸಾವು, ಚುರುಕುಗೊಂಡ ಪೊಲೀಸ್ ತನಿಖೆ

ಬಾಂಬರ್ ಶಾರಿಖ್ ಟಾರ್ಗೆಟ್ ಯಾರಾಗಿತ್ತು? ಎಲ್ಲಿ ಸ್ಫೋಟಿಸಲು ಪ್ಲಾನ್ ಮಾಡಿದ್ದ?