ಕ್ರೈಂದೇಶ-ಪ್ರಪಂಚ

ತರಕಾರಿ ಮಾರುಕಟ್ಟೆಯಲ್ಲಿ ಅಪ್ರಾಪ್ತ ಬಾಲಕನ ನಗ್ನ ಮೆರವಣಿಗೆ! ಬಾಲಕನಿಗೆ ಮುಳುವಾದ ಇಬ್ಬರ ನಡುವಿನ ಜಗಳ..!

ನ್ಯೂಸ್ ನಾಟೌಟ್: ರಾಜಸ್ಥಾನದ ಜೋಧ್‌ಪುರ ಜಿಲ್ಲೆಯ ತರಕಾರಿ ಮಾರುಕಟ್ಟೆಯಲ್ಲಿ ಅಪ್ರಾಪ್ತ ಬಾಲಕನನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಲಾದ ಆಘಾತಕಾರಿ ಘಟನೆಯೊಂದು ಬುಧವಾರ ಬೆಳಗ್ಗೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಲೋಡ್ ವಾಹನಗಳಿಗೆ ದಾರಿ ಮಾಡಿಕೊಡುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ತೀವ್ರ ವಾಗ್ವಾದ ನಡೆದಿದೆ ಎನ್ನಲಾಗಿದೆ. ಘಟನೆಯ ವಿಡಿಯೋ ಆನ್‌ಲೈನ್‌ನಲ್ಲಿ ಹರಿದಾಡಿದೆ, ಆರಂಭದಲ್ಲಿ, ಪೊಲೀಸರು ಎರಡೂ ಕಡೆಯ ಜನರ ವಿರುದ್ಧ ಶಾಂತಿ ಕದಡುವ ವಿಚಾರದಲ್ಲಿ ಪ್ರಕರಣವನ್ನು ದಾಖಲಿಸಿದರು ನಂತರ ಗಲಾಟೆ ವಿಕೋಪಕ್ಕೆ ತಿರುಗಿದೆ.

ಆದಾಗ್ಯೂ, ಅಪ್ರಾಪ್ತ ಬಾಲಕನನ್ನು ಬೆತ್ತಲೆಯಾಗಿ ಪರೇಡ್ ಮಾಡುವ ವಿಡಿಯೋ ಹೊರಬಿದ್ದ ನಂತರ, ಪೊಲೀಸರು ಆರೋಪಿಗಳ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಬುಧವಾರ ಬೆಳಿಗ್ಗೆ 23 ವರ್ಷದ ತರಕಾರಿ ಮಾರಾಟಗಾರ ಭುವನೇಶ್ ಮತ್ತು 24 ವರ್ಷದ ಅಸ್ಲಾಮ್ ನಡುವೆ ವಾಗ್ವಾದ ನಡೆದಿದೆ, ಪೊಲೀಸರ ಪ್ರಕಾರ, ಭುವನೇಶ್ ಬುಧವಾರ ಬೆಳಿಗ್ಗೆ ತರಕಾರಿಗಳನ್ನು ತನ್ನ ವಾಹನದಲ್ಲಿ ಮಾರುಕಟ್ಟೆಗೆ ತಲುಪಿಸಿದ್ದಾನೆ. ಅಸ್ಲಾಂ ತನ್ನ ಅಂಗಡಿಯ ಮುಂದೆ ನಿಲ್ಲಿಸಿದ್ದ ವ್ಯಾನ್‌ಗೆ ಲೋಡ್ ಮಾಡುತ್ತಿದ್ದುದನ್ನು ಕಾಣುತ್ತಾನೆ. ಭುವನೇಶ ಅಸ್ಲಂನನ್ನು ತನ್ನ ವಾಹನವನ್ನು ಪಕ್ಕಕ್ಕೆ ಸರಿಸಲು ಹೇಳಿದ ನಂತರ ಇಬ್ಬರ ನಡುವೆ ವಾಗ್ವಾದ ಶುರುವಾಗುತ್ತದೆ.

ಅಸ್ಲಾಂ ಭುವನೇಶ್‌ಗೆ ಕಪಾಳಮೋಕ್ಷ ಮಾಡಿದ ನಂತರ ವಿಷಯ ವಿಕೋಪಕ್ಕೆ ಹೋಗಿತ್ತು. ಮಾರುಕಟ್ಟೆಯಲ್ಲಿ ಜನ ಜಮಾಯಿಸಿದ್ದರು. ಈ ವೇಳೆ ಅಸ್ಲಾಂ ಜೊತೆಗಿದ್ದ ಅಪ್ರಾಪ್ತ ಬಾಲಕನನ್ನು ಸ್ಥಳೀಯ ಜನರು ಹಿಡಿದಿದ್ದಾರೆ. ನಂತರ ಜನರು ಹುಡುಗನನ್ನು ಥಳಿಸಿ ಮಾರುಕಟ್ಟೆಯಲ್ಲಿ ಅವನನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಲಾಗಿದೆ ಎಂದು ಮಾಹಿತಿ ದೊರೆತಿದೆ.

ಎರಡೂ ಗುಂಪುಗಳು ಪೊಲೀಸರನ್ನು ಸಂಪರ್ಕಿಸಿ ಪರಸ್ಪರ ಎಫ್‌ಐಆರ್‌ಗಳನ್ನು ದಾಖಲಿಸಿಕೊಂಡು, ಹೆಚ್ಚುವರಿ ತನಿಖೆ ನಡೆಸುತ್ತಿದ್ದಾರೆ.

Related posts

287 ಕೋಟಿ ರೂ. ಲಾಟರಿ ಗೆದ್ದ ವ್ಯಕ್ತಿ ದುರಂತ ಸಾವು, ಆಗಿದ್ದೇನು..?

ಲಾಡ್ಜ್ ನಲ್ಲಿ ಹಿಂದೂ ಯುವತಿ ಜತೆ ಅನ್ಯಕೋಮಿನ ಯುವಕ, ಬಜರಂಗ ದಳ ದಾಳಿ

Darshan Thoogudeepa: ದರ್ಶನ್‌ ಪ್ರಕರಣ: ಕಾನೂನಿಗಿಂತ ಯಾರು ದೊಡ್ಡವರಲ್ಲ ಎಂದ ದರ್ಶನ್ ಆಪ್ತ ವಿನೋದ್‌ ಪ್ರಭಾಕರ್..! ದಾಸನನ್ನು ಜೈಲಿನಲ್ಲಿ ಭೇಟಿಯಾದ ಗೆಳೆಯ..!