ರಾಜಕೀಯವಿಡಿಯೋವೈರಲ್ ನ್ಯೂಸ್

ಕ್ರಿಕೆಟ್ ಆಡಲು ಹೋದ ಶಾಸಕ ಬಿದ್ದದ್ದೇಗೆ..? ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ವೈರಲ್ ಆದ ಆ ಶಾಸಕ ಯಾರು? ಇಲ್ಲಿದೆ ವಿಡಿಯೋ

ನ್ಯೂಸ್ ನಾಟೌಟ್ : ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನೆ ಸಮಾರಂಭದ ವೇಳೆ ಕ್ರಿಕೆಟ್ ಅಡಿ ಪಂದ್ಯಾವಳಿ ಉದ್ಘಾಟಿಸುವ ವೇಳೆ ಶಾಸಕ ಮುಗ್ಗರಿಸಿ ಬಿದ್ದು ಗಾ* ಯ ಮಾಡಿಕೊಂಡ ಘಟನೆ ಸೋಮವಾರ(ಡಿ.25) ಒಡಿಶಾದ ಕಲಹಂಡಿ ಜಿಲ್ಲೆಯಲ್ಲಿ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬೆಲ್ಖಂಡಿ ಎಂಬಲ್ಲಿ ಆಯೋಜಿಸಲಾಗಿದ್ದ ಕ್ರೀಡಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರ ಉದ್ಘಾಟನೆಗೆ ಬಿಜು ಜನತಾ ದಳ (ಬಿಜೆಡಿ) ಶಾಸಕ ಭೂಪೇಂದ್ರ ಸಿಂಗ್ ರನ್ನು ಕರೆಯಲಾಗಿತ್ತು ಅದರಂತೆ ಶಾಸಕ ಕಾರ್ಯಕ್ರಮಕ್ಕೆ ಬಂದಿದ್ದು, ಈ ವೇಳೆ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದ ಸಲುವಾಗಿ ಕ್ರಿಕೆಟ್ ಆಡುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡುವ ಕ್ರಮ ಎಲ್ಲ ಕಡೆ ಸಾಮಾನ್ಯವಾಗಿ ಇರುವಂತೆ ಇಲ್ಲೂ ಶಾಸಕ ಬ್ಯಾಟ್ ಹಿಡಿದು ಕ್ರಿಕೆಟ್ ಆಡಲು ನಿಂತಿದ್ದರು.

ಈ ವೇಳೆ ಬೌಲರ್ ಹಾಕಿದ ಚೆಂಡನ್ನು ಹೊಡೆಯಲು ಹೋಗಿ ಶಾಸಕ ಭೂಪೇಂದ್ರ ಸಿಂಗ್ ಮುಂದೆ ಹೆಜ್ಜೆ ಹಿಡಿತಕ್ಕೆ ಸಿಗದೆ ಮುಗ್ಗರಿಸಿ ಬಿದ್ದಿದ್ದಾರೆ. ಈ ವೇಳೆ ಕೈ, ಕಾಲು, ತಲೆಗೆ ಗಾ * ಯಗಳಾಗಿವೆ ಎಂದು ವರದಿ ತಿಳಿಸಿದೆ. 72 ವರ್ಷದ ಸಿಂಗ್ ರನ್ನು ತಕ್ಷಣವೇ ಹತ್ತಿರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ.

https://newsnotout.com/2023/12/forest-department-trekking/

Related posts

ಉಡುಪಿ:ನಾಲ್ವರನ್ನು ಹತ್ಯೆ ಮಾಡಿದ ಆರೋಪಿಯ ರಹಸ್ಯ ಮಾಹಿತಿಗಳನ್ನು ಬಿಚ್ಚಿಟ್ಟ ಪೊಲೀಸ್ ತನಿಖಾಧಿಕಾರಿ ಹೇಳಿದ್ದೇನು? ಇಂಚಿಂಚೂ ಮಾಹಿತಿ ಹಂಚಿಕೊಂಡ ಎಸ್ಪಿ!

ಕಾರ್ಯಾಚರಣೆಯಿಂದ ಹಿಂದಿರುಗುತ್ತಿದ್ದ ಸೇನಾ ವಾಹನವನ್ನು ಸ್ಪೋಟಿಸಿದ ನಕ್ಸಲರು..! 9 ಯೋಧರು ಹುತಾತ್ಮ , ಹಲವು ಯೋಧರು ಆಸ್ಪತ್ರೆಗೆ ದಾಖಲು..!

Prajwal Revanna: ಪ್ರಜ್ವಲ್ ರೇವಣ್ಣ ಪ್ರಕರಣ: ರಾಹುಲ್ ಗಾಂಧಿ ವಿರುದ್ಧ ಜೆಡಿಎಸ್‌ ದೂರು..! ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ನೀಡಿದ ದೂರಿನಲ್ಲೇನಿದೆ..?