ಸುಳ್ಯ: ಹಿಂದೂ ಕಾರ್ಯಕರ್ತರು ಸುಳ್ಯದ ವಿವೇಕಾನಂದ ಸರ್ಕಲ್ ಬಳಿ ಅಕ್ರಮ ಗೋ ಸಾಗಾಟದ ಶಂಕೆಯ ಹಿನ್ನೆಲೆ ವಿಟ್ಲ ಮೂಲದ ಅಬ್ದುಲ್ ಕುಂಞಿ ಅವರಿಗೆ ಸೇರಿದ ಪಿಕ್ ಅಪ್ ಅನ್ನು ತಡೆದು ಸುಳ್ಯ ಪೋಲೀಸರಿಗೊಪ್ಪಿಸಿದ್ದಾರೆ. ಸದ್ಯ ಹಸುವನ್ನು ಸಾಕಲು ಮಂಡೆಕೋಲು ವಸಂತ ಎಂಬವರಿಂದ ಖರೀದಿಸಿದ್ದೆ ಎಂದು ಅಬ್ದುಲ್ ಕುಂಞ ಹೇಳಿಕೆ ನೀಡಿದ್ದಾರೆ. ಇದಕ್ಕೆ ಸುಳ್ಯ ಪೊಲೀಸರು ದನ ಸಾಗಾಟಕ್ಕೆ ಪರ್ಮಿಶನ್ ಮಾಡಿಸಿ ಬಳಿಕ ತೆಗೆದುಕೊಂಡು ಹೋಗಿ ಎಂದು ಸೂಚಿಸಿ, ಬಿಟ್ಟು ಕಳುಹಿಸಿದ್ದಾರೆ ಎನ್ನಲಾಗಿದೆ.