ಸುಳ್ಯ: ನಗರದಲ್ಲಿ ಒಂದು ಮಳೆ ಬಂದರೆ ವಿದ್ಯುತ್ ಕೈಕೊಡುತ್ತದೆ. ಶುಕ್ರವಾರ ಸಂಜೆ ಮಳೆ ಬಂದಿದ್ದು ವಿದ್ಯುತ್ ನಾಪತ್ತೆಯಾಗಿದೆ. ಯಾಕೆ ಹೀಗೆ ಪದೆ ಪದೇ ಆಗುತ್ರಿದೆ ಎಂಬುದಕ್ಕೆ ಉತ್ತರವೇ ಇಲ್ಲದಾಗಿದೆ. ಸುಳ್ಯದ ವಿದ್ಯುತ್ ಸಮಸ್ಯೆ ಹಾಗೂ ಗ್ರಾಮೀಣ ಭಾಗದ ದೂರವಾಣಿ ನೆಟ್ ವರ್ಕ್ ಸಮಸ್ಯೆ ಪರಿಹಾರ ಕಾಣಲು ಇನ್ನೇಷ್ಟು ವರ್ಷ ಬೇಕು ಎಂದು ಪ್ರಶ್ನೆ ಮಾಡುತ್ತಿದ್ದಾರೆ.ವಿದ್ಯುತ್ ಕೈಕೊಟ್ಟ ಕೂಡಲೇ ನೆಟ್ ವರ್ಕ್ ಮಾಯವಾಗುತ್ತದೆ ಸುಳ್ಯ ತಾಲೂಕಿನ ಗಂಭೀರ ಮೂಲಭೂತ ಸಮಸ್ಯೆಯಾಗಿ ಉಳಿದುಕೊಂಡಿದ್ದು ಆಡಳಿತ ವಹಿಸಿಕೊಂಡವರು ಮೌನವಾಗಿರುವುದು ಸಮಸ್ಯೆಯನ್ನು ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆ.