ಪುತ್ತೂರು: ಕಲ್ಲುಗುಂಡಿಯ ಸಂಪತ್ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಆರೋಪಿಗಳಲ್ಲಿ ಐದನೇ ಆರೋಪಿಯಾಗಿ ಗುರುತಿಸಿಕೊಂಡಿದ್ದ ಶಿಶಿರ್ ಗೆ ನ್ಯಾಯಾಲಯವು ಜಾಮೀನು ಮಂಜೂರುಗೊಳಿಸಿದೆ. ಅ.29 ರಂದು ಐದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಮತ್ತು ಸತ್ರ ನ್ಯಾಯಾಲಯ ಪುತ್ತೂರು, ಹೈಕೋರ್ಟ್ ಆದೇಶದಂತೆ ಎರಡು ಜನ ಜಾಮೀನುದಾರರನ್ನು ಪಡೆದುಕೊಂಡು ಆರೋಪಿಗೆ ಜಾಮೀನು ಮಂಜೂರುಗೊಳಿಸಿದೆ. ಆರೋಪಿ ಶಿಶಿರ್ ಪರವಾಗಿ ಬೆಂಗಳೂರಿನ ನ್ಯಾಯವಾದಿ ನಿಶಿತ್ ಕುಮಾರ್ ಶೆಟ್ಟಿ ಹಾಗೂ ಪುತ್ತೂರಿನ ನ್ಯಾಯವಾದಿಗಳಾದ ವಿನಯ್ ಯಸ್.ಕೆ. ಸೋಣಂಗೇರಿಯವರು ವಾದಿಸಿದ್ದಾರೆ.