ಕರಾವಳಿದೇಶ-ಪ್ರಪಂಚ

ಅಬ್ಬಾಬ್ಬ.. ಒಂದಲ್ಲ ಎರಡಲ್ಲ ನಾಲ್ಕು ಕರುಗಳಿಗೆ ಜನ್ಮ ನೀಡಿದ ಹಸು!,’ವೈರಲ್ ಆಕಳ’ನ್ನು ನೋಡೋದಕ್ಕೆ ಜನವೋ ಜನ!

ನ್ಯೂಸ್ ನಾಟೌಟ್ :ಸಾಮಾನ್ಯವಾಗಿ ಹಸುಗಳು ಎರಡು ಕರುಗಳಿಗೆ ಮೂರು ಕರುಗಳಿಗೆ ಜನ್ಮ ನೀಡಿರುವುದನ್ನು ನೀವು ಕೇಳಿದ್ದೀರಿ.ಆದರೆ ಇಲ್ಲೊಂದು ಕಡೆ ಹಸುವೊಂದು ನಾಲ್ಕು ಕರುಗಳಿಗೆ ಜನ್ಮ ನೀಡಿದ ಅಚ್ಚರಿಯ ಘಟನೆ ವರದಿಯಾಗಿದೆ.

ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಚೇಳೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು,ಮುನಿಯಪ್ಪ ಎಂಬುವವರಿಗೆ ಸೇರಿದ ಆಕಳು ಎಂದು ತಿಳಿದು ಬಂದಿದೆ.ಇದು ಏಕಕಾಲದಲ್ಲಿ ನಾಲ್ಕು ಕರುಗಳಿಗೆ ಜನ್ಮ ನೀಡಿದ್ದು ವಿಶೇಷವೆಂಬಂತಿದೆ. ನಾಲ್ಕರ ಪೈಕಿ ಮೂರು ಗಂಡು ಹಾಗೂ ಒಂದು ಹೆಣ್ಣು ಕರುವಿಗೆ ಹಸು ಜನ್ಮ ನೀಡಿದೆ ಎಂದು ವರದಿಯಾಗಿದೆ.

ತಾಯಿ ಹಾಗೂ ನಾಲ್ಕು ಕರುಗಳ ಆರೋಗ್ಯದಿಂದಿವೆ ಎಂದು ತಿಳಿದು ಬಂದಿದೆ.ಇದೀಗ ನಾಲ್ಕು ಕರುಗಳನ್ನು ನೋಡೋದಕ್ಕೆ ಬೇರೆ ಬೇರೆ ಗ್ರಾಮಗಳಿಂದ ಹಾಗೂ ಸುತ್ತಮುತ್ತಲಿನ ಜನ ಆಗಮಿಸುತ್ತಿದ್ದಾರೆ. ಒಟ್ಟಿನಲ್ಲಿ ಈ ಸುದ್ದಿ ಎಲ್ಲೆಡೆ ವೈರಲ್ ಆಗಿದ್ದು ಈ ಹಸು ಹಾಗೂ ಕರುಗಳನ್ನು ನೋಡೋದಕ್ಕೆ ಜನ ಊರ – ಪರವೂರಿನಿಂದ ಆಗಮಿಸುತ್ತಿದ್ದಾರೆ ಅನ್ನೋದು ವಿಶೇಷ.

Related posts

ನಟಿ ರಶ್ಮಿಕಾ ಮಂದಣ್ಣ ಡೀಪ್ ಫೇಕ್‌ ವಿಡಿಯೋ ಪ್ರಕರಣ; 19ನೇ ವರ್ಷದ ಯುವಕನಿಂದ ಕೃತ್ಯ?ದೆಹಲಿ ಪೊಲೀಸರಿಂದ ವಿಚಾರಣೆ

ವ್ಯಕ್ತಿ ನಿಗೂಢ ಸಾವು ಪ್ರಕರಣ: ಓರ್ವ ಪೊಲೀಸ್ ವಶಕ್ಕೆ

ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್‌ಗೆ ಮಂಗಳೂರಲ್ಲಿ ಚಿಕಿತ್ಸೆ