ಕೊಡಗು

ಕೊಡಗು: ಮೇಯಲು ಬಿಟ್ಟ ಹಸುಗಳನ್ನು ಗುಂಡಿಟ್ಟು ಕೊಂದ ಪಾಪಿ

ನ್ಯೂಸ್ ನಾಟೌಟ್: ಇಲ್ಲೊಬ್ಬ ರಾಕ್ಷಸ ತನ್ನ ರಾಕ್ಷಸಿ ಪ್ರವೃತ್ತಿಯನ್ನು ಹಸುಗಳ ಮೇಲೆ ತೋರಿಸಿದ್ದಾನೆ. ಹಸುಗಳು ತನ್ನ ಎಸ್ಟೇಟ್‌ ಗೆ ಮೇಯಲು ನುಗ್ಗಿದವು ಅನ್ನುವ ಕಾರಣಕ್ಕೆ ನಿರ್ದಯವಾಗಿ ಗುಂಡಿಟ್ಟು ಕೊಂದಿದ್ದಾನೆ.

ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಗುಹ್ಯ ಗ್ರಾಮದಲ್ಲಿ ಮೂರು ಹಸುಗಳು ಹುಲ್ಲು ಮೇಯುತ್ತಾ, ನರೇಂದ್ರ ನಾಯ್ಡು ಎಂಬುವವರ ಎಸ್ಟೇಟ್ಗೆ ನುಗ್ಗಿದ್ದವು. ಇದರಿಂದ ಕೋಪಗೊಂಡ ಆತ ತನ್ನ ಬಂದೂಕಿನಿಂದ ಗುಂಡಿಟ್ಟು ಸಾಯಿಸಿದ್ದಾನೆ ಎಂದು ಸಿಕೆ ಮಣಿ ಅನ್ನುವವರು ಆರೋಪಿಸಿದ್ದಾರೆ. ಸದ್ಯ ಒಂದು ಹಸು ಬದುಕಿದ್ದು ಇನ್ನುಳಿದ ಎರಡು ಹಸುಗಳು ಸಾವಿಗೀಡಾಗಿವೆ. ಸಿ.ಕೆ.ಮಣಿ ಹಲವು ಹಸುಗಳನ್ನು ಸಾಕಿದ್ದಾರೆ. ಇವರು ಹಾಲು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಇವರ ಮೂರು ಹಸುಗಳನ್ನು ಮೇಯಲು ಹೊರಗೆ ಬಿಟ್ಟಿದ್ದರು. ಮೇಯುತ್ತಾ ಹೋದ ಹಸುಗಳಲ್ಲಿ ಒಂದು ಹಸು ಮಾತ್ರ ಮನೆಗೆ ಹಿಂದಿರುಗಿದೆ. ಬರುವಾಗ ಅದಕ್ಕೂ ಗಂಭೀರ ಗಾಯವಾಗಿತ್ತು. ಅದಕ್ಕೆ ಚಿಕಿತ್ಸೆ ನೀಡಿ ಉಳಿದ ಹಸುಗಳನ್ನು ಹುಡುಕುತ್ತಾ ಮಣಿ ಹೊರಟಿದ್ದಾರೆ. ಆಗ ನರೇಂದ್ರ ನಾಯ್ಡು ಒಡೆತನದ ಎಸ್ಟೇಟ್ ನಲ್ಲಿ ಹಸುಗಳ ದೇಹ ಪತ್ತೆಯಾಗಿದೆ.

Related posts

ತಡರಾತ್ರಿ ಸುಳ್ಯದಲ್ಲಿ ಮಡಿಕೇರಿ ಮೂಲದ ವ್ಯಕ್ತಿಯ 3.5 ಲಕ್ಷ ರೂ. ದರೋಡೆ..! ಆಟೋ ರಿಕ್ಷಾ ಏರಿದವನಿಗೆ ಆಪತ್ತು ಎದುರಾಗಿದ್ದು ಹೇಗೆ..?

ಕೊಡಗಿನಲ್ಲಿ ಮತ್ತೆ ವ್ಯಾಪಕವಾಗಿ ಹರಡಿದ ಕಾಡ್ಗಿಚ್ಚು

ಪೆರಾಜೆ: ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರ ಆಯ್ಕೆ, ಶಕ್ತಿ ಕೇಂದ್ರದ ಸಭೆಯಲ್ಲಿ ರಚನೆಯಾದ ಹೊಸ ತಂಡದಲ್ಲಿ ಯಾರೆಲ್ಲ ಇದ್ದಾರೆ..?