ಸುಳ್ಯ

ಸುಳ್ಯ: ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದಲ್ಲಿ ಸಂವಿಧಾನ ದಿನಾಚರಣೆ

ನ್ಯೂಸ್‌ ನಾಟೌಟ್‌: ಸುಳ್ಯದ ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದಲ್ಲಿ ಸೋಮವಾರ (ನ.27ರಂದು) ಸಂವಿಧಾನ ದಿನವನ್ನು ಆಚರಿಸಲಾಯಿತು.

ಕಾಲೇಜಿನ ಪ್ರಾಂಶುಪಾಲ ಪ್ರೊ. ಉದಯಕೃಷ್ಣ ಬಿ. ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಸುಳ್ಯ ಶ್ರೀ ಶಾರದ ಮಹಿಳಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ದಾಮೋದರ ಎನ್. ಕಾಲೇಜಿನ ಸಂವಿಧಾನ ರಚನೆಯ ಚರಿತ್ರೆ, ಮಹತ್ವದ ಕುರಿತು ಮಾತನಾಡಿದರು. ಕಾಲೇಜಿನ ಎನ್.ಎಸ್‌.ಎಸ್ ಅಧಿಕಾರಿ ಕಲಾವತಿ ಎಂ. ಹಾಗೂ ಕಾನೂನು ನೆರವು ಸಮಿತಿಯ ಸಂಯೋಜಕಿ ನಯನಾ ಪಿ.ಯು. ಉಪಸ್ಥಿತರಿದ್ದರು. ಕಲಾವತಿ ಸ್ವಾಗತಿಸಿ, ನಯನಾ ಪಿ.ಯು. ವಂದಿಸಿದರು. ಉಪನ್ಯಾಸಕ ರಂಜನ್ ಕೆ.ಎನ್. ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ, ಬೋಧಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

ಸಾಣೂರು ಕೆರೆಗೆ ಜೀವ ತುಂಬಿದ ಕಾರ್ಕಳದ ಜನಪ್ರಿಯ ನಾಯಕ

ಕುಂಬಕೋಡು: ಕಾರು ಮತ್ತು ಬೈಕ್ ನಡುವೆ ಅಪಘಾತ..! ಬೈಕ್ ಸವಾರನಿಗೆ ಗಾಯ..!

ಅರಂತೋಡು: ತೀವ್ರ ಅನಾರೋಗ್ಯಕ್ಕೀಡಾದ ಎರಡು ಪುಟ್ಟ ಮಕ್ಕಳ ತಾಯಿ..!, ಸಹಾಯಕ್ಕಾಗಿ ಮನವಿ