ನ್ಯೂಸ್ ನಾಟೌಟ್: ʻಕಾಮಿಡಿ ಕಿಲಾಡಿʼಯೆಂದೇ ಖ್ಯಾತಿಯನ್ನ ಪಡೆದ ಶಿವರಾಜ್ ಕೆ.ಆರ್. ಪೇಟೆ(Shivaraj K R Pete) ವಿರುದ್ಧ ಆರೋಪವೊಂದು ಕೇಳಿ ಬಂದಿದೆ. ಮಹಿಳೆಯೊಬ್ಬರನ್ನು ನಿಂದಿಸಿ, ಅವಾಚ್ಯ ಪದವನ್ನು ಬಳಸಿದ್ದಾರೆ (Misbehavior with women) ಎಂಬ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ. ಈ ಬಗ್ಗೆ ಶಾರದಾ ಬಾಯಿ ಎಂಬುವರು ಸುಬ್ರಮಣ್ಯನಗರ ಠಾಣೆಗೆ ದೂರು ನೀಡಿದ್ದು, ಈ ಘಟನೆ ಮಾರ್ಚ್ 30ರ ರಾತ್ರಿ ನಡೆದಿದೆ ಎನ್ನಲಾಗಿದೆ.
ʻʻನಾನು ಕೆಲಸ ಮುಗಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಮನೆಗೆ ವಾಪಸ್ ಬರುತ್ತಿದ್ದೆ. ಆಗ ರಾಜ್‌ಕುಮಾರ್ ರಸ್ತೆ 10ನೇ ಕ್ರಾಸ್‌ನ ಹಿಂಭಾಗದ ಪೆಟ್ರೋಲ್ ಬಂಕ್ ಹತ್ತಿರ ಶಿವರಾಜ್ ಕೆಆರ್ ಪೇಟೆ ಅವರು ಕಾರನ್ನು ತಂದು ನನ್ನ ವಾಹನಕ್ಕೆ ಟಚ್ ಮಾಡಿದರು. ಕಾರಿನಲ್ಲಿ ಶಿವರಾಜ್ ಕೆಆರ್ ಪೇಟೆ ಹಾಗೂ ಅವರ ಸ್ನೇಹಿತರು ಇದ್ದರು. ನನ್ನ ವಾಹನಕ್ಕೆ ಕಾರ್ ಟಚ್ ಮಾಡಿ ʻಯಾವಳೆ ನೀನು? ಅಲ್ಲಾಡಿಸಿಕೊಂಡು ಹೋಗ್ತಿಯಾ! ಎಂದು ಅವಾಚ್ಯ ಪದ ಬಳಸಿ ನಿಂದನೆ ಮಾಡಿದ್ದಾರೆʼʼ ಎಂದು ದೂರು ನೀಡಿದ್ದಾರೆ. ಹಾಗೇ ಶಿವರಾಜ್ ಕೆ ಆರ್ ಪೇಟೆ, ಕಾರಿನ ಮಾಲೀಕ ಮತ್ತು ಸ್ನೇಹಿತರನ್ನು ಕರೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸುಬ್ರಮಣ್ಯನಗರ ಠಾಣೆಗೆ ಮಹಿಳೆ ದೂರು ನೀಡಿದ್ದಾರೆ. ಇದೀಗ ಶಿವರಾಜ್ ಕೆಆರ್ ಪೇಟೆ ಅವರನ್ನು ಪೊಲೀಸರು ಠಾಣೆಗೆ ಕರೆಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇವರೋರ್ವ ಪ್ರಮುಖ ಹಾಸ್ಯ ನಟ. ತಮ್ಮ ಹಾಸ್ಯ ಅಭಿನಯದಿಂದ ಚಿತ್ರಗಳಲ್ಲಿ ಮತ್ತು ಕಾರ್ಯಕ್ರಮಗಳಲ್ಲಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುವ ಕಲಾವಿದ. ಕಾಮಿಡಿ ಕಿಲಾಡಿ ಕಾರ್ಯಕ್ರಮದಿಂದ ಪ್ರಖ್ಯಾತಿ ಪಡೆದರು. ತಂದೆಯ ಮಾರ್ಗದರ್ಶನದಲ್ಲಿ ಚಿಕ್ಕವರಿದ್ದಾಗ ನಾಟಕದಲ್ಲಿ ಅಭಿನಯ ಸೇರಿದಂತೆ ಮಿಮಿಕ್ರಿ, ಡ್ಯಾನ್ಸ್ ಕಾರ್ಯಕ್ರಮದಲ್ಲೂ ಮುಂಚೂಣಿಯಲ್ಲಿದ್ದರು.