ಕ್ರೈಂ

ಹಿರಿಯ ಚಲನಚಿತ್ರ ನಟ ಎಸ್. ಶಿವರಾಂ ಇನ್ನಿಲ್ಲ

ಬೆಂಗಳೂರು: ಚಂದನವನದ ಹಿರಿಯ ನಟರಾಗಿದ್ದ ಎಸ್. ಶಿವರಾಂ (83) ಅವರು ಶನಿವಾರ ಮಧ್ಯಾಹ್ನ ಬೆಂಗಳೂರಿನ ಪ್ರಶಾಂತ್ ಆಸ್ಪತ್ರೆಯಲ್ಲಿ ನಿಧನರಾದರು.

ಕಳೆದ ನಾಲ್ಕು ದಿನಗಳ ಹಿಂದೆ ಮನೆಯಲ್ಲಿ ಅಯ್ಯಪ್ಪ ಸ್ವಾಮಿ ಪೂಜೆ ಮಾಡುತ್ತಿದ್ದಾಗ ಶಿವರಾಂ ಕುಸಿದುಬಿದ್ದಿದ್ದರು. ಮಿದುಳು ಸಂಕುಚಿತಗೊಂಡಿರುವುದರಿಂದ ಮತ್ತು ವಯಸ್ಸಿನ ಕಾರಣದಿಂದ ಶಸ್ತ್ರಚಿಕಿತ್ಸೆ ಅಸಾಧ್ಯ ಎಂದು ವೈದ್ಯರು ಹೇಳಿದ್ದರು.1938 ಜನವರಿ 28 ರಂದು ಬೆಂಗಳೂರಿನ ಚೂಡಸಂದ್ರದಲ್ಲಿ ಜನಿಸಿದ್ದ ಶಿವರಾಂ, ಕನ್ನಡ ಚಿತ್ರರಂಗದಲ್ಲಿ ಪೋಷಕ, ಹಾಸ್ಯ ಪಾತ್ರದಲ್ಲಿ ಸುಮಾರು 6 ದಶಕಗಳ ಕಾಲ ಜನಮನ ರಂಜಿಸಿದ್ದರು. ಅವರು ಕಿರುತೆರೆಯ ಕಾರ್ಯಕ್ರಮಗಳಲ್ಲೂ ನಟಿಸಿದ್ದರು.

1965 ರಲ್ಲಿ ಬೆರೆತ ಜೀವ ಸಿನಿಮಾ ಮೂಲಕ ಶಿವರಾಂ ಚಿತ್ರರಂಗ ಪ್ರವೇಶಿಸಿದ್ದರು. ಡಾ. ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಷ್ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕ ಸ್ಟಾರ್ ನಟರ ಜೊತೆ ಶಿವರಾಂ ಬಣ್ಣ ಹಚ್ಚಿದ್ದರು.ಕರ್ನಾಟಕ – ತಮಿಳುನಾಡು ಗಡಿಭಾಗದ ಪುಟ್ಟಹಳ್ಳಿ ಚೂಡಸಂದ್ರ. ಪ್ರಾಥಮಿಕ ಶಿಕ್ಷಣ ಮುಗಿದ ಬಳಿಕ ಅವರನ್ನು ಸೆಳೆದದ್ದು ಬೆಂಗಳೂರು. ಸಹೋದರನೊಂದಿಗೆ ಬೆಂಗಳೂರು ಸೇರಿದರು. ಅವರಿಗೆ ಪ್ರಭಾವ ಬೀರಿದ್ದು ಗುಬ್ಬಿ ವೀರಣ್ಣ ಅವರ ನಾಟಕಗಳು. ಮುಂದೆ ಇದೇ ಅವರ ಬದುಕಿನ ದಿಕ್ಕು ಬದಲಾಯಿಸಿ ಬೆಳ್ಳಿ ತೆರೆಯತ್ತ ಕರೆದೊಯ್ದಿತು. 1958 ಅವರ ಬಣ್ಣದ ಬದುಕಿಗೆ ತಿರುವು ನೀಡಿದ ವರ್ಷ. ಆ ವರ್ಷ ನಿರ್ದೇಶಕ ಕು.ರಾ. ಸೀತಾರಾಮಶಾಸ್ತ್ರಿ ಅವರ ಸಹಾಯಕರಾಗಿ ಶಿವರಾಂ ಕೆಲಸ ಮಾಡುತ್ತಿದ್ದರು. ಅವರದೇ ನಿರ್ದೇಶನ, ನಿರ್ಮಾಣದ ಚಿತ್ರ ಬೆರೆತ ಜೀವದಲ್ಲಿ ಬಣ್ಣ ಹಚ್ಚಿದರು. ಅಲ್ಲಿಂದ ಈವರೆಗೆ ಸುಮಾರು 6 ದಶಕಗಳು ಕಳೆದಿವೆ. 86 ಚಿತ್ರಗಳಲ್ಲಿ ಅವರ ನಟನೆಯಿದೆ. ಧಾರಾವಾಹಿಗಳೂ ಸಾಕಷ್ಟಿವೆ. ಕ್ಯಾಮೆರಾ ಸಹಾಯಕ, ಸಹಾಯಕ ನಿರ್ದೇಶಕ, ನಿರ್ದೇಶಕ, ನಟ, ನಿರ್ಮಾಪಕರಾಗಿ ಅವರು ಚಂದನವನದ ನಿಜ ಅರ್ಥದ ‘ಪೋಷಕ’ರಾಗಿಯೇ ಹಿರಿತನ ಮೆರೆದರು .

Related posts

ಸಿಎಂ ಸಿದ್ದರಾಮಯ್ಯಗೆ ರಾಜೀನಾಮೆ ಪತ್ರ ನೀಡಿದ ಸಚಿವ ನಾಗೇಂದ್ರ..! ವಾಲ್ಮೀಕಿ ನಿಗಮದ ಅವ್ಯವಹಾರ ನಿಜವೆಂದು ಒಪ್ಪಿಕೊಂಡರಾ..?

ಗೂನಡ್ಕ: ಬೆತ್ತಲೆಯಾಗಿ ರಾಷ್ಟ್ರೀಯ ಹೆದ್ದಾರಿಯಲ್ಲೆಲ್ಲಾ ಓಡಾಡಿದ ಯುವಕ..! ಗಾಬರಿಯಾದ ಜನ..!

ದಂಪತಿಯಿಂದ ನಿಗೂಢ ಕಲೆಗಳ ಅಭ್ಯಾಸದ ಶಂಕೆ! ಮರಕ್ಕೆ ನೇತು ಹಾಕಿ ಬೆತ್ತದಿಂದ ಹೊಡೆದ ಗ್ರಾಮಸ್ಥರು! ಏನಿದು ವಿಚಿತ್ರ ಘಟನೆ?