ಕ್ರೀಡೆ/ಸಿನಿಮಾ

‘ಸೆಮಿಫೈನಲ್​ಗಿಂತಲೂ ಫೈನಲ್‌ಗೆ ದುಬಾರಿ ಬಟ್ಟೆ ಹಾಕಿದ್ದರೆ ಭಾರತ ಗೆಲ್ಲುತ್ತಿತ್ತು’ ಎಂದು ನೆಟ್ಟಿಗರು ಹೇಳಿದ್ದೇಕೆ? ಸಿಂಪಲ್ ಆಗಿ ಕಾಣಿಸಿದ್ದ ಅನುಷ್ಕಾ ಶರ್ಮ ಡ್ರೆಸ್‌ ಬೆಲೆ ಇಷ್ಟೊಂದು ದುಬಾರಿನಾ?

ನ್ಯೂಸ್ ನಾಟೌಟ್ :ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಫೈನಲ್​ ಪಂದ್ಯ ಮುಗಿದಿದೆ.ಆದರೆ ಭಾರತದ ಸೋಲಿನ ನೋವಿನಿಂದ ಹಲವರು ಇಂದಿಗೂ ಹೊರಬಂದಿಲ್ಲ.ಪಂದ್ಯದ ಸೋಲಿಗೆ ಕಾರಣವೇನು? ಎನ್ನುತ್ತಾ ಹಲವು ರೀತಿಯಲ್ಲಿ ವಿಶ್ಲೇಷಣೆಗಳ ಮೂಲಕ ಉತ್ತರ ಕಂಡುಕೊಳ್ಳುವ ಪ್ರಯತ್ನಗಳು ನಡಿತಿವೆ. ಈ ಮಧ್ಯೆ ವಿರಾಟ್ ಪತ್ನಿ ಅನುಷ್ಕಾ ಶರ್ಮಾ ಅವರು ಧರಿಸಿದ್ದ ಡ್ರೆಸ್ ಬಗ್ಗೆ ಭಾರಿ ಚರ್ಚೆಗಳು ನಡಿತಿವೆ.ನೋಡೋದಕ್ಕೆ ಸಿಂಪಲ್ ಆಗಿ ಕಾಣುತ್ತಿರುವ ಈ ಡ್ರೆಸ್‌ಗೆ ಇಷ್ಟೊಂದು ಬೆಲೆ ಇದೆಯಾ ಎಂದು ಅಚ್ಚರಿ ಸೂಚಿಸುತ್ತಿದ್ದಾರೆ.

ಫೈನಲ್ಸ್​ನಲ್ಲಿ ವಿರಾಟ್‌ ಕೊಹ್ಲಿ ಅರ್ಧಶತಕ ಸಿಡಿಸಿದ ಬಳಿಕ ಅವರ ಬಗ್ಗೆ ಹೆಚ್ಚು ನಿರೀಕ್ಷೆ ಹುಟ್ಟುಹಾಕಿತ್ತು.ಇಷ್ಟಾಗುತ್ತಿದ್ದಂತೆಯೇ ಕ್ಯಾಮೆರಾ ಕಣ್ಣು ಅನುಷ್ಕಾ ಶರ್ಮಾ ಅವರ ಮೇಲೆ ಸಹಜವಾಗಿ ಬಿದ್ದಿತ್ತು. ಆ ಸಮಯದಲ್ಲಿ ಎಲ್ಲರ ಕಣ್ಣು ಅವರ ಡ್ರೆಸ್​ ಮೇಲೆ ಬಿದ್ದದ್ದಂತೂ ಸುಳ್ಳಲ್ಲ. ನೀಲಿ ಮತ್ತು ಬಿಳಿ ಬಣ್ಣದ ಡ್ರೆಸ್​​ನಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದ ಅನುಷ್ಕಾ ಶರ್ಮ ಸಿಂಪಲ್​ ಆಗಿ ಕಾಣಿಸಿಕೊಂಡಿದ್ದರೂ ಈ ಬಟ್ಟೆಯ ರೇಟ್​ ಎಷ್ಟು ಇರಬಹುದು ಎಂದು ಭಾರಿ ಚರ್ಚೆ ಮಾಡುತ್ತಿದ್ದರು.ಈ ಫೈನಲ್ ಮ್ಯಾಚ್‌ಗೂ ಮುನ್ನ ಸೆಮಿ ಫೈನಲ್​ ಮ್ಯಾಚ್​ನಲ್ಲಿ ನ್ಯೂಜಿಲೆಂಡ್​ ವಿರುದ್ಧ ಭಾರತ ಕಣಕ್ಕೆ ಇಳಿದಿತ್ತು. ಆಗ ವಿರಾಟ್​ ಕೊಹ್ಲಿ ಅವರು 117 ರನ್​ ಗಳಿಸಿದ್ದರು. ಅತ್ತ ಅವರ ಭರ್ಜರಿ ಆಟದ ಬಗ್ಗೆ ಚರ್ಚೆಯಾಗುತ್ತಿದ್ದರೆ, ಇತ್ತ ಆಗಲೂ ಸ್ಟೇಡಿಯಂಗೆ ಬಂದಿದ್ದ ಅನುಷ್ಕಾ  ಶರ್ಮಾರ ಬಟ್ಟೆಯ ಚರ್ಚೆ ಆಗುತ್ತಿತ್ತು. ಕೊನೆಗೂ ಅವರ ತೊಟ್ಟ ಬಟ್ಟೆಯ ಬೆಲೆ ರಿವೀಲ್​ ಆಗಿ ಫ್ಯಾನ್ಸ್​ ಹುಬ್ಬೇರಿಸಿದ್ದರು. ಬಿಳಿ ಬೇಸ್ ಶರ್ಟ್ ಮೇಲೆ ಡಾರ್ಕ್ ಹಸಿರು ಬಣ್ಣದ ಹೂವಿನ ಪ್ರಿಂಟ್ ಇತ್ತು.ಈ ಫ್ಲೋರಲ್ ಪ್ರಿಂಟ್ ಗಾತ್ರದ ಶರ್ಟ್ ಬೆಲೆ 19,500 ರೂಪಾಯಿ ಬೆಲೆ ಎಂದು ಕಂಡುಹಿಡಿದಿದ್ದರು ಅಭಿಮಾನಿಗಳು.ನೋಡಲು ತುಂಬಾ ಸಿಂಪಲ್​ ಎಂದುಕೊಂಡಿದ್ದ ಈ ಡ್ರೆಸ್​ಗೆ ಇಷ್ಟೆಲ್ಲಾ ಬೆಲೆನಾ ಎಂದುಕೊಂಡಿದ್ದರು.

ಸೆಮಿ ಫೈನಲ್​ಗೇ ಇಷ್ಟು ದುಬಾರಿ ಬೆಲೆಯ ಡ್ರೆಸ್​ ಹಾಕಿರುವಾಗ ಫೈನಲ್​ಗೆ ಇನ್ನೂ ಬೆಲೆ ಬಾಳುವ ಡ್ರೆಸ್​ ಹಾಕಬಹುದು ಎಂದೇ ಅನುಷ್ಕಾ ಫ್ಯಾನ್ಸ್​ ಅಂದುಕೊಂಡಿದ್ದರು. ಆದರೆ ಅವರ ನಿರೀಕ್ಷೆ ಹುಸಿಯಾಗಿದೆ. ನೀಲಿ ಮತ್ತು ಬಿಳಿ ಬಣ್ಣದ ಡ್ರೆಸ್​​ನಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದ ಅನುಷ್ಕಾ ಅವರು ಫೈನಲ್​ನಲ್ಲಿ ಹಾಕಿರುವ ಡ್ರೆಸ್​ ಬೆಲೆ 7,250. ಅನುಷ್ಕಾ ಧರಿಸಿರುವ ವಸ್ತ್ರವು ಸ್ವದೇಶಿ ಲೇಬಲ್ ನಿಕೋಬಾರ್‌ನಿಂದ ಬಂದಿದ್ದು ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ ಫ್ಯಾನ್ಸ್​. ಸೆಮಿಫೈನಲ್​ಗಿಂತಲೂ ದುಬಾರಿ ಬಟ್ಟೆ ಹಾಕಿದ್ದರೆ ಫೈನಲ್​ ಪಂದ್ಯವನ್ನೂ ಭಾರತ ಗೆಲ್ಲುತ್ತಿತ್ತು ಎಂದು ಕೆಲವು ತರ್ಲೆಗಳು ಕಾಮೆಂಟ್​ನಲ್ಲಿ ಹೇಳುತ್ತಿದ್ದಾರೆ. 

Related posts

ಪುಷ್ಪಾ 2 ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಸ್ಥಾನ ಪಡೆಯಲು ವಿಫಲರಾದರೆ? ಏನಿದರ ಅಸಲಿಯತ್ತು ?

ಸಲ್ಮಾನ್ ಖಾನ್ ಮನೆ ಮುಂದೆ ಗುಂಡಿನ ದಾಳಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..! ಬಂಧನವಾಗಿದ್ದ ವ್ಯಕ್ತಿ ಜೈಲಿನೊಳಗೆ ಆತ್ಮಹತ್ಯೆ..!

2 ವರ್ಷ ಮನೆ ಊಟವನ್ನೇ ಮಾಡಿಲ್ಲ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಮೀರಾ ಬಾಯಿ ಚಾನು? ಯಾಕೆ ಗೊತ್ತಾ?