ಕ್ರೈಂರಾಜಕೀಯ

ಚನ್ನಗಿರಿ ಲಾಕಪ್​ ಡೆತ್ ಪ್ರಕರಣದ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದೇನು..? ಠಾಣೆಗೆ ನುಗ್ಗಿ ದಾಂಧಲೆ ಪ್ರಕರಣ ಸಿಐಡಿ ಹಸ್ತಾಂತರ..!

ನ್ಯೂಸ್‌ ನಾಟೌಟ್‌: ಚನ್ನಗಿರಿ ಠಾಣೆಯಲ್ಲಿ ಲಾಕಪ್​ ಡೆತ್ ಆಗಿದೆ ಎಂಬ ಕಾರಣವನ್ನು ಆರೋಪಿಸಿ ನಡೆದ ದಾಂಧಲೆ, ಮತ್ತು ಠಾಣೆಗೆ ದಾಳಿ ಪ್ರಕರಣವನ್ನು ಇದೀಗ ಸರ್ಕಾರ ಸಿಐಡಿ ವಹಿಸಿದೆ. ಪ್ರಕರಣ ಸಂಬಂಧ 25 ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳಿಸಿದ್ದೇವೆ.

ಬಂಧಿತರು ಚನ್ನಗಿರಿ, ಹೊನ್ನೆಬಾಗಿ, ನಲ್ಲೂರು ಗ್ರಾಮಗಳ ನಿವಾಸಿಗಳು. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 353, 307ರಡಿ ಕೇಸ್ ದಾಖಲಾಗಿದೆ. ನಿಯಮದಂತೆ ಜಡ್ಜ್‌ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ. 3 ದಿನದಲ್ಲಿ ಪೋಸ್ಟ್‌ ಮಾರ್ಟಂ ವರದಿ ಬರಲಿದ್ದು ಸತ್ಯಾಂಶ ತಿಳಿಯುತ್ತೆ ಎಂದು ಪೊಲೀಸರು ಹೇಳಿದ್ದಾರೆ. ಶೀಘ್ರವೇ ಸಿಐಡಿ (CID) ಅಧಿಕಾರಿಗಳು ಪ್ರಕರಣದ ತನಿಖೆ ಆರಂಭಿಸಲಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದ್ದಂತೆ 25 ಆರೋಪಿಗಳನ್ನು ಬಂಧಿಸಲಾಗಿದೆ. ಈ ಕುರಿತಾಗಿ ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಉಮಾ ‌ಪ್ರಶಾಂತ್​ ಮಾತನಾಡಿದ್ದು, ಪ್ರಕರಣದ ತನಿಖೆ ಸಿಐಡಿಗೆ ವಹಿಸಲಾಗಿದೆ. ಇಷ್ಟರಲ್ಲಿಯೇ ಸಿಐಡಿ ಅಧಿಕಾರಿಗಳು ಪ್ರಕರಣವನ್ನ ತಮ್ಮ ವ್ಯಾಪ್ತಿಗೆ ತೆಗೆದುಕೊಳ್ಳಲಿದೆ ಎಂದು ಹೇಳಿದ್ದಾರೆ.

Click 👇

https://newsnotout.com/2024/05/cinematic-theft-and-viral-video-issue
https://newsnotout.com/2024/05/neonotals-are-nomore-by-fire
https://newsnotout.com/2024/05/kannada-news-pakisthan-quran-issue

Related posts

ಮೊಬೈಲ್ ಗಾಗಿ 15 ರ ತಮ್ಮನನ್ನೇ ಸುತ್ತಿಗೆಯಿಂದ ಹೊಡೆದು ಕೊಂದ 18 ರ ಅಣ್ಣ..! ಮೊಬೈಲ್ ನಲ್ಲಿ ಅಂತದ್ದೇನಿತ್ತು..?

‘ಸನಾತನ ಧರ್ಮವನ್ನು ಕಾಗೆಗೆ ಹೋಲಿಸಿದ ನಟ ಪ್ರಕಾಶ್‌ ರಾಜ್ ಒಬ್ಬ ಹಂದಿ’ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಕಿಡಿ

ಆತನ ಉಪದ್ರ ತಡೆಯಲಾರದೆ ಸಿಎಂ ಯೋಗಿ ಆದಿತ್ಯನಾಥ್ ಗೆ ರಕ್ತದಲ್ಲೇ ಪತ್ರ ಬರೆದ ವಿದ್ಯಾರ್ಥಿನಿಯರು..! ಪ್ರಾಂಶುಪಾಲ ಆಡಿದ್ದ ಆ ಪೋಲಿಯಾಟವೇನು..?