ದೇಶ-ಪ್ರಪಂಚ

ಮಕ್ಕಳ ಆರೈಕೆ ಮಾಡುವುದು 24*7 ಕೆಲಸ,ಗಂಡ ಪತ್ನಿಗೆ ಹಣ ನೀಡಬೇಕು:ಕರ್ನಾಟಕ ಹೈಕೋರ್ಟ್

ನ್ಯೂಸ್‌ ನಾಟೌಟ್‌ : ಮಕ್ಕಳನ್ನು ನೋಡಿಕೊಳ್ಳಲು ಹೆಂಡತಿಯ ಉಪನ್ಯಾಸಕ ಹುದ್ದೆಯನ್ನು ತೊರೆಯುವಂತೆ ಮಾಡಿದ ಪತಿಯ ವಾದವನ್ನು ತಳ್ಳಿಹಾಕಿದ ಕರ್ನಾಟಕ ಹೈಕೋರ್ಟ್, ಜೀವನಾಂಶವಾಗಿ ಪತ್ನಿಗೆ ತಿಂಗಳಿಗೆ 36,000 ರೂ. ನೀಡಬೇಕು ಎಂದಿದೆ.ಮಹಿಳೆ ಹೆಂಡತಿ, ಗೃಹಿಣಿ ಮತ್ತು ತಾಯಿಯಾಗಿ ಬಿಡುವಿಲ್ಲದಂತೆ ಕೆಲಸ ಮಾಡುತ್ತಾಳೆ. ವಿಶೇಷವಾಗಿ ಮಕ್ಕಳನ್ನು ನೋಡಿಕೊಳ್ಳುವಲ್ಲಿ ಆಕೆಯ ಜವಾಬ್ದಾರಿಗಳು ದಿನದ 24 ಗಂಟೆಯೂ ಇರುತ್ತವೆ ಎಂದು ನ್ಯಾಯಾಲಯ ಹೇಳಿದೆ.

ಕೆನರಾ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ಪತಿ ತನ್ನ ಪತ್ನಿಗೆ ಮಾಸಿಕ 36,000 ರೂ. ಪಾವತಿಸುವಂತೆ ಸೂಚಿಸಿದ್ದಾರೆ. 2023ರ ಜೂನ್‌ನಲ್ಲಿ ಆನೇಕಲ್‌ನ ಸೆಷನ್ಸ್ ನ್ಯಾಯಾಲಯವು ಪತ್ನಿಗೆ 18,000 ರೂ. ಪಾವತಿಸುವಂತೆ ಹೇಳಿತ್ತು. ಬಳಿಕ 41 ವರ್ಷದ ಮಹಿಳೆ ತನಗೆ ಮತ್ತು ತನ್ನಿಬ್ಬರು ಮಕ್ಕಳಿಗೆ ತಿಂಗಳಿಗೆ 36,000 ರೂ. ನೀಡುವಂತೆ ಕೇಳಿದ್ದರು.

ಜೀವನ ವೆಚ್ಚಕ್ಕೆ ಅನುಗುಣವಾಗಿ ಅಥವಾ ಅವರು ಪತಿಯೊಂದಿಗೆ ಉಳಿದುಕೊಂಡರೂ ಜೀವನಾಂಶವನ್ನು ಹೆಂಡತಿ ಮತ್ತು ಮಕ್ಕಳಿಗೆ ಒದಗಿಸಬೇಕು. ಪತ್ನಿ ಕೆಲಸ ಮಾಡಲು ಅರ್ಹಳಾಗಿದ್ದಾಳೆ ಎಂಬ ಪತಿಯ ವಾದದ ಆಧಾರದ ಮೇಲೆ ತಿಂಗಳಿಗೆ ಕೇವಲ 18,000 ರೂ.ಗಳನ್ನು ಜೀವನಾಂಶವಾಗಿ ನೀಡಿದ್ದ ಸೆಷನ್ಸ್ ನ್ಯಾಯಾಲಯದ ಹಿಂದಿನ ತೀರ್ಪಿನಲ್ಲಿ ದೋಷವಿದೆ ಎಂದು ನ್ಯಾಯಾಲಯ ಹೇಳಿದೆ.ಪತ್ನಿಯು ಸೋಮಾರಿಯಾಗಿದ್ದಾಳೆ. ಹೀಗಾಗಿ, ಆಕೆ ಸಂಪಾದನೆ ಮಾಡುತ್ತಿಲ್ಲ ಎಂಬ ಪತಿಯ ವಾದವನ್ನು ತಳ್ಳಿಹಾಕಿದ ನ್ಯಾಯಾಲಯ, ಇದು ‘ಅಸಂಬದ್ಧ’ವಾಗಿದೆ. ಅರ್ಹತೆ ಹೊಂದಿರುವುದರಿಂದ ಜೀವನಾಂಶವನ್ನು ಪಡೆಯಲು ಹೆಂಡತಿ ಅನರ್ಹ ಎಂದು ಹೇಳಲಾಗುವುದಿಲ್ಲ.ಪ್ರತಿಯೊಂದು ಪ್ರಕರಣವನ್ನು ಪ್ರತ್ಯೇಕವಾಗಿ ಮೌಲ್ಯಮಾಪನ ಮಾಡಬೇಕು.

ಮೊದಲ ಮಗುವಿನ ಜನನದ ನಂತರ, ಮಹಿಳೆಯು ತನ್ನ ಕೆಲಸವನ್ನು ಬಿಡಲು ಕೇಳಲಾಯಿತು. ಎರಡನೇ ಮಗು ಜನಿಸಿದಾಗ, ಮಕ್ಕಳನ್ನು ನೋಡಿಕೊಳ್ಳಲು ಹೆಂಡತಿ ಸಂಪೂರ್ಣವಾಗಿ ಉದ್ಯೋಗವನ್ನು ತೊರೆದಿದ್ದರು.ಸಂಬಂಧ ಹಳಸುವವರೆಗೂ ಎಲ್ಲವೂ ಚೆನ್ನಾಗಿತ್ತು. ಪತ್ನಿಯು ಜೀವನಾಂಶವನ್ನು ಕೇಳಿದಾಗ, ಹೆಂಡತಿಯು ಎಲ್ಲಾ ಅರ್ಹತೆ ಹೊಂದಿದ್ದರೂ, ಆಕೆ ಕೆಲಸ ಮಾಡಲು ಮತ್ತು ಹಣ ಸಂಪಾದಿಸಲು ಸಿದ್ಧಳಿಲ್ಲ ಮತ್ತು ಪತಿ ನೀಡುವ ಜೀವನಾಂಶದಲ್ಲಿ ಬದುಕಲು ಬಯಸುತ್ತಾಳೆ ಎಂದು ಪತಿ ಆರೋಪಿಸಿದ್ದರು.

Related posts

ಭಾನುವಾರ ಬ್ಯಾಂಕ್ ​​ಗಳಿಗೆ ರಜೆ ರದ್ದುಗೊಳಿಸಿದ್ದೇಕೆ ಆರ್.ಬಿ.ಐ..? ಮಾ.31 ಕ್ಕೆ ಎಂದಿನಂತೆ ತೆರೆದಿರಲಿದೆ ಬ್ಯಾಂಕ್..!

ರಾತ್ರಿ ಮನೆಯ ಛಾವಣಿಯ ಮೇಲೆ ಚಿರತೆ, ಕರಡಿ ಓಡಾಟ..! ಘಟನೆ ನಡೆದದ್ದೆಲ್ಲಿ..?

ಲಕ್ಷಗಟ್ಟಲೆ ದೇಣಿಗೆ ಹಣ ಕದ್ದು ರಶೀದಿ ಪುಸ್ತಕದ ಜೊತೆಗೆ ಇಸ್ಕಾನ್ ದೇವಸ್ಥಾನದ ಉದ್ಯೋಗಿ ಪರಾರಿ..! ದೂರು ದಾಖಲು