ಕರಾವಳಿಚಿಕ್ಕಮಗಳೂರು

ಆಸ್ತಿ ಮಾರಿದ ಹಣಕ್ಕಾಗಿ ಪುತ್ರನ ಕಣ್ಣು:ಮಧ್ಯವರ್ತಿ ಸೇರಿದಂತೆ ತಂದೆಯನ್ನೂ ಮಚ್ಚಿನಿಂದ ಕೊಂದ ಪಾಪಿ ಪುತ್ರ,ತಾಯಿ ಸ್ಥಿತಿ ಗಂಭೀರ..

ನ್ಯೂಸ್ ನಾಟೌಟ್ : ಆಸ್ತಿ ಮಾರಿದ ಹಣಕ್ಕಾಗಿ ಮೂವರ ಮೇಲೆ ಮಚ್ಚಿನಿಂದ ಹಲ್ಲೆ (assault) ನಡೆದಿದ್ದು, ಇಬ್ಬರು ಸಾವಿಗೀಡಾದ ಘಟನೆ ವರದಿಯಾಗಿದೆ(Murder Case). ಘಟನೆಯಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮಧುಗುಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,ಆಘಾತಕಾರಿ ವಿಷಯವಾಗಿದೆ. ಆಸ್ತಿ ಮಾರಿ 12‌ ಲಕ್ಷ ರೂ. ಹಣ ಕೈ ಸೇರಿತ್ತು. ಈ ಹಿನ್ನಲೆಯಲ್ಲಿ ಕಾಸಿನ ವಿಚಾರದಲ್ಲಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಪಾಪಿ ಪುತ್ರ ಆಸ್ತಿ ಹಣಕ್ಕಾಗಿ ತನ್ನ ತಂದೆ ಹಾಗೂ ಆಸ್ತಿ ಮಾರಾಟದ ಮಧ್ಯವರ್ತಿಯನ್ನು ಕೊಂದುಹಾಕಿದ್ದಾನೆ ಎನ್ನಲಾಗಿದೆ.

ತಂದೆಯನ್ನೇ ಕೊಂದಿರುವ ಪಾಪಿ ಪುತ್ರನ ಹೆಸರು ಸಂತೋಷ್‌ ಎಂದು ತಿಳಿದು ಬಂದಿದೆ. ಸಂತೋಷ್‌ ಹಾಗೂ ಆತನ ತಂದೆಗೆ ಸೇರಿದ ಜಮೀನನ್ನು ಮಾರಾಟ ಮಾಡಲು ಕಾರ್ತಿಕ್‌ (45) ಎಂಬವರು ಮಧ್ಯಸ್ಥಿಕೆ ವಹಿಸಿದ್ದರು. ಆದರೆ ಆಸ್ತಿ ಮಾರಿ ಬಂದ ಹಣದಲ್ಲಿ ಪಾಲಿನ ವಿಚಾರವಾಗಿ ಜಗಳ ಹುಟ್ಟಿಕೊಂಡಿದ್ದು, ಈ ಸಂದರ್ಭದಲ್ಲಿ ಸಂತೋಷ್‌ ತನ್ನ ತಂದೆ ಭಾಸ್ಕರ್‌ ಗೌಡ, ತಾಯಿ ಹಾಗೂ ಮಧ್ಯವರ್ತಿ ಕಾರ್ತಿಕ್‌ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.

ಮೂವರಿಗೂ ತೀವ್ರ ಗಾಯಗಳಾಗಿದ್ದು, ಮಂಗಳೂರು ಆಸ್ಪತ್ರೆಯಲ್ಲಿ ತಂದೆ ಹಾಗೂ ಕಾರ್ತಿಕ್‌ ಸಾವಿಗೀಡಾಗಿದ್ದಾರೆ. ತಾಯಿ ಸ್ಥಿತಿ ಗಂಭೀರವಾಗಿದೆ. ಮಚ್ಚಿನಿಂದ ಹಲ್ಲೆ ನಡೆಸಿ ಸಂತೋಷ್‌ ನೇರವಾಗಿ ಠಾಣೆಗೆ ಹೋಗಿದ್ದಾನೆ. ಬಾಳೂರು‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಬೆಳ್ತಂಗಡಿ: ಅಂಗನವಾಡಿ ಮಕ್ಕಳಿಗೆ ಸರ್ಕಾರದಿಂದ ಕೊಟ್ಟ ಮೊಟ್ಟೆಯೊಳಗಿತ್ತು ಕೋಳಿ ಮರಿ..! ಬೆಂದಾಗ ಮೊಟ್ಟೆಯೊಳಗಿತ್ತು ಹೆಪ್ಪುಗಟ್ಟಿದ ರಕ್ತ, ಹೊರಬರಬೇಕಿದ್ದ ಮರಿ..!

ದ.ಕ. ಜಿಲ್ಲೆಯಲ್ಲಿ ಭಾರಿ ಮಳೆಗೆ ಮನೆ ಮೇಲೆ ಕುಸಿದ ಗುಡ್ಡ, ಮಣ್ಣಿನಡಿ ಸಿಲುಕಿದ ತಾಯಿ ಸಾವು, ಪುತ್ರಿಯ ರಕ್ಷಣೆ

ದರ್ಶನ್‍ ಮನೆಯಲ್ಲಿ ಮಹಜರು ನಡೆಸಿದ ಪೊಲೀಸರು..! ರೇಣುಕಾಸ್ವಾಮಿ ಹತ್ಯೆ ದಿನ ದರ್ಶನ್ ಧರಿಸಿದ್ದ ಬಟ್ಟೆ, ಶೂ ಪೊಲೀಸ್ ವಶಕ್ಕೆ..!