ಚಿಕ್ಕಮಗಳೂರು

ಅಣ್ಣಾಮಲೈ ತಮಿಳುನಾಡಿನ ಸಿಎಂ ಆಗ್ತಾರೆ..!ಗೌರಿಗದ್ದೆಯ ಅವಧೂತ ವಿನಯ್‌ ಗುರೂಜಿ ಭವಿಷ್ಯ..! ಈ ಬಗ್ಗೆ ಹೇಳಿದ್ದೇನು?

ನ್ಯೂಸ್ ನಾಟೌಟ್‌: ಖಡಕ್ ಪೊಲೀಸ್ ಆಫೀಸರ್ ಆಗಿ ಕರ್ತವ್ಯ ನಿರ್ವಹಿಸಿದ್ದ ಹಾಗೂ ಸದ್ಯ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಕೆ.ಅಣ್ಣಾಮಲೈ ಸೆನ್ಸೆಷನಲ್ ನಾಯಕ.ಇದೀಗ ಇವರ ಕುರಿತಂತೆ ಗೌರಿಗದ್ದೆಯ ಅವಧೂತ ವಿನಯ್‌ ಗುರೂಜಿಯವರು ಭವಿಷ್ಯ ನುಡಿದಿದ್ದಾರೆ. ಮುಂದೊಂದು ದಿನ ಇವರು ತಮಿಳುನಾಡು ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿದ್ದಾರೆ.

ಭಾನುವಾರ ಚಿಕ್ಕಮಗಳೂರಿನ ಕಡೂರು ತಾಲೂಕು ಯಗಟಿಯಲ್ಲಿ ನಡೆದ ಕವಿ ಕುಮಾರವ್ಯಾಸ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಣ್ಣಾಮಲೈ ಅವರನ್ನು ಚಿಕ್ಕಮಗಳೂರಿನಲ್ಲಿ ಭೇಟಿಯಾಗಿದ್ದ ವೇಳೆ ತಾವು ಮುಂದೊಂದು ದಿನ ತಮಿಳುನಾಡಿನ ಮುಖ್ಯಮಂತ್ರಿ ಆಗುತ್ತೀರಾ. ತಮಿಳುನಾಡಿನಲ್ಲಿ ಧರ್ಮವು ಬೆಳೆಯುತ್ತದೆ. ತಿರುವಣ್ಣಾಮಲೈ ದೇವಸ್ಥಾನಕ್ಕೆ ಸದಾ ಭೇಟಿ ಕೊಡುತ್ತಿರಿ ಎಂದು ಅವರಿಗೆ ಹೇಳಿದ್ದೆ. ಕೆ.ಅಣ್ಣಾಮಲೈ ಅವರನ್ನು ಭೇಟಿಯಾದಗಲೆಲ್ಲ ಎರಡು ಸೇಬು ಹಣ್ಣುಗಳನ್ನು ನೀಡಿ ಅವರಿಗೆ ಆಶೀರ್ವದಿಸಿದ್ದೇನೆ ಎಂದಿದ್ದಾರೆ.

Related posts

ದಕ್ಷಿಣ ಕನ್ನಡ, ಕುದುರೆಮುಖ ಚಾರಣಕ್ಕೆ ವಿಧಿಸಿದ್ದ ನಿಷೇಧ ವಾಪಸ್, ಜಿಲ್ಲಾಡಳಿತ ನಿರ್ಧಾರದ ಹಿಂದಿದೆ ಇವರದ್ದೊಂದು ಕೋರಿಕೆ

ಪ್ರೇಮಿಗೆ ಅಪ್ರಾಪ್ತೆ ಬಾಲಕಿಯರನ್ನು ಪೂರೈಸುತ್ತಿದ್ದ ನರ್ಸ್..! ಮೂವರು ಅರೆಸ್ಟ್, ಏನಿದು ಘಟನೆ?

ರಸ್ತೆ ಕಾಮಗಾರಿ ವೇಳೆ ಏಕಾಏಕಿ ಕುಸಿದು ಬಿದ್ದ ಮಣ್ಣು..!ಮಣ್ಣಿನಡಿ ಸಿಲುಕಿದ ನಾಲ್ವರು ಕಾರ್ಮಿಕರು,ಓರ್ವ ದುರಂತ ಅಂತ್ಯ