ದೇಶ-ವಿದೇಶರಾಜಕೀಯರಾಜ್ಯವೈರಲ್ ನ್ಯೂಸ್

ಚನ್ನಪಟ್ಟಣ ಉಪ ಚುನಾವಣೆಗೆ ನಿಖಿಲ್ ಕುಮಾರಸ್ವಾಮಿ NDA ಅಭ್ಯರ್ಥಿಯಾಗಿ ಘೋಷಣೆ..! ಸಿ.ಪಿ. ಯೋಗೇಶ್ವರ್ ಕಾಂಗ್ರೆಸ್ ಸೇರಿದ ಬಳಿಕ ಗರಿಗೆದರಿದ ರಾಜಕೀಯ ಬೆಳವಣಿಗೆ..!

ನ್ಯೂಸ್‌ ನಾಟೌಟ್: ಹೈವೋಲ್ಟೇಜ್ ಕಣವಾಗಿ ಮಾರ್ಪಟ್ಟಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಎನ್ ಡಿಎ ಅಭ್ಯರ್ಥಿ ಕೊನೆಗೂ ಗುರುವಾರ ಘೋಷಣೆಯಾಗಿದೆ. ಅಳೆದು ತೂಗಿ ಕೊನೆ ಕ್ಷಣದಲ್ಲಿ ಚನ್ನಪಟ್ಟಣದಿಂದ NDA ಅಭ್ಯರ್ಥಿಯಾಗಿ ನಿಖಿಲ್​ ಕುಮಾರಸ್ವಾಮಿ ಅವರು ಸ್ಪರ್ಧಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.

ಇಂದು(ಅ.24) ಬಿಎಸ್​ ಯಡಿಯೂರಪ್ಪ ನಿವಾಸದಲ್ಲಿ ನಡೆದ ಜೆಡಿಎಸ್​​-ಬಿಜೆಪಿ ನಾಯಕರ ಸಮನ್ವಯ ಸಭೆ ಬಳಿಕ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಬಿಎಸ್ ಯಡಿಯೂರಪ್ಪ, ಚನ್ನಪಟ್ಟಣ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ನಿಖಿಲ್ ಸ್ಪರ್ಧಿಸುತ್ತಾರೆ ಎಂದು ಘೋಷಿಸಿದರು.

ಇಂದು ಬೆಳಗ್ಗೆ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿಖಿಲ್ ಸ್ಪರ್ಧೆಗೆ ಒಮ್ಮತದ ನಿರ್ಣಯ ಕೈಗೊಳ್ಳಲಾಗಿತ್ತು. ಬಳಿಕ ಯಡಿಯೂರಪ್ಪ ನಿವಾಸದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ನಾಯಕರ ಸಮನ್ವಯ ಸಭೆ ನಡೆಸಿ ನಂತರ ನಿಖಿಲ್​ ಕುಮಾರಸ್ವಾಮಿ ಎನ್​ ಡಿಎ ಅಭ್ಯರ್ಥಿ ಎಂದು ಘೋಷಣೆ ಮಾಡಲಾಯಿತು. ಮಾಜಿ ಬಿಜೆಪಿ ಶಾಸಕ ಸಿ.ಪಿ. ಯೋಗೇಶ್ವರ್ ವಿರುದ್ಧ ಸ್ಪರ್ಧೆಗೆ ದಳಪತಿಗಳು ಮತ್ತು ಕಮಲ ಕಲಿಗಳು ಚರ್ಚಿಸಿ ಅಭ್ಯರ್ಥಿಯನ್ನು ಅಂತಿಮಗೊಳಿಸಿದ್ದಾರೆ.

“ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆಗೆ ಎನ್ ಡಿ ಎ ಅಭ್ಯರ್ಥಿಯನ್ನಾಗಿ ನಿಖಿಲ್ ಕುಮಾರಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಬೆಂಬಲ ಹಾಗೂ ಆಶೀರ್ವಾದವೂ ಇದೆ. ಇಲ್ಲಿ ಸ್ಪರ್ಧೆ ಅಷ್ಟೇ ಅಲ್ಲ, ನೂರಕ್ಕೂ ನೂರು ಗೆಲ್ಲುತ್ತೇವೆ. ನಮಗೆ ಸಂಪೂರ್ಣ ವಿಶ್ವಾಸ ಇದೆ” ಎಂದು ಯಡಿಯೂರಪ್ಪ ಹೇಳಿದರು.

Click

https://newsnotout.com/2024/10/elephat-bathing-in-bannerughatta-national-park-kavadiga/
https://newsnotout.com/2024/10/bigboss-kannada-radha-hiregowda-kannada-news-viral-task/
https://newsnotout.com/2024/10/lawyer-jagadeesh-in-another-program-kannada-news-colors/
https://newsnotout.com/2024/10/brain-dead-kannada-news-viral-news-opration-theatre-doctor/
https://newsnotout.com/2024/10/life-hole-kannada-news-kannamangala-milk-dairy-viral-news/

Related posts

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಪ್ರವಾಸಿಗರ ಮಿನಿ ಬಸ್ ಅನ್ನು ಏರಿದ ಚಿರತೆ..! ಪ್ರವಾಸಿಗರಲ್ಲಿ ಆತಂಕ..! ಇಲ್ಲಿದೆ ವಿಡಿಯೋ

ಕುಟುಂಬಸ್ಥರಿಗೂ ಬೇಡವಾದ ಸುಳ್ಯದ ಬಸ್ ಚಾಲಕ..! ಕಾಲು ಕೊಳೆತು ಬದುಕೇ ಆಯಿತು ನರಕ..! ಮಾನವೀಯತೆ ಮೆರೆದ ಸುಳ್ಯದ ಆಂಬ್ಯುಲೆನ್ಸ್ ಚಾಲಕರು

1000 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಸರ್ಕಾರಿ ಭೂಮಿ ಕಬಳಿಕೆ..! ಪತ್ರಕರ್ತ ಸೇರಿ 14 ಮಂದಿಯ ಬಂಧನ..!