ದೇಶ-ಪ್ರಪಂಚರಾಜಕೀಯವೈರಲ್ ನ್ಯೂಸ್

ಚೆನ್ನೈ ಮಳೆಯಿಂದ ಇಡಿ ದಾಳಿ ವಿಳಂಬವಾಯ್ತಾ..? ಪ್ರಕಾಶ್ ರಾಜ್‌ಗೆ ಈ ಬಗ್ಗೆ ಹೇಳಿದ್ದೇನು..? ಈ ಬಗ್ಗೆ ನಟನಿಗೆ ಮಾಹಿತಿ ನೀಡಿದವರ್ಯಾರು?

ನ್ಯೂಸ್ ನಾಟೌಟ್ : ಚಂಡಮಾರುತದಿಂದ ತಮಿಳುನಾಡು, ಆಂಧ್ರ ಪ್ರದೇಶದ ಕೆಲ ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ರಸ್ತೆಗಳು, ಕಾರುಗಳು ಕೊಚ್ಚಿ ಹೋಗಿ ಅವಾಂತರಗಳು ಸೃಷ್ಟಿಯಾಗಿವೆ. ವಿಮಾನ ನಿಲ್ದಾಣ, ರೈಲು ನಿಲ್ದಾಣಗಳು ಕೂಡ ಜಲಾವೃತವಾಗಿವೆ.

ಇದರ ಬೆನ್ನಲ್ಲೇ ನಟ ಪ್ರಕಾಶ್ ರಾಜ್ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಟೀಕೆ ಮಾಡಿದ್ದು, ಭಾರಿ ಮಳೆ ಕಾರಣ ಇಡಿ ದಾಳಿ ವಿಳಂಬವಾಗಿದೆ. ಕೆಲ ದಿನಗಳ ಕಾಲ ಕಾಯಲೇಬೇಕು ಎಂದು ಪ್ರಕಾಶ್ ರಾಜ್ ಟ್ವೀಟ್ ‘x’ ಮಾಡಿದ್ದಾರೆ.

ಭಾರಿ ಮಳೆ ಬೆನ್ನಲ್ಲೇ ಚೆನ್ನೆ ವಿಮಾನ ನಿಲ್ದಾಣ ಸೇವೆ ಕುರಿತ ಮಾಹಿತಿಯನ್ನು ಹಂಚಿಕೊಂಡಿತ್ತು. ಇದೇ ಮಾಹಿತಿಯನ್ನು ಹಂಚಿಕೊಂಡ ಪ್ರಕಾಶ್ ರಾಜ್, ಭಕ್ತರಿಗೆ ಇಂದು ಅತ್ಯಂತ ದುಃಖದ ದಿನ. ನಾಳೆ ನನ್ನ ಇಡಿ ದಿನ. ಆದರೆ ಚೆನ್ನೈನಲ್ಲಿ ಸುರಿಯುತ್ತಿರುವ ಭಾರಿ ಮಳೆ ಹಾಗೂ ಮೈಚುಂಗ್ ಚಂಡಮಾರುತ ಎಲ್ಲಾ ಲೆಕ್ಕಾಚಾರ ಉಲ್ಟಾ ಮಾಡಿದೆ.ಹೀಗಾಗಿ ನೀವು ಕಾಯಲೇಬೇಕು ಎಂದು ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ ಎನ್ನಲಾಗಿದೆ. ಪ್ರಕಾಶ್ ರಾಜ್ ಟ್ವೀಟ್‌ಗೆ ಪರ ವಿರೋಧಗಳು ವ್ಯಕ್ತವಾಗಿದೆ.

ನವೆಂಬರ್ ತಿಂಗಳ ಆರಂಭದಲ್ಲಿ ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಲೋಕೋಪಯೋಗಿ ಸಚಿವ ಇ.ವಿ. ವೇಲು ಮನೆ ಹಾಗೂ ಅವರಿಗೆ ಸಂಬಂಧಿಸಿದ ಆಸ್ತಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಚೆನ್ನೈ, ಕೊಯಮತ್ತೂರು, ಕರೂರು, ತಿರುವಣ್ಣಾಮಲೈ, ಬೆಂಗಳೂರು ಸೇರಿದಂತೆ ಹಲವು ಕಡೆ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ.

ಶಿಕ್ಷಣ ಸಂಸ್ಥೆಗಳು, ಮರಳು ಕ್ವಾರಿ ಮತ್ತು ಕಟ್ಟಡ ನಿರ್ಮಾಣ ಹೆಸರಿನಲ್ಲಿ ಭಾರೀ ತೆರಿಗೆ ವಂಚನೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿತ್ತು.

Related posts

ಸ್ವಪಕ್ಷೀಯರಿಂದಲೇ ಪ್ರಜ್ವಲ್ ರೇವಣ್ಣ ಉಚ್ಚಾಟನೆಗೆ ಹೆಚ್ಚಿದ ಒತ್ತಡ, ನಾಳೆ(ಎ.30) ಜೆಡಿಎಸ್ ನಿಂದ ತುರ್ತು ಸಭೆ

ಕೇರಳ: ನರ್ಸಿಂಗ್ ವಿದ್ಯಾರ್ಥಿನಿ ಮೇಲೆ ಸ್ನೇಹಿತರಿಂದಲೇ ಸಾಮೂಹಿಕ ಅತ್ಯಾಚಾರ! ವಿದ್ಯಾರ್ಥಿನಿ ಬಾಯ್ಬಿಟ್ಟಳು ಕರಾಳ ಸತ್ಯ!

ರಾಜಧಾನಿಯಲ್ಲಿ ಇನ್ನೂ ಇಳಿದಿಲ್ಲವಾ ಕಂಬಳದ ಕ್ರೇಜ್..? ಬೆಂಗಳೂರಿನಲ್ಲಿ ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸುತ್ತಿರುವುದ್ಯಾರು..? ಸರ್ಕಾರಕ್ಕೆ ಸಲ್ಲಿಸಿದ ಪತ್ರದಲ್ಲೇನಿದೆ?