ಕ್ರೈಂ

ಚೆಂಬು ಗ್ರಾಮ ಪಂಚಾಯತ್ ಸದಸ್ಯೆಯನ್ನು ಹೊತ್ತೊಯ್ದು ಕೊಂದ ಪ್ರಕರಣ, ಕೊಲೆ ಮಾಡುವುದಕ್ಕೂ ಮೊದಲು ಅತ್ಯಾಚಾರ?

ಚೆಂಬು: ಕೊಡಗು ಜಿಲ್ಲೆ ಚೆಂಬು ಗ್ರಾಮದ ದಬ್ಬಡ್ಕ ಎಂಬಲ್ಲಿ ಗ್ರಾಮ ಪಂಚಾಯತ್ ಸದಸ್ಯೆ ಕಮಲಾ ಕೇಶವ್ ಎಂಬುವವರನ್ನು ಕಾಡಿಗೆ ಹೊತ್ತೊಯ್ದು ವ್ಯಕ್ತಿಯೊಬ್ಬ ಅಲ್ಲಿ ಭೀಕರವಾಗಿ ಕೊಂದು ನೇಣು ಹಾಕಿರುವ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಲಭಿಸಿದೆ. ಕೊಲೆಯಾಗುವುದಕ್ಕೂ ಮೊದಲು ಆಕೆಯನ್ನು ಅತ್ಯಾಚಾರ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಡಿಕೇರಿಗೆ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದ್ದು ವರದಿ ಬಂದ ಬಳಿಕ ಸತ್ಯಾಂಶ ತಿಳಿದು ಬರಲಿದೆ.

ಏನಿದು ಘಟನೆ?

ಮುತ್ತಪ್ಪ ಎನ್ನುವ ವ್ಯಕ್ತಿ ಬುಧವಾರ ಸಂಜೆ ಕಾರ್ಯಕ್ರಮ ಮುಗಿಸಿಕೊಂಡು ಬರುತ್ತಿದ್ದ ಕಮಲಾ ಅನ್ನುವವರನ್ನು ಅಡ್ಡಗಟ್ಟಿದ್ದಾನೆ. ಈ ವೇಳೆ ತಡೆಯಲು ಬಂದವರಿಗೆ ಮುತ್ತಪ್ಪ ಕತ್ತಿ ತೋರಿಸಿದ್ದಾನೆ. ಗ್ರಾಮ ಪಂಚಾಯತ್ ಸದಸ್ಯೆಯನ್ನು ಸಣ್ಣ ಸೇತುವೆಯಿಂದ ಹೊಳೆಗೆ ದೂಡಿ ಹಾಕಿದ್ದಾನೆ. ಆಕೆ ನೀರಿಗೆ ಬಿದ್ದು ಅಲ್ಲಿಂದ ದಡಕ್ಕೆ ಬರುತ್ತಿದ್ದಂತೆ ಅಲ್ಲಿಗೆ ಹೋದ ಮುತ್ತಪ್ಪ ಆಕೆಯನ್ನು ಹೊತ್ತುಕೊಂಡು ಪಕ್ಕದ ಕಾಡಿನತ್ತ ಓಡಿದ್ದಾನೆ. ಈ ವೇಳೆ ಊರಿನವರಿಗೆ ವಿಚಾರ ತಿಳಿದು ಎಲ್ಲರು ಬರುತ್ತಾರೆ. ರಾತ್ರಿ ಇಡೀ ಹುಡುಕಿದರೂ ಇಬ್ಬರ ಸುಳಿವು ಸಿಕ್ಕಿರುವುದಿಲ್ಲ. ಗುರುವಾರ ಬೆಳಗ್ಗೆ ಹನ್ನೊಂದು ಗಂಟೆ ಹೊತ್ತಿಗೆ ಇಬ್ಬರ ದೇಹ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ವಿವಾಹಿತೆ ಮಹಿಳೆ ಕಮಲಾ ಜತೆಗೆ ಮುತ್ತಪ್ಪ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎಂದು ಹೇಳಲಾಗಿದೆ. ಆದರೆ ಕಳೆದ ಎರಡು ವರ್ಷದಿಂದ ಇಬ್ಬರ ನಡುವಿನ ಮಾತುಕತೆ ಇರಲಿಲ್ಲ. ಹೀಗಿದ್ದರೂ ಆಕೆಯ ಮೇಲೆ ಅವನಿಗೆ ಮನಸ್ಸಿತ್ತು. ಎರಡು ವರ್ಷದಿಂದ ಆಕೆ ಮಾತನಾಡುತ್ತಿರಲಿಲ್ಲ. ಇದರಿಂದ ನೊಂದು ಆತ ಇಂತಹ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ. ಅರೆಬೆತ್ತಲೆಯಾಗಿರುವ ಸ್ಥಿತಿಯಲ್ಲಿ ಇಬ್ಬರ ದೇಹ ಪತ್ತೆಯಾಗಿರುವುದರಿಂದ ಕೊಲೆಯಾಗುವುದಕ್ಕೂ ಮೊದಲು ಮಹಿಳೆಯ ಮೇಲೆ ಅತ್ಯಾಚಾರ ನಡೆದಿರಬಹುದು ಎಂದು ಶಂಕಿಸಲಾಗಿದೆ.

Related posts

ನಕಲು ಮಾಡಿ ಸಿಕ್ಕಿಬಿದ್ದ ಆರೋಪ, ಮನನೊಂದು ಬಿಕಾಂ ವಿದ್ಯಾರ್ಥಿನಿ ಆತ್ಮಹತ್ಯೆ

ಶಾಲೆಯಲ್ಲಿ ಅಪ್ರಾಪ್ತ ಬಾಲಕನಿಂದ ಗುಂಡಿನ ದಾಳಿ! 8 ಮಕ್ಕಳ ದುರಂತ ಅಂತ್ಯ..!

18 ವರ್ಷಗಳ ಕಾಲ ದುಬೈ ಜೈಲಿನಲ್ಲಿದ್ದ ಭಾರತೀಯರು ಮರಳಿ ತವರಿಗೆ..! 25 ವರ್ಷಗಳ ಶಿಕ್ಷೆಯಿಂದ ಪಾರದದ್ದೇಗೆ..? ಇಲ್ಲಿದೆ ಭಾವನಾತ್ಮಕ ವಿಡಿಯೋ