ಕರಾವಳಿ

ಚೆಂಬು ಗ್ರಾಮದ ಬೊಲೆರೊ ಜೀಪ್ ಕಡಬದಲ್ಲಿ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ, ಮಗು ಸಹಿತ ಮೂವರು ಪವಾಡ ಸದೃಶ ಪಾರು

ನ್ಯೂಸ್ ನಾಟೌಟ್: ಕೊಡಗು ಜಿಲ್ಲೆ ಚೆಂಬು ಗ್ರಾಮಕ್ಕೆ ಸೇರಿದ ಬೊಲೆರೊ ಜೀಪ್ ವೊಂದು ಕಡಬದಲ್ಲಿ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾದ ಘಟನೆ ನಡೆದಿದೆ. ಚೆಂಬು ಗ್ರಾಮದ ಚೇತನ್ ಅನ್ನುವವರಿಗೆ ಸೇರಿದ ಜೀಪ್ ಎನ್ನಲಾಗಿದೆ.

ಇಲ್ಲಿನ ಕಡಬ ಪಂಜ ರಸ್ತೆಯ ಕೋಡಿಂಬಾಳ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಜೀಪ್ ಢಿಕ್ಕಿಯಾಗಿದೆ. ವಾಹನದಲ್ಲಿದ್ದವರು ಪವಾಡ ಸದೃಶವಾಗಿ ಪಾರಾಗಿದ್ದಾರೆ. ಈ ಘಟನೆ ಭಾನುವಾರ ಮುಂಜಾನೆ ನಡೆದಿದೆ. ಚೇತನ್ ಎಂಬವರ ಕುಟುಂಬಸ್ಥರು ಕಾರ್ಯಕ್ರಮದ ನಿಮಿತ್ತ ಧರ್ಮಸ್ಥಳ ಕ್ಕೆ ತೆರಳುತ್ತಿದ್ದಾಗ ಕೋಡಿಂಬಾಳದಲ್ಲಿ ವಾಹನ ಅಪಘಾತವಾಗಿದೆ. ವಾಹನದಲ್ಲಿ ಮಗು ಸಹಿತ ಮೂರು ಮಂದಿ ಇದ್ದು ಜೀವ ಹಾನಿಯಿಂದ ಪಾರಾಗಿದ್ದಾರೆ. ವಾಹನ ಜಖಂ ಗೊಂಡಿದ್ದು ಅಪಘಾತದ ರಭಸಕ್ಕೆ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಸ್ಥಳೀಯರು ಕೂಡಲೇ ಆಗಮಿಸಿ ವಾಹನದಲ್ಲಿದ್ದವರನ್ನು ಉಪಚರಿಸಿದ್ದಾರೆ. ಕಡಬ ಪೊಲೀಸರಿಗೂ ಮಾಹಿತಿ ರವಾನೆಯಾಗಿದೆ ಎಂದು ತಿಳಿದು ಬಂದಿದೆ.

Related posts

ಅಸಲಿ ಆಭರಣಗಳನ್ನು ಕದ್ದು ಅಂತದ್ದೇ ನಕಲಿ ಆಭರಣವನ್ನು ದೇವಿಗೆ ತೊಡಿಸಿದ್ದ ಅರ್ಚಕ..! ಶ್ರೀ ಮಹಾಂಕಾಳಿ ದೇವಸ್ಥಾನದ 21ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು..!

ಉಡುಪಿ ಗರುಡ ಗ್ಯಾಂಗ್‌ ವಾರ್ ಪ್ರಕರಣದ ಪ್ರಮುಖ 3 ಆರೋಪಿಗಳ ಬಂಧನ..! ಬಂಧಿತರ ಸಂಖ್ಯೆ 6ಕ್ಕೆ ಏರಿಕೆ..!

ಮತ್ತೆ ಭೂಕಂಪ..ಜೀವ ಭಯದಿಂದ ಮನೆಯಿಂದ ಹೊರಗೋಡಿದ ಜನ..!