ಕರಾವಳಿದಕ್ಷಿಣ ಕನ್ನಡಮಂಗಳೂರುರಾಜ್ಯ

ಚಾರ್ಮಾಡಿ ಘಾಟಿಯಲ್ಲಿ ಆನೆ ಸವಾರಿ..! ಭಯಭೀತರಾದ ವಾಹನ ಸವಾರರು

ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನು ಸಂಪರ್ಕಿಸುವ ಚಾರ್ಮಾಡಿ ಘಾಟಿಯಲ್ಲಿ ಬುಧವಾರ (ಮೇ.೮) ಒಂಟಿ ಸಲಗ ಕಂಡು ಬಂದಿದೆ. ಘಾಟಿ ರಸ್ತೆಯ ಎರಡನೇ ತಿರುವಿನ ಬಳಿ ಕಾಡಾನೆ ತಿರುಗಾಟ ನಡೆಸಿದ್ದ ಕಾರಣ ಕೆಲವು ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು.

ಆನೆ ಸಂಚಾರ ಕಂಡ ಕೆಲವು ವಾಹನ ಸವಾರರು ಭಯಭೀತರಾದ ಘಟನೆಯೂ ನಡೆಯಿತು. ಸ್ಥಳಕ್ಕೆ ಬೆಳ್ತಂಗಡಿ ಅರಣ್ಯ ಇಲಾಖೆಯ ಆರ್‌ಎಫ್‌ಒ ಮೋಹನ್‌ ಕುಮಾರ್‌, ಡಿಆರ್‌ಎಫ್‌ಒ ನಾಗೇಶ್‌, ರವಿ ಅವರ ತಂಡ ಭೇಟಿ ನೀಡಿ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಿ, ಆನೆಯನ್ನು ಕಾಡಿಗೆ ಓಡಿಸುವ ಕಾರ್ಯಾಚರಣೆ ನಡೆಸಿದ್ದಾರೆ. ಕಳೆದ ಎರಡು ತಿಂಗಳಲ್ಲಿ ಘಾಟಿ ವಿಭಾಗದಲ್ಲಿ ಹಗಲು ಬಾರಿ ಕಾಡಾನೆ ಕಂಡು ಬಂದಿರುವುದು ಕಂಡುಬಂದಿದ್ದು, ಇತ್ತೀಚಿನ ದಿನಗಳಲ್ಲಿ ಇದು ಮೂರನೇ ಬಾರಿ ಆನೆಗಳು ಕಾಣಿಸಿಕೊಂಡಿವೆ.

Related posts

ಅರಂಬೂರಿನಲ್ಲಿ ಕೊಂಚ ತಗ್ಗಿದ ಪಯಸ್ವಿನಿ ನದಿ

ಮೋದಿ ಪ್ರಧಾನಿಯಾಗ್ಬೇಕೆಂದು ಕಾಳಿಗೆ ಬೆರಳನ್ನೇ ಅರ್ಪಿಸಿದ ಅಭಿಮಾನಿ..! ಈ ಘಟನೆ ನಡೆದದ್ದೆಲ್ಲಿ..?

ಸುಳ್ಯ : ಪೈಚಾರು ಶಾಂತಿನಗರ ಮುತ್ತಪ್ಪ ತಿರುವಪ್ಪ ದೈವಸ್ಥಾನದಲ್ಲಿ ನೇಮೋತ್ಸವ ಸಂಭ್ರಮ