ಕರಾವಳಿ

ಮಂಗಳೂರು: ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ವಿದ್ಯಾರ್ಥಿಗಳ ಪೋಷಕರಿಗೆ ಪಾಕಿಸ್ತಾನ, ಪೋಲೆಂಡ್ ನಿಂದ ವಾಟ್ಸಾಪ್ ಕರೆ..? ನಿಮ್ಮ ಮಕ್ಕಳನ್ನು ಬಂಧಿಸಿದ್ದೇವೆಂದು ಹಣಕ್ಕಾಗಿ ಬೇಡಿಕೆ ಇಟ್ಟ ಆ ನಿಗೂಢ ವ್ಯಕ್ತಿಗಳು ಯಾರು..?

ನ್ಯೂಸ್ ನಾಟೌಟ್: ನಾವು ಪೊಲೀಸ್ ಅಧಿಕಾರಿಗಳು. ನಿಮ್ಮ ಮಕ್ಕಳನ್ನು ಬಂಧಿಸಿದ್ದೇವೆ. ಅವರ ಬಿಡುಗಡೆಗೆ ಈ ಕೂಡಲೇ ಹಣ ನೀಡಬೇಕು’ ಹೀಗೆಂದು ಮಂಗಳೂರಿನ ಕಾಲೇಜು ವಿದ್ಯಾರ್ಥಿಗಳ ಪೋಷಕರಿಗೆ ಪೋಲೆಂಡ್, ಪಾಕಿಸ್ತಾನ ರಾಷ್ಟ್ರಗಳ ಕೋಡ್ ಸಂಖ್ಯೆಯಿಂದ ವಾಟ್ಸಾಪ್ ಕರೆ ಮಾಡಿರುವ ಘಟನೆ ಹಲವಾರು ವಿದ್ಯಾರ್ಥಿಗಳ ಪೋಷಕರ ಅನುಭವಕ್ಕೆ ಬಂದಿದೆ. ಇಂತಹ ಬೆದರಿಕೆ ಕರೆಯಿಂದ ವಿದ್ಯಾರ್ಥಿಗಳ ಪೋಷಕರು ತೀವ್ರ ಗಾಬರಿಗೊಂಡಿದ್ದಾರೆ.

ಘಟನೆ ತೀವ್ರತೆ ಅರಿವಾಗುತ್ತಿರುವಂತೆ ಮಂಗಳೂರು ಪೊಲೀಸರು ಕರೆ ಬಂದ ನಂಬರ್ ಗಳ ಹಿಂದೆ ಬಿದ್ದು ತನಿಖೆ ಆರಂಭಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್, ‘ಜೂ. 11 ಮತ್ತು 12ರಂದು ಹಲವಾರು ವಿದ್ಯಾರ್ಥಿಗಳ ಹೆತ್ತವರಿಗೆ ಅಪರಿಚಿತರು ಪೊಲೀಸ್‌ ಅಧಿಕಾರಿಗಳಂತೆ ಬಿಂಬಿಸಿಕೊಂಡು ವಾಟ್ಸಾಪ್ ಮೂಲಕ ಕರೆ ಮಾಡಿ ಮಗ/ಮಗಳನ್ನು ಬಂಧಿಸಿದ್ದೇವೆ. ಅವರ ಬಿಡುಗಡೆಗೆ ಕೂಡಲೇ ಹಣ ನೀಡಿ ಎಂದಿದ್ದಾರೆ. ಹೆತ್ತವರು ಆತಂಕಿತರಾಗಿ ಶಾಲೆಗಳಲ್ಲಿ ವಿಚಾರಿಸಿದಾಗ ಅವರ ಮಕ್ಕಳು ಶಾಲೆಯಲ್ಲಿ ಸುರಕ್ಷಿತರಾಗಿರುವುದು ಗೊತ್ತಾಗಿದೆ. ಕರೆ ಬಂದಿರುವ ಸಂಖ್ಯೆಗಳನ್ನು ಪರಿಶೀಲಿಸಿದಾಗ ಪೋಲೆಂಡ್‌, ಪಾಕಿಸ್ಥಾನ ದೇಶಗಳ ಕೋಡ್‌ ಸಂಖ್ಯೆಯನ್ನು ಹೊಂದಿರುವುದು ಕಂಡುಬಂದಿದೆ’ ಎಂದು ತಿಳಿಸಿದ್ದಾರೆ.

ಸದ್ಯ ಈ ವಿಚಾರ ಮಂಗಳೂರಿನ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಥಮ ಪಿಯುಸಿಯ ಮಕ್ಕಳ ಹೆತ್ತವರ ನಂಬರ್‌ ವಂಚಕರ ಕೈಗೆ ಸಿಕ್ಕಿದ್ದು ಹೇಗೆ ಎಂಬುದು ಇನ್ನೂ ನಿಗೂಢವಾಗಿದೆ. ಇದರ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇಂತಹ ಕರೆಗಳು ಬಂದಾಗ ಹೆತ್ತವರು ಕೂಡ ಎಚ್ಚರಿಕೆ ತೆಗೆದುಕೊಳ್ಳಬೇಕಾಗುತ್ತದೆ. ತಮ್ಮ ಮಕ್ಕಳು ಶಿಕ್ಷಣ ಪಡೆಯುತ್ತಿರುವ ಸಂಸ್ಥೆಯ ಲ್ಯಾಂಡ್‌ಲೈನ್‌ ದೂರವಾಣಿ ಸಂಖ್ಯೆ ಮಾತ್ರವಲ್ಲದೆ ಮೊಬೈಲ್‌ ಸಂಖ್ಯೆ, ಕ್ಲಾಸ್‌ ಟೀಚರ್‌ ಮೊಬೈಲ್‌ ಸಂಖ್ಯೆಯನ್ನು ತೆಗೆದಿಟ್ಟುಕೊಂಡಿರಬೇಕು. ಸಂಶಯ ಬಂದಾಗ ಕೂಡಲೇ ಅವರಿಗೆ ಕರೆ ಮಾಡಿ ತಮ್ಮ ಮಕ್ಕಳ ಸುರಕ್ಷತೆ ಬಗ್ಗೆ ತಿಳಿದುಕೊಳ್ಳಬೇಕು ಎಂದು ಸೈಬರ್ ಭದ್ರತಾ ತಜ್ಞರು ತಿಳಿಸಿದ್ದಾರೆ.

Related posts

ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಲೋಕಾರ್ಪಣೆ: ಸಭಾ ಕಾರ್ಯಕ್ರಮ ಸ್ಥಳ ಬದಲಾವಣೆ

ಮಂಗಳೂರಲ್ಲಿ ಪೊದೆಯ ಮಧ್ಯೆ ದೇವರ ವಿಗ್ರಹಗಳು ಪತ್ತೆ !

ಮದುವೆ ಆಮಂತ್ರಣದಲ್ಲಿ ಉಡುಗೊರೆಯ ಬದಲು ಮೋದಿಗೆ ವೋಟ್ ಹಾಕಲು ಕೇಳಿದ್ದ ವರ, ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು..!