ಕ್ರೈಂದೇಶ-ಪ್ರಪಂಚದೇಶ-ವಿದೇಶವೈರಲ್ ನ್ಯೂಸ್

ಕಾರು ಹತ್ತಿಸಿ ಇಬ್ಬರನ್ನು ಸಾಯಿಸಿದ್ದ ಉದ್ಯಮಿಯ ಅಪ್ರಾಪ್ತ ಪುತ್ರ..! ಕೋರ್ಟ್ ನಿಂದ ವಿಚಿತ್ರ ತೀರ್ಪು..! ಪ್ರಬಂಧ ಬರೆದರೆ ಜಾಮೀನು..!

ನ್ಯೂಸ್ ನಾಟೌಟ್: ಶ್ರೀಮಂತ ಬಿಲ್ಡರ್ ಪುತ್ರನೊಬ್ಬ ಐಶಾರಾಮಿ ಪೊರ್ಶೆ ಕಾರು ಚಲಾಯಿಸಿ, ಇಬ್ಬರು ಮೃತಪಟ್ಟ ಘಟನೆ ಇತ್ತೀಚೆಗೆ ಮುಂಬೈನಲ್ಲಿ ನಡೆದಿತ್ತು. ಅಪ್ರಾಪ್ತ ಬಾಲಕನ ಚಾಲನೆಯಿಂದ ಬೈಕ್‌ನಲ್ಲಿ ತೆರಳುತ್ತಿದ್ದ ಅಮಾಯಕರು ಬಲಿಯಾಗಿದ್ದರು. ಅಪ್ರಾಪ್ತ ಚಾಲಕನಿಗೆ ಇದೀಗ ಬಾಲ ನ್ಯಾಯ ಮಂಡಳಿ ಷರತ್ತುಬದ್ಧ ಜಾಮೀನು ನೀಡಿದೆ. ಜಾಮೀನಿನ ಷರತ್ತು ಭಾರಿ ಚರ್ಚೆಗೆ ಕಾರಣವಾಗಿದೆ. ಅಪಘಾತದ ಕುರಿತು ಪ್ರಬಂಧ, 15 ದಿನ ಟ್ರಾಫಿಕ್ ಪೊಲೀಸರ ಜೊತೆ ಕೆಲಸ ಮಾಡಲು ಜಾಮೀನು ಷರತ್ತಿನಲ್ಲಿ ಹೇಳಲಾಗಿದೆ ಎಮದು ವರದಿ ತಿಳಿಸಿದೆ.

17 ವರ್ಷದ ವೇದಾಂತ್ ಅಗರ್ವಾಲ್ ಅಜಾಗರೂಕತೆಗೆ ಇಬ್ಬರು ಬಲಿಯಾಗಿದ್ದರು. ಘಟನೆ ಬಳಿಕ ಅಪ್ರಾಪ್ತ ವೇದಾಂತ್ ಅಗರ್ವಾಲ್ ವಶಕ್ಕೆ ಪಡೆದು ಬಾಲಾಪರಾಧಿ ಕಾನೂನಿನ ಅನ್ವಯ ನಡೆದುಕೊಂಡಿತ್ತು. ಇಂದು ಬಾಲ ನ್ಯಾಯ ಮಂಡಳಿಗೆ ಹಾಜರುಪಡಿಸಲಾಗಿತ್ತು. ಈ ವೇಳೆ ಘಟನೆ ಕುರಿತು ವಿಚಾರಣೆ ನಡೆಸಿದ ಬಾಲ ನ್ಯಾಯ ಮಂಡಳಿ, ಷರತ್ತುಬದ್ಧ ಜಾಮೀನು ನೀಡಿದೆ.

ಅಪ್ರಾಪ್ತನಾಗಿರುವ ಕಾರಣ ಪೊರ್ಶೆ ಕಾರು ಅಪಘಾತದ ಕುರಿತು ಸುದೀರ್ಘ ಪ್ರಬಂಧ ಬರೆಯುವಂತೆ ಸೂಚಿಸಲಾಗಿದೆ. ಕಾರು ಡ್ರೈವಿಂಗ್, ಅತೀ ವೇಗ, ಘಟನೆ ಕುರಿತು ಪ್ರಬಂಧ ಬರೆಯಲು ಸೂಚಿಸಲಾಗಿದೆ. ಇದರ ಜೊತೆಗೆ ಟ್ರಾಫಿಕ್ ಪೊಲೀಸರ ಜೊತೆ 15 ದಿನ ಕೆಲಸ ಮಾಡಬೇಕು ಎಂದು ಷರತ್ತು ವಿಧಿಸಲಾಗಿದೆ. ಈ ಷರತ್ತಿಗೆ ಒಪ್ಪಿಕೊಂಡಿರುವ ವೇದಾಂತ್ ಅಗರ್ವಾಲ್ ಇದೀಗ ಜಾಮೀನನ ಮೇಲೆ ಬಿಡುಗಡೆಯಾಗಿದ್ದಾರೆ.ಬಾಲ ನ್ಯಾಯ ಮಂಡಳಿ ಷರತ್ತುಗಳು ಇದೀಗ ಚರ್ಚೆಯಾಗುತ್ತಿದೆ.

Click 👇

https://newsnotout.com/2024/05/bengaluru-and-jolly-bike-ride-and-viral-video
https://newsnotout.com/2024/05/narendra-modi-and-teacher-rajak
https://newsnotout.com/2024/05/30-year-old-jyoti-amge-viral-video

Related posts

ಮಾಜಿ ಪ್ರಧಾನಿ ಎಚ್‌.ಡಿ.ದೇವೆಗೌಡ ಆಸ್ಪತ್ರೆಗೆ ದಾಖಲು

ರಾಮಮಂದಿರ ಉದ್ಘಾಟನೆಯ ನಡುವೆ ಕರ್ನಾಟಕಕ್ಕೆ ಬರುತ್ತಿರುವುದೇಕೆ ಮೋದಿ..?ಪ್ರಧಾನಿಯನ್ನು ಸ್ವಾಗತಿಸಲಿರುವ ಸಿಎಂ ಸಿದ್ದು

ಬಿಯರ್‌ ಬಾಟಲ್ ಹಿಡಿದು ಕಾಲೇಜು ಹುಡುಗ-ಹುಡುಗಿಯರ ಮೋಜಿನ ಪಾರ್ಟಿ..!