ಕರಾವಳಿ

ಪುತ್ತೂರು: ‘ಬುರ್ಖಾ ತೆಗೆದು ಒಳಗೆ ಬನ್ನಿ’, ಸರ್ಕಾರಿ ಆಸ್ಪತ್ರೆಯಲ್ಲಿ ವಿವಾದಾತ್ಮಕ ಬೋರ್ಡ್ ಹಾಕಿದ್ದು ಯಾರು..?

ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು (puttur hospital) ಸರ್ಕಾರಿ ಆಸ್ಪತ್ರೆಯಲ್ಲಿ ಹಾಕಲಾಗಿದ್ದ ಸೂಚನಾ ಫಲಕವೊಂದು ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಬುರ್ಖಾ (burkha) ತೆಗೆದು ಒಳಗೆ ಬನ್ನಿ’ ಎಂದು ಬರೆದಿರುವ ಫಲಕ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಬೆಳಕಿಗೆ ಬಂದಿದ್ದು ಹೇಗೆ..?

ಒಂದು ವರ್ಷದ ಹಿಂದೆಯೇ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಈ ಸೂಚನಾ ಫಲಕ ಹಾಕಲಾಗಿತ್ತು. ರೋಗಿಗಳ ಇಸಿಜಿ (ECG) ತೆಗೆಯುವ ರೂಮ್ ಬಾಗಿಲಿನಲ್ಲಿ ಈ ಸೂಚನಾ ಫಲಕ ಹಾಕಲಾಗಿತ್ತು. ಆದರೆ ಈ ಸೂಚನಾ ಫಲಕದ ಫೋಟೋವನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಎರಡು ದಿನಗಳ ಹಿಂದೆ ಹರಿಯಬಿಡಲಾಗಿದೆ.

ಪುತ್ತೂರು ಶಾಸಕರು ಇರುವ ವಾಟ್ಸ್ ಅಪ್ ಗ್ರೂಪ್ ನಲ್ಲೂ ಈ ಪೋಸ್ಟ್ ಕಾಣಿಸಿಕೊಂಡಿತ್ತು. ಪೋಸ್ಟ್ ವೈರಲ್ ಆಗುತ್ತಿದ್ದಂತೆ ಫಲಕ ತೆಗೆಯುವಂತೆ ಆಸ್ಪತ್ರೆಯ ಸಿಬ್ಬಂದಿ ಮೇಲೆ ಒತ್ತಡ ಹೇರಲಾಯಿತು. ಒತ್ತಡದ ಹಿನ್ನೆಲೆಯಲ್ಲಿ ಆಸ್ಪತ್ರೆ ಸಿಬ್ಬಂದಿ ತಕ್ಷಣ ಸೂಚನಾ ಫಲಕ ತೆರವುಗೊಳಿಸಿದರು. ಆದರೂ ಆಸ್ಪತ್ರೆ ವೈದ್ಯರು ಮತ್ತು ನರ್ಸ್ ಗಳು ಬುರ್ಖಾ ತೆಗೆಯದೆ ಇಸಿಜಿ ಮಾಡೋದು ಹೇಗೆಂದು ಗೊಂದಲದಲ್ಲಿದ್ದಾರೆ. ಈ ಪೋಸ್ಟ್ ಮೂಲಕ ಚಿಕಿತ್ಸೆಯಲ್ಲೂ ಧರ್ಮ ಎಳೆ ತಂದಂತಾಗಿದೆ.

Related posts

KSRTC ಯಲ್ಲಿ ಇನ್ನು ಮುಂದೆ ಫೋನ್ ಪೇ, ಗೂಗಲ್ ಪೇ ಮೂಲಕ ಟಿಕೆಟ್..? ಪ್ರಾಯೋಗಿಕ ಪರೀಕ್ಷೆಗೆ ಮುಂದಾದ ಸಾರಿಗೆ ನಿಗಮ

ಪುತ್ತೂರು ಕಾಂಗ್ರೆಸ್ ಅಭ್ಯರ್ಥಿಯಾಗಿ ಅಶೋಕ್ ಕುಮಾರ್ ರೈ,ಅಧಿಕೃತ ಘೋಷಣೆಯೊಂದೇ ಬಾಕಿ

ಸುಬ್ರಹ್ಮಣ್ಯ: ನಿಯತ್ತಿಗೆ ಮತ್ತೊಂದು ಹೆಸರೇ ‘ಶ್ವಾನ’..! ಹಾವನ್ನು ತುಳಿಯಲಿದ್ದ ಮಗುವನ್ನು ಅಪಾಯದಿಂದ ಪಾರು ಮಾಡಿದ ‘ಕರಿಯ’..!ಏನಿದು ಘಟನೆ? ಇಲ್ಲಿದೆ ವರದಿ..