Uncategorized

ಅಣ್ಣ ಕಾಲೇಜಿಗೆ ಹೋಗು ಎಂದದಕ್ಕೆ ಬಾವಿಗೆ ಜಿಗಿದ ತಂಗಿ..!ತಂಗಿ ಪ್ರಾಣ ಕಾಪಾಡಲು ಹೋದ ಅಣ್ಣನೂ ಮೃತ್ಯು

ನ್ಯೂಸ್‌ ನಾಟೌಟ್ :ಅಣ್ಣ ಬೈದ ಎನ್ನುವ ಕ್ಲುಲ್ಲಕ ನೆಪಕ್ಕೆ ಬೇಸತ್ತು ಬಾವಿಗೆ ಜಿಗಿದ ತಂಗಿಯನ್ನು ರಕ್ಷಿಸಲು ಹೋಗಿ ಅಣ್ಣ- ತಂಗಿ ಇಬ್ಬರೂ ಮೃತಪಟ್ಟ ಘಟನೆ ಕಲಬುರಗಿಯಲ್ಲಿ ನಡೆದಿದೆ.ಮೃತರನ್ನು ಸಂದೀಪ್‌ (21) ಮತ್ತು ನಂದಿನಿ (18) ಎಂದು ಗುರುತಿಸಲಾಗಿದೆ. ಈ ಹೃದಯ ವಿದ್ರಾವಕ ಘಟನೆ ಸೋಮವಾರ ಸಂಜೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಪಟಪಳ್ಳಿ ಗ್ರಾಮದಲ್ಲಿ ನಡೆದಿದೆ.

ತಂಗಿ ನಂದಿನಿಗೆ ಕಾಲೇಜಿಗೆ ಹೋಗು ಎಂದು ಅಣ್ಣ ಸಂದೀಪ್‌ ಬೈದು ಬುದ್ಧಿವಾದ ಹೇಳಿದ್ದಾನೆ.ಇಷ್ಟಕ್ಕೆ ಬೇಸರಗೊಂಡ ನಂದಿನಿ ಹತ್ತಿರದ ಬಾವಿಗೆ ಹೋಗಿ ಜಿಗಿದಿದ್ದಾಳೆ. ಇತ್ತ ತಂಗಿ ಬಾವಿಗೆ ಹಾರಿದ ವಿಚಾರ ತಿಳಿಯುತ್ತಿದ್ದಂತೆಯೇ ಅಣ್ಣ ಸಂದೀಪ್‌ ಆಕೆಯನ್ನು ರಕ್ಷಣೆ ಮಾಡಲೆಂದು ತಾನೂ ಬಾವಿಗೆ ಹಾರಿದ್ದಾನೆ. ಪರಿಣಾಮ ಈಜು ಬಾರದೆ ತಂಗಿಯ ಜೊತೆ ಆತನೂ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಬಾವಿಯ ಪಕ್ಕದಲ್ಲಿ ಮೃತ ನಂದಿನಿ ತಲೆಯಲ್ಲಿದ್ದ ಮುಡಿದುಕೊಂಡ ಹೂವು ಬಿದ್ದಿರುವುದನ್ನು ಗಮನಿಸಿದ ಪಾಲಕರಿಗೆ ಅನುಮಾನ ಬಂದಿದೆ. ಹುಡುಕಾಟ ನಡೆಸಿದಾಗ ಅಣ್ಣ-ತಂಗಿಯ ಶವ ಪತ್ತೆಯಾಗಿದೆ.ಈ ಬಗ್ಗೆ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಡಿವೈಎಸ್.ಪಿ ಎಸ್.ಎಸ್ ಹಿರೇಮಠ ತಿಳಿಸಿದ್ದಾರೆ.

Related posts

ನಾಲಗೆ ಬಣ್ಣ,ಆಕಾರಗಳಿಂದಲೇ ವ್ಯಕ್ತಿಗಳ ಗುಣ ಏನೆಂದು ತಿಳಿಬಹುದು, ಅರೆ ಅದ್ಹೇಗೆ? ಆಶ್ಚರ್ಯವಾಗುತ್ತಿದೆಯಾ?

ಬೈದ್ರೆ ಸಾಕು ಊರಿಡೀ ಅಟ್ಟಾಡಿಸುತ್ತೆ ಈ ಕೋಣ..!

ಮಹಿಳೆಯರಿಗೆ ಶುಭ ಸುದ್ದಿ..!ಕೇಂದ್ರ ಸರಕಾರದಿಂದ ತಿಂಗಳಿಗೆ 35 ಸಾವಿರ ರೂ.; ಇದರ ಪ್ರಯೋಜನವನ್ನು ಯಾರೆಲ್ಲ ಪಡೆದುಕೊಳ್ಳಬಹುದು?ಈ ವರದಿ ನೋಡಿ..