ದೇಶ-ಪ್ರಪಂಚ

ಕಂದಮ್ಮಗಳಿಗೆ ವಿಷವುಣಿಸಿ ಟ್ರಂಕ್‌ನಲ್ಲಿ ತುಂಬಿಸಿದ್ಯಾರು?ಹೆತ್ತವರಿಗೆ ಈ ಮೂವರು ಮುಗ್ಧ ಮಕ್ಕಳು ಭಾರವಾದರೇ?ಏನಿದು ಹೃದಯ ವಿದ್ರಾವಕ ಘಟನೆ?

ನ್ಯೂಸ್ ನಾಟೌಟ್ : ಮನೆಯಲ್ಲಿ ಮಕ್ಕಳಿದ್ದು, ಎಲ್ಲಾದರೂ ಹೊರಗಡೆ ಹೋದಾಗ ಚಿಂತೆ ಕಾಡುತ್ತಲೇ ಇರುತ್ತೆ.ಸ್ವಲ್ಪ ತಡವಾದರೂ ದೇವರೇ ಮಕ್ಕಳು ಸೇಫ್ ಆಗಿ ಮನೆ ತಲುಪಲಿ ಎನ್ನುವ ಪ್ರಾರ್ಥನೆಯನ್ನು ಮನಸ್ಸಲ್ಲಿಯೇ ಪೋಷಕರು ಮಾಡುತ್ತಾರೆ.ಆದರೆ ಇಲ್ಲೊಂದೆಡೆ ಒಂದೇ ಮನೆಯ ಮೂವರು ಹೆಣ್ಣುಮಕ್ಕಳು ನಿಗೂಢವಾಗಿ ಅಂತ್ಯವಾಗಿರುವ ಘಟನೆ ಬಗ್ಗೆ ವರದಿಯಾಗಿದೆ.ಅದು ಕೂಡ ಪೋಷಕರ ಮನೆ ಸಮೀಪವೇ ಟ್ರಂಕ್‌ನಲ್ಲಿ ಮೂವರು ಅಕ್ಕ ತಂಗಿಯರ ದೇಹ ಪತ್ತೆಯಾಗಿರುವ ಹೃದಯ ವಿದ್ರಾವಕ ಘಟನೆ ಚಂಡೀಗಢದ ಜಲಂಧರ್‌ ಜಿಲ್ಲೆಯಲ್ಲಿ ನಡೆದಿದೆ. 

ಕಾನ್ಪುರ ಗ್ರಾಮದಲ್ಲಿ ವಾಸಿಸುತ್ತಿದ್ದ ವಲಸೆ ಕುಟುಂಬವೊಂದಕ್ಕೆ ೫ ಮಕ್ಕಳಿದ್ದರು.ಐದು ಮಕ್ಕಳ ಪೈಕಿ ಅಮೃತ (9), ಶಕ್ತಿ (7) ಮತ್ತು ಕಾಂಚನ (4) ಎಂಬ ಮೂವರು ಚಿಕ್ಕ ಮಕ್ಕಳು ದುರಂತ ಅಂತ್ಯವನ್ನೇ ಕಂಡಿದ್ದಾರೆ.ಈ ದೇಹವು ಭಾನುವಾರ ಅವರದೇ ಮನೆಯ ಟ್ರಂಕ್‌ನಲ್ಲಿ ಸಿಕ್ಕಿವೆ. ಭಾನುವಾರ ಕೆಲಸದಿಂದ ಹಿಂದಿರುಗಿದ ಮಕ್ಕಳು ಕಾಣದಿದ್ದಾಗ ಅವರ ಪೋಷಕರು ಮಕ್ಸೂದನ್‌ ಪೊಲೀಸ್ ಠಾಣೆಯಲ್ಲಿ ಮಕ್ಕಳು ಕಾಣೆಯಾಗಿದ್ದರ ಬಗ್ಗೆ ದೂರು ದಾಖಲಿಸಿದ್ದಾರೆ.

ಇದಾದ ಬಳಿಕ ಬಾಲಕಿಯರ ತಂದೆಗೆ ವಿಪರೀತ ಕುಡಿತದ ಚಟ ಹೊಂದಿದ್ದ ಕಾರಣ ಮನೆ ಖಾಲಿ ಮಾಡುವಂತೆ ಅವರ ಬಾಡಿಗೆ ಮನೆಯ ಮಾಲೀಕರು ಆದೇಶ ನೀಡಿದ್ದರು ಎನ್ನಲಾಗಿದೆ.ಇದಕ್ಕಾಗಿಯೇ ಮನೆಯಲ್ಲಿರುವ ವಸ್ತುಗಳನ್ನು ಸ್ಥಳಾಂತರ ಮಾಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಮೂವರು ಮಕ್ಕಳ ಬಗ್ಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿರುವ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಈ ಘಟನೆ ಕೆಲವು ಅನುಮಾನಗಳನ್ನು ಹುಟ್ಟು ಹಾಕಿತ್ತು. ಭಾನುವಾರ ಈ ಘಟನೆ ನಡೆದಿದ್ದು, ಬಳಿಕ ವಿಚಾರಣೆ ನಡೆಸಿದ ಪೊಲೀಸರು ಮಕ್ಕಳ ಪೋಷಕರನ್ನೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದಾರೆ. ಸುಶೀಲ್ ಮಂಡಲ್ ಹಾಗೂ ಮೀನು ಬಂಧಿತ ದಂಪತಿ ಎಂದು ತಿಳಿದು ಬಂದಿದೆ.

ಇವರಿಗೆ ಒಟ್ಟು ಐವರು ಮಕ್ಕಳಿದ್ದರು. ಇವರಲ್ಲಿ ಕೊನೆಯ ಹೆಣ್ಣು ಮಗು ಹಾಗೂ 2 ವರ್ಷದ ಗಂಡು ಮಗುವನ್ನು ಜೊತೆಯಲ್ಲೇ ಇವರು ಕೆಲಸದ ಸ್ಥಳಕ್ಕೆ ಕರೆದೊಯ್ಯುತ್ತಿದ್ದರು. ಉಳಿದ ಮೂವರು ಮಕ್ಕಳಿಗೆ ವಿಷ ಉಣಿಸಿದ್ದಾರೆ. ದಂಪತಿ ಮಕ್ಕಳನ್ನು ಟ್ರಂಕ್‌ಗೆ ತುಂಬಿಸಿ ಮನೆ ಹಿಂದೆ ಎಸೆದಿದ್ದರು. ಪೊಲೀಸ್ ತನಿಖೆ ವೇಳೆ ಮಕ್ಕಳನ್ನು ತಾವೇ ಈ ಕೃತ್ಯ ಮಾಡಿದ್ದಾಗಿ ದಂಪತಿ ಒಪ್ಪಿಕೊಂಡಿದ್ದಾರೆ.  ಬಡತನ ಹಾಗೂ ಮಕ್ಕಳ ವೆಚ್ಚ ಬರಿಸಲಾಗದ್ದಕ್ಕೆ ಮಕ್ಕಳಿಗೆ ವಿಷ ನೀಡಲಾಗಿದೆ ಎಂದು ದಂಪತಿ ಹೇಳಿದ್ದಾರೆ. ಮೂವರು ಮಕ್ಕಳು ಭಾನುವಾರದಿಂದ ನಾಪತ್ತೆಯಾಗಿದ್ದರು.ಹೀಗಾಗಿ ಶೋಧ ನಡೆಸಿದಾಗ ಟ್ರಂಕ್‌ನಲ್ಲಿ ಮಕ್ಕಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

Related posts

ಮತದಾನ ವೇಳೆ ಗುಂಡಿನ ದಾಳಿ, ಇವಿಎಂಗಳು ಪುಡಿ-ಪುಡಿ..! 11 ಮತಗಟ್ಟೆಗಳಲ್ಲಿ ಮರು ಮತದಾನ

ಬರುತ್ತಿದೆ ಬಣ್ಣ ಬದಲಾಯಿಸುವ ವಿಶ್ವದ ಮೊದಲ ಕಾರು

ಅಯೋಧ್ಯೆ ರಾಮಲಲ್ಲಾ ಶಿಲ್ಪಿ ಅರುಣ್ ಯೋಗಿರಾಜ್‌ಗೆ 12 ಲಕ್ಷ ರೂ.ಬಾಕಿ ಉಳಿಸಿಕೊಂಡ ಸರ್ಕಾರ..!8 ವರ್ಷಗಳು ಉರುಳಿದರೂ ಹಣ ಕೊಟ್ಟಿಲ್ಲವೇಕೆ?