ಸುಳ್ಯ

ಮಂಡೆಕೋಲು: ಫೆ.25ರಂದು ಆಧಾರ್ ನೋಂದಣಿ-ತಿದ್ದುಪಡಿ ಹಾಗೂ ಬೃಹತ್ ರಕ್ತದಾನ ಶಿಬಿರ

ನ್ಯೂಸ್ ನಾಟೌಟ್: ಫೆ.25 ಭಾನುವಾರದಂದು ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದಲ್ಲಿ ಅಮರ ಸಂಘಟನಾ ಸಮಿತಿ (ರಿ.) ಸುಳ್ಯ ಆಶ್ರಯದಲ್ಲಿ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ, ಪುತ್ತೂರು ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ಹಾಗೂ ಮಂಡೆಕೋಲು ಗ್ರಾಮ ಪಂಚಾಯತ್ ಸಹಕಾರದೊಂದಿಗೆ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಕಾರ್ಯಕ್ರಮ ನಡೆಯಲಿದೆ.

ಇದೇ ವೇಳೆ ಬೃಹತ್ ರಕ್ತದಾನ ಶಿಬಿರವನ್ನು ಕೂಡ ಆಯೋಜಿಸಲಾಗಿದೆ. ಈ ಕಾರ್ಯಕ್ರಮವು ಮಂಡೆಕೋಲು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಲಿದೆ. ಆಧಾರ್ ನೊಂದಾಣಿ ಹಾಗೂ ತಿದ್ದುಪಡಿ ಶಿಬಿರ ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಮತ್ತು ಬೃಹತ್ ರಕ್ತದಾನ ಶಿಬಿರ ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದೆ. ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆಯಬೇಕಾಗಿ ಸಂಘಟಕರು ವಿನಂತಿಸಿದ್ದಾರೆ.

Related posts

ಸುಳ್ಯದಲ್ಲಿ ಊಟ ಸವಿದ ಖ್ಯಾತ ಸಮಾಜ ಸೇವಕ! ವಿವಿಧ ವೇಷಗಳ ಮೂಲಕ ರಂಜಿಸಿ, ಹಲವರ ಬಾಳಿಗೆ ಬೆಳಕಾದ ರವಿ ಕಟಪಾಡಿ!

ಆಲೆಟ್ಟಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಕುಸುಮಾವತಿ ನಿಧನ

ಮಲೆನಾಡಿನ ಜನರ ಹಕ್ಕುಗಳ ರಕ್ಷಣೆಗೆ ವಿಶೇಷ ಗ್ರಾಮಸಭೆಗೆ ಒತ್ತಾಯ, ಮಲೆನಾಡು ಜಂಟಿ ಕ್ರಿಯಾ ಸಮಿತಿ (ರಿ) ಮತ್ತು ರೈತ ಹಿತರಕ್ಷಣಾ ವೇದಿಕೆ (ರಿ) ಕೊಲ್ಲಮೊಗ್ರು-ಕಲ್ಮಕಾರು, ರೈತ ಸಂಘದಿಂದ ಸುದ್ದಿಗೋಷ್ಠಿ