Uncategorized

ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ತಕ್ಕಪಾಠ: ಅಣ್ಣಾಮಲೈ

ನ್ಯೂಸ್ ನಾಟೌಟ್: ಬಿಜೆಪಿ ಡಬಲ್ ಇಂಜಿನ್‌ನಲ್ಲಿ ಮುಂದೆ ಹೋಗುತ್ತಿದ್ದರೆ, ಕಾಂಗ್ರೆಸ್ ಮಾತ್ರ ರಿವರ್ಸ್ ಗೇರ್‌ನಲ್ಲಿ ಹಿಂದೆ ಸಾಗುತ್ತಿದೆ. ಇಷ್ಟಾದರೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಮಾನಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಹೀಗಾಗಿ ಕಾಂಗ್ರೆಸ್‌ಗೆ ಚುನಾವಣೆ ಯಲ್ಲಿ ತಕ್ಕ ಪಾಠ ಕಲಿಸುವ ಕೆಲಸ ಮತದಾರರು ಮಾಡಬೇಕಾಗಿದೆ ಎಂದು ಕರ್ನಾಟಕ ಬಿಜೆಪಿ ಚುನಾವಣೆಯ ಸಹ ಪ್ರಭಾರಿ, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿದರು.

ವಿಟ್ಲ ಪೇಟೆಯಲ್ಲಿ ರೋಡ್ ಶೋ ನಡೆಸಿದ ಬಳಿಕ ಸಭಾ ಕಾರ್ಯಕ್ರಮದಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡಿದರು. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದೆ . ಇದನ್ನು ಗಮನಿಸಿದ ಕೇಂದ್ರದ ನಾಯಕರು ಜನರ ಬಳಿಗೆ ಬರುತ್ತಿದ್ದಾರೆ. ಇದು ರಾಜ್ಯದ ನಾಯಕರಿಗೆ ಕೆಲಸ ಮಾಡಲು ಇನ್ನಷ್ಟು ಹುರುಪು ನೀಡಿದೆ. ರಾಜ್ಯಾದ್ಯಂತ ಮತದಾರರು ಬಿಜೆಪಿ ಪರ ಒಲವು ಹೊಂದಿದ್ದು, ಖಂಡಿತವಾಗಿ ಬಿಜೆಪಿ ಸರ್ಕಾರ ಈ ಬಾರಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಗ್ಯಾರೆಂಟಿ ಕಾರ್ಡ್‌ ಮೂಲಕ ಜನರನ್ನು ಮರುಳು ಮಾಡುವ ಕೆಟ್ಟ ಸಾಹಸಕ್ಕೆ ಮುಂದಾಗಿದೆ. ತಮಿಳುನಾಡಿನಲ್ಲಿ ಕೂಡ ಚುನಾವಣೆ ಸಂದರ್ಭ ಆಡಳಿತರೂಡ ಪಕ್ಷ ತಿಂಗಳಿಗೆ 2 ಸಾವಿರ ರೂ. ನೀಡುವುದಾಗಿ ಘೋಷಿಸಿತ್ತು. ಅಧಿಕಾರಕ್ಕೆ ಬಂದು 2 ವರ್ಷ ಕಳೆಯಿತು ಇದುವರೆಗೆ 2 ರೂಪಾಯಿ ಕೂಡ ಕೊಡಲು ಆಗಲಿಲ್ಲ. ಇದು ಕಾಂಗ್ರೆಸ್‌ನ ಅಸಹಾಯಕತೆಯನ್ನು ತೋರಿಸುತ್ತದೆ ಎಂದು ಅಣ್ಣಾಮಲೈ ಹೇಳಿದರು.

ಸಿದ್ದರಾಮಯ್ಯ ಭ್ರಷ್ಟಾಚಾರದ ಬಗ್ಗೆ ಮಾತಾಡುತ್ತಾರೆ. ಆದರೆ ಕಾಂಗ್ರೆಸಿಗರು ಕುಡಿಯುವ ನೀರಿನಿಂದ ಹಿಡಿದು 2ಜಿ ವರೆಗೆ ಎಲ್ಲದರಲ್ಲೂ ಭ್ರಷ್ಟಾಚಾರ ನಡೆಸಿದ್ದಾರೆ. ಇದಕ್ಕೆ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಉದಾಹರಣೆ.

ಪ್ರಧಾನಿಯನ್ನು ವ್ಯಂಗ ಮಾಡುವ ಕಾಂಗ್ರೆಸಿಗರಿಗೆ ಮತ್ತು ಭ್ರಷ್ಟಾಚಾರ ದ ಕೂಪ ಆಗಿರುವ ಕಾಂಗ್ರೆಸ್‌ಗೆ ಈ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸಬೇಕಿದೆ. ರಾಜ್ಯದಲ್ಲಿ 130ಕ್ಕೂ ಹೆಚ್ಚಿನ ಸ್ಥಾನಗಳನ್ನು ಪಡೆದು ಕಾಂಗ್ರೆಸ್‌ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು. ಅಭಿವೃದ್ದಿ ಕಾರ್ಯಗಳನ್ನು ಇನ್ನಷ್ಟು ಮಾಡಲು ಮತದಾರರು ಅವಕಾಶ ನೀಡಬೇಕು ಎಂದರು.

ಶಾಸಕ ಸಂಜೀವ ಮಠಂದೂರು ಮಾತನಾಡಿ, ಬಿಜೆಪಿ ಸರ್ಕಾರ ಆತ್ಮನಿರ್ಭರ ಯೋಜನೆ ಮೂಲಕ ಜನರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡುತ್ತಿದೆ. ಡಬಲ್ ಇಂಜಿನ್‌ ಸರ್ಕಾರವನ್ನು ಮತದಾರರು ಮತ್ತೊಮ್ಮೆ ಆಯ್ಕೆ ಮಾಡಬೇಕೆಂದು ವಿನಂತಿಸಿದರು.

ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಕ್ಷೇತ್ರದ ಮೂಲೆ ಮೂಲೆಗಳಿಗೂ ತಲುಪಿಸುವ ಕೆಲಸ ನಡೀತಿದೆ. ಅದನ್ನು ಮತವಾಗಿ ಪರಿವರ್ತಿಸುವ ಕೆಲಸ ನಡೆಯುತ್ತಿದೆ. ಕಾರ್ಯಕರ್ತರ ಶ್ರಮದಿಂದ ಬಿಜೆಪಿ ಬೆಳೆದು ಬಂದಿದೆ. ಇಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ ಎಂಬ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ ಎಂದರು.

ರಾಷ್ಟ್ರೀಯ ಮಹಿಳಾ ಮೋರ್ಚಾದ ಸದಸ್ಯೆ ಬಿಂದು ಸುರೇಶ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬುಡಿಯಾರು ರಾಧಾಕೃಷ್ಣ ರೈ, ರೈತ ಮೋರ್ಚಾ ಕಾರ್ಯದರ್ಶಿ ರೇಣುಕಾ ಪ್ರಸಾದ್, ಸಹಜ್ ರೈ, ನವೀನ್ ಪಡನೂರು, ಸುನಿಲ್ ದಡ್ಡ, ಕಿಶೋರ್ ಕೊಟ್ಯಾಡಿ, ಮೀನಾಕ್ಷಿ ಶಾಂತಿಗೋಡು, ಕೆ. ಟಿ. ಶೈಲಜಾ ಭಟ್, ಯಶಸ್ವಿನಿ ಶಾಸ್ತ್ರೀ ಮೊದಲಾದವರು ಉಪಸ್ಥಿತರಿದ್ದರು. ವಿಟ್ಲ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಅರುಣ್ ವಿಟ್ಲ ಸ್ವಾಗತಿಸಿ ಮೋಹನದಾಸ ಉಕ್ಕುಡ ಕಾರ್ಯಕ್ರಮ ನಿರೂಪಿಸಿದರು.

Related posts

ಮಂಗಳೂರು: ನಕಲಿ ದಾಖಲೆ ನೀಡಿ ಪಾಸ್‌ಪೋರ್ಟ್ ಪಡೆದ ಬಾಂಗ್ಲಾ ಪ್ರಜೆ..! ಪಶ್ಚಿಮ ಬಂಗಾಳದ ಮೂಲಕ ಭಾರತ ಪ್ರವೇಶಿಸಿ ಉಡುಪಿಗೆ ಬಂದಿದ್ದ ಆರೋಪಿ..!

Kerala High Court: ಮಗುವಿಗೆ ಹೆಸರಿಡುವ ವಿಚಾರದಲ್ಲಿ ಅಪ್ಪ-ಅಮ್ಮ ಕಿತ್ತಾಟ..! ಮುದ್ದಾದ ಮಗುವಿಗೆ ತಾನೇ ಹೆಸರನ್ನಿಟ್ಟ ಕೇರಳ ಹೈಕೋರ್ಟ್..!

ರಾಜ್ಯದಲ್ಲಿ ಕೊರೋನಾದಿಂದ 30 ಸಾವು: ಬೆಂಗಳೂರಿನಲ್ಲಿ 411 ಸೇರಿ 1,769 ಕೊರೋನಾ ಪ್ರಕರಣ ಪತ್ತೆ!