ನ್ಯೂಸ್ ನಾಟೌಟ್ : ವಾಮಂಜೂರಿನಲ್ಲಿ ವ್ಯಕ್ತಿಯೋರ್ವರಿಗೆ ಹತ್ಯೆಗೆ ಯತ್ನಿಸಿದ್ದಾರೆ ಎನ್ನುವ ಪೋಸ್ಟ್ ವೊಂದು ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ.ಬಿಜೆಪಿಯ ಕಾರ್ಪೊರೇಟರ್ ಪತಿ ರಘು ಸಾಲಿಯಾನ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ,ಹತ್ಯೆಗೆ ಯತ್ನವಾಗಿದೆ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.
ಪೋಸ್ಟ್ ನಲ್ಲೇನಿದೆ?
ಬಿಪಿನ್ ವಾಮಂಜೂರು ಹುಲಿ ತಂಡದ ಸದಸ್ಯ ಹಾಗೂ ಕಾಂಗ್ರೆಸ್ ಕಾರ್ಯಕರ್ತ.ಬಿಜೆಪಿ ಕಾರ್ಪೊರೇಟರ್ ಪತಿ ರಘು ಸಾಲಿಯಾನ್ ಅವರ ಮದ್ಯೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ.ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆಗೆ ಯತ್ನಿಸಿದ ಘಟನೆ ಕೂಡ ನಡೆದಿದೆ ಎಂದು ಹೇಳಲಾಗಿದೆ.
ನಾಗರೀಕರ ಒತ್ತಾಯ:
ರಘು ಅವರ ಮೇಲಿನ ಹಲ್ಲೆ ಖಂಡನೀಯ. ಆದಷ್ಟು ಬೇಗ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ಆರೋಪಿ ರೌಡಿ ಶೀಟರ್ ಆಗಿದ್ದು ,ಆತನ ಈ ರೌಡಿ ವರ್ತನೆಗೆ ಪೊಲೀಸ್ ಇಲಾಖೆ ಸರಿಯಾದ ಕ್ರಮ ತೆಗೆದುಕೊಂಡು ವಾಮಂಜೂರು ಪರಿಸರದಲ್ಲಿ ಶಾಂತಿ ಕಾಪಾಡಬೇಕೆಂದು ವಾಮಂಜೂರ್ ನಾಗರೀಕರು ಒತ್ತಾಯಿಸಿದ್ದಾರೆ.ಈ ಪೋಸ್ಟ್ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.
ರಘುವಣ್ಣನ ಜತೆ ನಾವಿದ್ದೇವೆ:
ಸದಾ ವಾಮಂಜೂರು ಅಭಿವೃದ್ಧಿಗಾಗಿ ಶ್ರಮಿಸಿದ ರಘು ಅಣ್ಣನ ಜತೆ ನಾವಿದ್ದೇವೆ. (We stand with u Raghu Anna) ಎಂದು ವಾಮಂಜೂರು ಜನತೆ ಬೆಂಬಲವಾಗಿ ನಿಂತಿರುವ ಸುದ್ದಿ ಕುರಿತು ಚರ್ಚೆಗಳು ನಡಿತಿವೆ.