ಕರಾವಳಿ

ಉಪ್ಪಿನಂಗಡಿಯಲ್ಲಿ ಭೀಕರ ರಸ್ತೆ ಅಪಘಾತ:ಬೈಕ್ ಸವಾರ ಗಂಭೀರ

ನ್ಯೂಸ್ ನಾಟೌಟ್ : ಉಪ್ಪಿನಂಗಡಿಯಲ್ಲಿ ಇಂದು ಸಂಜೆ ವೇಳೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ.ಬೈಕ್ ಮತ್ತು ರಿಕ್ಷಾ ಡಿಕ್ಕಿಯಾಗಿರುವುದರ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾರೆ.

ಉಪ್ಪಿನಂಗಡಿ ಮುಖ್ಯ ಪೇಟೆ ಬಳಿ ಈ ಅಪಘಾತ ಸಂಭವಿಸಿದ್ದು,ಶೀನ ಗಂಭೀರ ಗಾಯಗೊಂಡಿರುವ ವ್ಯಕ್ತಿ.ಅವರು ಉಪ್ಪಿನಂಗಡಿಯ ಹೆಸರಾಂತ ಡಾಕ್ಟರ್ ಶೌರಿ ಶೆಣೈ ಅವರ ಕ್ಲಿನಿಕ್ ನಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರು.ಎಂದಿನಂತೆ ಸಂಜೆ ವೇಳೆ ಮನೆಗೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಬಂದ ರಿಕ್ಷಾ ಡಿಕ್ಕಿ ಹೊಡೆದಿದೆ.ಗಾಯಾಳುವನ್ನು ಕೂಡಲೇ ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳದಲ್ಲಿ ನೂರಾರು ಜನ ಜಮಾಯಿಸಿದ್ದು,ಕೆಲ ಕಾಲ ಸಂಚಾರಕ್ಕೂ ಅಡಚಣೆಯಾಗಿತ್ತು ಎಂದು ತಿಳಿದು ಬಂದಿದೆ.

Related posts

ಬೆಳ್ತಂಗಡಿ: ಟ್ರೆಂಡಿಂಗ್ ಜೀನ್ಸ್ ಧರಿಸಿ ಮಾರುಕಟ್ಟೆಗೆ ಬಂದಾತನ ಪ್ಯಾಂಟ್ ಹೊಲಿದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಪುಂಡರು..!, ನೊಂದ ಯುವಕ ಆತ್ಮಹತ್ಯೆಗೆ ಯತ್ನ

‘ಪ್ರವೀಣ್ ಹೊಡೆದವ್ರು ಯಾರು ಅಂತ ಗೊತ್ತಾಗಿದೆ’

ಮರ್ಕಂಜ: ತಂದೆಯ ಮೇಲೆ ಮಗನಿಂದಲೇ ಹಲ್ಲೆ, ಆಸ್ಪತ್ರೆಗೆ ದಾಖಲಾದ ಜನ್ಮ‌ಕೊಟ್ಟ ತಂದೆ