ಕರಾವಳಿ

ಜನ‍ಪ್ರಿಯನಟಿಯ ಶವಅನುಮಾನಾಸ್ಪದರೀತಿಯಲ್ಲಿ ಪತ್ತೆ

ನ್ಯೂಸ್ ನಾಟೌಟ್: ಸಿನಿಮಾ ರಂಗದ ಖ್ಯಾತ ನಟಿಯೊಬ್ಬರು ಅನುಮಾನಸ್ಪದವಾಗಿ ಸಾವಿಗೀಡಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಭೋಜಪುರಿ ಚಿತ್ರರಂಗದ ಜನಪ್ರಿಯ ನಟಿ ಹಾಗೂ ಡ್ಯಾನ್ಸರ್ ಆಕಾಂಕ್ಷಾ ದುಬೆ ಎಂದು ಗುರುತಿಸಲಾಗಿದೆ. ವಾರಾಣಸಿಯ ಹೋಟೆಲ್‌ ಒಂದರಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.  ಆಕಾಂಕ್ಷಾ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.  ಪ್ರಾಥಮಿಕವಾಗಿ ಇದೊಂದು ಆತ್ಮಹತ್ಯೆ ಇರಬಹುದು ಎಂದು ಪೊಲೀಸರು ಶಂಕಿಸಿರುವುದಾಗಿ ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ.

25 ವರ್ಷದ ಈ ನಟಿ ತಮ್ಮ ಮುಂದಿನ ಚಿತ್ರಕ್ಕಾಗಿ ವಾರಣಾಸಿಯಲ್ಲಿ ಶೂಟಿಂಗ್‌ಗೆ ತೆರಳಿದ್ದರು. ತಮ್ಮ ಪಾಲಿನ ಶೂಟಿಂಗ್ ಮುಗಿಸಿ ವಾರಾಣಸಿಯ ಸಾರಾನಾಥ್ ಹೋಟೆಲ್‌ನಲ್ಲಿ ತಂಗಿದ್ದರು. ಇಂದು ಬೆಳಗ್ಗೆ ಹೋಟೆಲ್ ಸಿಬ್ಬಂದಿಯಿಂದ ಘಟನೆ ಬೆಳಕಿಗೆ ಬಂದಿದೆ. ಭೋಜಪುರಿ ಚಿತ್ರರಂಗದ ಕನಸಿನ ರಾಣಿಯಂದು ಗುರುತಿಸಿಕೊಂಡಿದ್ದ ಮಿರ್ಜಾಪುರ್ ಮೂಲದ ಆಕಾಂಕ್ಷಾ ಅವರು ಐಎಎಸ್ ಅಧಿಕಾರಿ ಆಗಬೇಕೆಂದುಕೊಂಡು ಮುಂಬೈ ಸೇರಿದ್ದರು. ಆದರೆ, ಅಲ್ಲಿಂದ ಭೋಜಪುರಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಹೆಸರು ಮಾಡಿದ್ದರು.

Related posts

ಪುತ್ತೂರಿನಲ್ಲಿ 60 ಕೋಟಿ ರೂ. ವೆಚ್ಚದಲ್ಲಿ ಹಾಲು ಪ್ಯಾಕಿಂಗ್ ಘಟಕ ನಿರ್ಮಾಣ

ಮಡಿಕೇರಿ: ಕೊಡಗಿನ ಕೆಲವೆಡೆ ಸೂರ್ಯನ ಸುತ್ತ ಗೋಚರವಾದ ಉಂಗುರದ ಮಾದರಿ..!,ಸೂರ್ಯ ದೇವ’ನ ಸುತ್ತ ವಿವಿಧ ವರ್ಣಗಳ ಉಂಗುರ ದರ್ಶನದಿಂದ ಪುಳಕಿತರಾದ ಜನ

3 ವರ್ಷದ ಅವಳಿ ಬಾಲಕಿಯರ ಖಾಸಗಿ ಅಂಗವನ್ನು ಸಿಗರೇಟ್ ನಿಂದ ಸುಟ್ಟ ವೈದ್ಯ ದಂಪತಿ:ಅವರು ಮಾಡಿದ ತಪ್ಪಾದರೂ ಏನು?ಬಡಮಕ್ಕಳ ಜೀವದ ಜತೆ ಚೆಲ್ಲಾಟವಾಡಿದ್ರೇ?