Uncategorized

ಶಾಲಾ ಬಾಲಕಿಯರ ಕಿತ್ತಾಟಕ್ಕೆ ಡೇಟಿಂಗ್ ಕಾರಣ

ನ್ಯೂಸ್ ನಾಟೌಟ್: ಡೇಟಿಂಗ್ ಅನ್ನುವ ಪದದ ಅರ್ಥ ಸರಿಯಾಗಿ ಇನ್ನೂ ತಿಳಿಯದ ವಯಸ್ಸಿನಲ್ಲಿಯೇ ಬೆಂಗಳೂರಿನ ಪ್ರತಿಷ್ಠಿತ ಶಾಲೆಯ ವಿದ್ಯಾರ್ಥಿನಿಯರು ಬಾಯ್ ಫ್ರೆಂಡ್ ಗಾಗಿ ನಡು ರಸ್ತೆಯಲ್ಲಿಯೇ ಹೊಡೆದಾಡಿಕೊಂಡಿರುವ ವಿಚಾರ ಈಗ ಭಾರಿ ಚರ್ಚೆಗೆ ಕಾರಣವಾಗಿದೆ.

ನಿನ್ನೆ ತಾನೆ ಸಾಮಾಜಿಕ ಜಾಲತಾಣದಲ್ಲಿ ಬೆಂಗಳೂರಿನ ಅತ್ಯಂತ ಶ್ರೀಮಂತರ ಮಕ್ಕಳ ಶಾಲೆ ಎಂದು ಗುರುತಿಸಿಕೊಂಡಿರುವ ಬಿಷಪ್ ಕಾಟನ್ ಶಾಲೆಯ ಹುಡುಗಿಯರು ಹೊಡೆದಾಡಿಕೊಂಡಿದ್ದ ಬೀದಿ ಜಗಳದ ವಿಡಿಯೋ ವೈರಲ್ ಆಗಿತ್ತು. ಇದೀಗ ಆ ಹೊಡೆದಾಟದ ಹಿಂದೆ 12 ಯುವತಿಯರ ಬಾಯ್ ಫ್ರೆಂಡ್ ಇದ್ದಾನೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಯೋಗೇಶ್ ಎಂಬ ಹುಡುಗ 12 ಜನ ಯುವತಿಯರ ಬಾಯ್ ಫ್ರೆಂಡ್ ಅಂತೆ. ಆತ ಇನ್ನೊಬ್ಬಳು ಹುಡುಗಿಯೊಂದಿಗೆ ಡೇಟಿಂಗ್ ಹೋಗಿದ್ದೇ ಜಗಳಕ್ಕೆ ಕಾರಣವಾಗಿದೆ. ಇದೇ ವಿಚಾರದಲ್ಲಿ ಬಾಲಕಿಯರು ಪರಸ್ಪರ ಹಾಕಿ ಸ್ಟಿಕ್‌ ನಲ್ಲಿ ಹೊಡೆದಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿ ಚರ್ಚೆಯಾಗುತ್ತಿದೆ.

Related posts

ಜಾಲ್ಸೂರು ಗ್ರಾಮ ಪಂಚಾಯತ್ ಗೃಹ ಲಕ್ಷ್ಮೀ ಯೋಜನೆಯ ಮಂಜೂರಾತಿ ಆದೇಶ ಪತ್ರ ವಿತರಣೆ

ಪತಿಯ ಗುಪ್ತಾಂಗಕ್ಕೆ ಬಿಸಿ ನೀರು ಎರಚಿದ ಪತ್ನಿ

ಹೆಚ್ಚುವರಿಯಾಗಿ ರಾಜ್ಯದ 21 ತಾಲೂಕುಗಳು ಸಂಪೂರ್ಣ ಬರಪೀಡಿತ, ಯಾವೆಲ್ಲ ಆ ತಾಲೂಕುಗಳು..? ಶಾಕಿಂಗ್ ನ್ಯೂಸ್ ಕೊಟ್ಟ ಸರ್ಕಾರ, ಭೀಕರ ಬರಕ್ಕೆ ತುತ್ತಾಗಲಿದೆಯೇ ಕರ್ನಾಟಕ..?