ಕರಾವಳಿ

ಪ್ರವೀಣ್ ಹತ್ಯೆ ಪ್ರಕರಣ: ಮತ್ತಿಬ್ಬರನ್ನು ವಶಕ್ಕೆ ಪಡೆದ ಪೊಲೀಸರು

ನ್ಯೂಸ್ ನಾಟೌಟ್ : ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರ್‌ ಹತ್ಯೆ ಪ್ರಕರಣದಲ್ಲಿ ಪೊಲೀಸರು ಮತ್ತಷ್ಟು ಚುರುಕಾಗಿದ್ದಾರೆ. ಕೊಲೆ ಪ್ರಕರಣದಲ್ಲಿ ಇದೀಗ ಇಂಟ್ರೆಸ್ಟಿಂಗ್ ವಿಷಯವೊಂದು ಹೊರಬಿದ್ದಿದೆ. ಬೆಂಗಳೂರಿನಿಂದ ಇಬ್ಬರು ಶಂಕಿತ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ನ್ಯೂಸ್ ನಾಟೌಟ್ ಗೆ ಲಭ್ಯವಾಗಿದೆ.

ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಳ್ಳಾರೆಯ ಶಫೀಕ್, ಝಾಕೀರ್ ಸವಣೂರು ಅವರನ್ನು ಬಂಧಿಸಲಾಗಿತ್ತು. ಅವರು ತನಿಖೆ ವೇಳೆ ನೀಡಿದ ಮಾಹಿತಿ ಆಧರಿಸಿ ಕೇರಳದಲ್ಲಿ ಓರ್ವ ಹಂತಕನ್ನು ವಶಕ್ಕೆ ತೆಗೆದುಕೊಂಡು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ ಒಟ್ಟು ಮೂವತ್ತೆರಡಕ್ಕೂ ಅಧಿಕ ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇವರಲ್ಲಿ ಅನುಮಾನ ಇರುವವರನ್ನು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಉಳಿದವರನ್ನು ಬಿಟ್ಟು ಕಳಿಸಲಾಗಿದೆ ಎನ್ನಲಾಗಿದೆ.

Related posts

ಐವರ್ನಾಡು: ಮೇ8ಕ್ಕೆ ದಿ.ಎನ್‌.ಎಂ.ಬಾಲಕೃಷ್ಣ ಗೌಡರ ಭವ್ಯ ಪುತ್ಥಳಿ ಲೋಕಾರ್ಪಣೆ

ಸುಳ್ಯ:ಗಾಬರಿಯಿಂದ ಓಡುತ್ತಿದ್ದ ಅಜ್ಜಿಗೆ ನೆರವಾದ ಗ್ರಾ.ಪಂ.ಅಧ್ಯಕ್ಷೆ,ವಾರೀಸುದಾರರಿದ್ದಲ್ಲಿ ಕರೆದು ಕೊಂಡು ಹೋಗುವಂತೆ ಮನವಿ

ಬರೋಬ್ಬರಿ 3 ವರ್ಷಗಳ ಬಳಿಕ ಸ್ವದೇಶಕ್ಕೆ ಮರಳಿದ ಯುವಕ,ಅಪರಿಚಿತನಂತೆ ಬಂದು ಹೆತ್ತಮ್ಮನಿಂದ ಮೀನು ಖರೀದಿಸಿದ..!ತಾಯಿ ತನ್ನ ಮಗನೇ ಎಂದು ಕಂಡು ಹಿಡಿದಿದ್ದು ಹೇಗೆ?ವಿಡಿಯೋ ವೈರಲ್..