ಕ್ರೈಂಬೆಂಗಳೂರುವಿಡಿಯೋವೈರಲ್ ನ್ಯೂಸ್

ರಾತ್ರಿ ತೊಡೆಯ ಮೇಲೆ ಪ್ರೇಯಸಿಯನ್ನು ಕೂರಿಸಿಕೊಂಡು ಬೈಕ್ ರೈಡ್‌..! ಸವಾರನ ಬಂಧನ, ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್: ಪ್ರೇಯಸಿಯನ್ನು ತೊಡೆ ಮೇಲೆ ಕೂರಿಸಿಕೊಂಡು ಬೆಂಗಳೂರಿನ ಕೊಡಿಗೇ ಹಳ್ಳಿ ಮೇಲ್ಸೇತುವೆಯಲ್ಲಿ ಬೈಕ್‌ ಸವಾರಿ ಮಾಡಿದಾತನನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಕಾವಲ್‌ ಬೈರಸಂದ್ರ ಬಳಿಯ ಎಂ. ವಿ. ಲೇಔಟ್‌ ನಿವಾಸಿ ಸಿಲಂಬರಸನ್‌, ಮೇ 17 ರಂದು ರಾತ್ರಿ ತನ್ನ ಪ್ರೇಯಸಿಯನ್ನು ತೊಡೆ ಮೇಲೆ ಕೂರಿಸಿಕೊಂಡು ಯಲಹಂಕದಿಂದ ಹೆಬ್ಬಾಳ ಕಡೆಗೆ ಬೈಕ್‌ ಚಾಲನೆ ಮಾಡಿಕೊಂಡು ಹೋಗಿದ್ದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸಿಲಂಬರಸನ್‌ ಎಂಬಾತ ಆತನ ಪ್ರೇಯಸಿ ಜೊತೆ ಹೆಲ್ಮೆಟ್‌ ಧರಿಸದೆ ಬಜಾಜ್ ಪಲ್ಸರ್ 220 ಬೈಕ್‌ನಲ್ಲಿ ಜಾಲಿ ರೈಡ್‌ ಮಾಡಿದ್ದರು. ಈ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಪೊಲೀಸರು ಸಿಲಂಬರಸನ್‌ನನ್ನು ಬಂಧಿಸಿದ್ದಾರೆ.

ಸಿಲಂಬರಸನ್‌, ವೃತ್ತಿಯಲ್ಲಿ ಕ್ಯಾಬ್‌ ಚಾಲಕನಾಗಿದ್ದಾನೆ ಎಂದು ವರದಿ ತಿಳಿಸಿದೆ. ಆತನ ವಿರುದ್ಧ ಇತರೆ ವಾಹನ ಸವಾರರ ಜೀವಕ್ಕೆ ಅಪಾಯವಾಗುವಂತೆ ಅಜಾಗರೂಕತೆಯಿಂದ ಬೈಕ್‌ ಚಾಲನೆ ಮಾಡಿದ, ಹೆಲ್ಮೆಟ್‌ ಧರಿಸದ, ಅತಿ ವೇಗದ ಚಾಲನೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಮತ್ತು ಬೈಕ್‌ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Click 👇

https://newsnotout.com/2024/05/election-and-re-voting-misleading
https://newsnotout.com/2024/05/narendra-modi-and-teacher-rajak
https://newsnotout.com/2024/05/30-year-old-jyoti-amge-viral-video

Related posts

ಹಜ್ ಯಾತ್ರೆಗೆ ತೆರಳಿದ್ದ 90 ಮಂದಿ ಭಾರತೀಯರು ಸಾವು..! ಮೆಕ್ಕಾದಲ್ಲೇ ಅಂತ್ಯಕ್ರಿಯೆಗೆ ಸಿದ್ಧತೆ..?

ಆನೆ ಹಿಂಡು ಕಂಡು ದಾರಿ ಬಿಟ್ಟು ಕೊಟ್ಟ ಹುಲಿರಾಯ!,ವಿಡಿಯೋ ವೈರಲ್, ವ್ಯಾಪಕ ಮೆಚ್ಚುಗೆ

6 ಸಾವಿರ ರೂ.ಗೆ ಮಹಿಳೆಯನ್ನು ಕೆಲಸಕ್ಕೆ ನೇಮಿಸಿ ಊರೂರು ಸುತ್ತಿ ಮಜಾ ಮಾಡಿದ ಸರ್ಕಾರಿ ಶಾಲಾ ಶಿಕ್ಷಕ..! ಕೊನೆಗೂ ವಂಚಕ ಶಿಕ್ಷಕ ಸಿಕ್ಕಿಬಿದ್ದದ್ದು ಹೇಗೆ?