Uncategorized

ಇಂಡಿಗೋ ಏರ್​​ಲೈನ್ಸ್​​ನ ವೆಬ್​​ಸೈಟ್ ಹ್ಯಾಕ್​ ಮಾಡಿದ ಬೆಂಗಳೂರಿನ ಪ್ರಯಾಣಿಕ !

ಬೆಂಗಳೂರು: ಇಂಡಿಗೋ ವಿಮಾನದಲ್ಲಿ  ಪ್ರಯಾಣ ಮಾಡಿದ್ದ ಬೆಂಗಳೂರು ಮೂಲದ ಪ್ರಯಾಣಿಕನೊಬ್ಬ ಇಂಡಿಗೋ ಸಂಸ್ಥೆಯ ವೆಬ್​ಸೈಟ್​​ನ್ನೇ ಹ್ಯಾಕ್​ ಮಾಡಿದ ಘಟನೆ ನಡೆದಿದೆ. ಪ್ರಯಾಣಿಕನ ಹೆಸರು ನಂದನ್​ ಕುಮಾರ್​ ಎಂದಾಗಿದ್ದು, ತಾನು ಹ್ಯಾಕ್​ ಮಾಡಿದ್ದು ಯಾಕೆ ಮತ್ತು ಹೇಗೆ ಎಂಬುದನ್ನು ಸರಣಿ ಟ್ವೀಟ್​ ಮೂಲಕ ಹೇಳಿಕೊಂಡಿದ್ದಾರೆ.

ಅಷ್ಟೇ ಅಲ್ಲ, ಇಂಡಿಗೋ ವೆಬ್​​ಸೈಟ್​​​ನಲ್ಲಿ ಎಷ್ಟು ಸುಲಭವಾಗಿ ತನಗೆ ಬೇಕಾದ ಸೂಕ್ಷ್ಮ ಮಾಹಿತಿಗಳನ್ನು ಪಡೆದೆ ಎಂದು ಹೇಳಿರುವ ನಂದನ್​ ಕುಮಾರ್​, ಏರ್​ಲೈನ್ಸ್​ ಅದನ್ನು ಸರಿಪಡಿಸಿಕೊಳ್ಳಬೇಕು. ಇನ್ನಷ್ಟು ಭದ್ರಪಡಿಸಬೇಕು ಎಂಬ ಸಲಹೆಯನ್ನೂ ನೀಡಿದ್ದಾರೆ. ಅಷ್ಟಕ್ಕೂ ನಂದನ್​ ಕುಮಾರ್​ ವೆಬ್​​ಸೈಟ್ ಹ್ಯಾಕ್​ ಮಾಡಲು ಕಾರಣ ಬ್ಯಾಗ್​ ಕಳೆದುಕೊಂಡಿದ್ದು. ನಂದನ್​ ಬ್ಯಾಗ್​​ ಅವರ ಸಹಪ್ರಯಾಣಿಕರೊಟ್ಟಿಗೆ ಹೋಗಿತ್ತು. ಇದು ಕಣ್ತಪ್ಪಿನಿಂದ ಆದ ಎಡವಟ್ಟಾಗಿತ್ತು. ಆದರೆ ಬ್ಯಾಗ್​​ನ್ನು ಪಡೆಯಲು ಇಂಡಿಗೋ ಕೊಟ್ಟ ಸಹಕಾರ ಸೂಕ್ತವಾಗಿರಲಿಲ್ಲ. ನನ್ನ ಬ್ಯಾಗ್​ನಲ್ಲಿ ಅನೇಕ ಮಹತ್ವದ ವಸ್ತುಗಳು ಇದ್ದುದರಿಂದ ಅದನ್ನು ಪಡೆಯಲೇಬೇಕಾಗಿತ್ತು. ಹೀಗಾಗಿ ಇಂಡಿಗೋ ವೆಬ್​ಸೈಟ್​ ಹ್ಯಾಕ್​ ಮಾಡುವ ಮೂಲಕ ಸಹ ಪ್ರಯಾಣಿಕನ ಫೋನ್​​ ನಂಬರ್ ಪಡೆದೆ ಎಂದು ನಂದನ್​ ಹೇಳಿದ್ದಾರೆ.

Related posts

ಜುಲೈ 18ಕ್ಕೆ ರಾಷ್ಟ್ರಪತಿ ಚುನಾವಣೆ: 21ಕ್ಕೆ ಮತ ಎಣಿಕೆ

ಮುಂಬೈ ರೈಲು ನಿಲ್ದಾಣದಲ್ಲಿ ಭೀಕರ ಕಾಲ್ತುಳಿತ..! 9 ಮಂದಿಗೆ ತೀವ್ರ ಗಾಯ..! ಇಲ್ಲಿದೆ ವಿಡಿಯೋ

ಸಂಪಾಜೆಯಲ್ಲಿ ಬೆಳಗ್ಗೆ ಭೂಕಂಪ ಆಗಿಲ್ಲ..!