ಕರಾವಳಿದಕ್ಷಿಣ ಕನ್ನಡಮಂಗಳೂರು

ಬೆಳ್ತಂಗಡಿ: ತಾಲೂಕು ಕಚೇರಿ ನೋಡಿ ಸಿಟ್ಟಿಗೆದ್ದ ಹರೀಶ್ ಪೂಂಜಾ..! ‘ಏನಿದು ವಾಸನೆ ಮಾರಾಯರೇ..’ತಹಶೀಲ್ದಾರ್ ವಿರುದ್ಧ ಶಾಸಕ ಫುಲ್ ಗರಂ

ನ್ಯೂಸ್ ನಾಟೌಟ್: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ತಾಲೂಕು ಕಚೇರಿ ಮೇಲೆ ಮಂಗಳವಾರ (ಜೂ.2) ಹಠಾತ್ ದಾಳಿ ಮಾಡಿದ್ದಾರೆ. ಈ ವೇಳೆ ಹರೀಶ್ ಪೂಂಜಾ ತಾಲೂಕು ಕಚೇರಿಯ ಅವ್ಯವಸ್ಥೆ ನೋಡಿ ಸಿಕ್ಕಾಪಟ್ಟೆ ಸಿಟ್ಟಿ ಗೆದ್ದಿದ್ದಾರೆ.

ತಾಲೂಕು ಕಚೇರಿಯಲ್ಲಿ ವ್ಯಕ್ತಿಯೊಬ್ಬರಿಗೆ ಸೇರಿದ ಕಡತ ನೀಡುವುದಕ್ಕೆ ಸತಾಯಿಸಿದ್ದಾರೆ, ಈ ಬಗ್ಗೆ ವಿಚಾರಿಸುವುದಕ್ಕೆ ಶಾಸಕರು ಹೋಗಿದ್ದರು ಎನ್ನಲಾಗಿದೆ. ಹಾಗೆ ಹೋದವರಿಗೆ ಬೆಳ್ತಂಗಡಿಯ ತಾಲೂಕು ಕಚೇರಿಯ ಪ್ರತ್ಯಕ್ಷ ದರ್ಶನವಾಗಿದೆ. ಅಲ್ಲಲ್ಲಿ ಕಸ, ಕಡತಗಳನ್ನು ಇಟ್ಟಿರುವ ಜಾಗ ಕಸದ ತೊಟ್ಟಿಯಂತಾಗಿರುವುದನ್ನು ನೋಡಿದ್ದಾರೆ.

ವಾಸ್ತವತೆ ಅರಿವಿಗೆ ಬಂದಾಗ ತಹಶೀಲ್ದಾರ್ ಅವರನ್ನು ಶಾಸಕರು ಪ್ರಶ್ನಿಸಿದ್ದಾರೆ. ಮಾತ್ರವಲ್ಲ ಶೌಚಾಲಯ ಗಬ್ಬು ನಾರುತ್ತಿದ್ದು ಅವ್ಯವಸ್ಥೆ ಆಗರವಾಗಿ ಮಾರ್ಪಟ್ಟಿದೆ. ಇದೆಲ್ಲವನ್ನು ನೋಡಿ ಹರೀಶ್ ಪೂಂಜಾರ ತಾಳ್ಮೆಯ ಕಟ್ಟೆ ಒಡೆದಿದೆ. ‘ಏನಿದು ವಾಸನೆ ಮಾರಾಯರೇ…ಇದು ತಾಲೂಕು ಆಫೀಸಾ..?’ ಯಾರು ಇದನ್ನು ಕ್ಲೀನ್ ಮಾಡುವವರು..? ತಹಶೀಲ್ದಾರರೇ ನೀವು ನಿರ್ವಹಣೆಯನ್ನು ಏಕೆ ಸರಿ ಮಾಡಿಸಿಲ್ಲ’ ಎಂದು ಪ್ರಶ್ನಿಸಿದ್ದಾರೆ. ಸದ್ಯ ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Related posts

ರಜನಿಕಾಂತ್ ಅಭಿನಯದ ‘ಜೈಲರ್’ ಚಿತ್ರದ ಖಳನಟ ಅರೆಸ್ಟ್..! ವಿಮಾನ ನಿಲ್ದಾಣದಲ್ಲಿ ಬಂಧಿಸಿದ ಭದ್ರತಾ ಪಡೆಗಳು..!

ಪುತ್ತೂರು: ಜಯಶ್ರೀ ಮರ್ಡರ್ ಕೇಸ್,ಕೃತ್ಯಕ್ಕೆ ಬಳಸಿದ ಆಯುಧ,ಸ್ಕೂಟರ್ ಪೊಲೀಸ್ ವಶಕ್ಕೆ

ಈಶ್ವರ ಮಂಗಲದಲ್ಲಿ KSRTC ಬಸ್ ಕಂಡೆಕ್ಟರ್‌ ಗೂಂಡಾಗಿರಿ..!