ಸುಳ್ಯ

ಬೆಳ್ಳಾರೆ: ಹಾಡಹಗಲೇ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿ ಕಳ್ಳರು ಪರಾರಿ..!ಗ್ರಾಹಕರ ಸೋಗಿನಲ್ಲಿ ಬಂದ ಖದೀಮರು ಮಾಡಿದ್ದೇನು?

ನ್ಯೂಸ್ ನಾಟೌಟ್‌: ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರವನ್ನು ಎಗರಿಸಿ ಕಳ್ಳರು ಪರಾರಿಯಾಗಿರುವ ಘಟನೆ ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ಪಾಂಬಾರು ಎಂಬಲ್ಲಿಂದ ವರದಿಯಾಗಿದೆ.ಸುಳ್ಯ ತಾಲೂಕಿನ ಐವರ್ನಾಡು ನಿವಾಸಿ ಜಯಂತಿ (೫೦) ಎಂಬವರ ಕತ್ತಿನಿಂದ ಚಿನ್ನದ ಸರವನ್ನು ಎಳೆದೊಯ್ದು ಕಳ್ಳರು ಎಸ್ಕೇಪ್ ಆಗಿದ್ದಾರೆ.

ಜಯಂತಿ ಎಂಬವರು ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ಪಾಂಬಾರು ಎಂಬಲ್ಲಿ ಅಂಗಡಿಯೊಂದರಲ್ಲಿ ವ್ಯಾಪಾರದ ಕೆಲಸ ಮಾಡುತ್ತಿದ್ದರು.ಈ ವೇಳೆ ಮಧ್ಯಾಹ್ನ ಸ್ಕೂಟರಿನಲ್ಲಿ ಬಂದ ಇಬ್ಬರು ಅಪರಿಚಿತರು ವಾಹನ ನಿಲ್ಲಿಸಿ, ಅಂಗಡಿಗೆ ಬಂದು ವ್ಯಾಪಾರ ಮಾಡುವ ನೆಪದಲ್ಲಿ ಡ್ರಾವರ್ ಗೆ ಕೈ ಹಾಕಲು ಪ್ರಯತ್ನಿಸಿದ್ದಾರೆ.ಆಗ ಗಾಬರಿಗೊಂಡ ಮಹಿಳೆ ತಕ್ಷಣ ಡ್ರಾವೆರನ್ನು ದೂಡಿದ್ದಾರೆ.ಅಪರಿಚಿತ ವ್ಯಕ್ತಿಯು ಕೊರಳಿಗೆ ಕೈ ಹಾಕಿ ಬಲವಂತವಾಗಿ ಚಿನ್ನದ ಸರವನ್ನು ಎಗರಿಸಿ ಸ್ಕೂಟರ್‌ನಲ್ಲಿ ಪರಾರಿಯಾಗಿದ್ದಾನೆಂದು ತಿಳಿದು ಬಂದಿದೆ.

ಚಿನ್ನದ ಸರ ಸುಮಾರು 16 ಗ್ರಾಂ ತೂಕ ಇದ್ದು ,80,000/-ರೂ. ಮೌಲ್ಯದೆಂದು ಅಂದಾಜಿಸಲಾಗಿದೆ.ಮಹಿಳೆ ನೀಡಿದ ದೂರಿನಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ,ತನಿಖೆ ಮುಂದುವರಿಸಲಾಗಿದೆ.

Related posts

ಸುಳ್ಯ: KVG ಆಯುರ್ವೇದ ಹಾಗೂ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ 76ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ

ಮಂಡೆಕೋಲು:ತಡರಾತ್ರಿ ರಸ್ತೆಯೊಂದರಲ್ಲಿ ಕಂಡು ಬಂದ ಒಂಟಿ ಸಲಗ..!,ಕಂಗಾಲಾದ ಸ್ಥಳೀಯರು!!

ಸುಳ್ಯ: ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿ