ಕರಾವಳಿಸುಳ್ಯ

ಬೆಳ್ಳಾರೆ: ನಡು ರಸ್ತೆಯಲ್ಲಿ ಯುವಕನ ನೆತ್ತರು ಹರಿಸಿದ ದುಷ್ಕರ್ಮಿಗಳ ಮೇಲೆ ಎಫ್ಐಆರ್..! ಭೀಕರ ಹಲ್ಲೆಗೊಳಗಾದವನನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಶಿಫ್ಟ್ 

ನ್ಯೂಸ್ ನಾಟೌಟ್: ಬೆಳ್ಳಾರೆಯ ನಡು ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಯುವಕನ ಮೇಲೆ ದಾಳಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. 

ಹಲವಾರು ಕ್ರಿಮಿನಲ್ ಹಿನ್ನಲೆ ಹೊಂದಿದ ಜಮಾಲ್ ಬೆಳ್ಳಾರೆ ಸಹಚರ ಅಜರುದ್ದೀನ್ ಎಂಬ ರೌಡಿ ತಲ್ವಾರ್ ರೀತಿಯ ಕಬ್ಬಿಣದ ಆಯುಧದಿಂದ ಮಾರಣಾಂತಿಕವಾಗಿ ಅಶೀರ್ ಎಂಬ ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದ. 

ಜ.11 ರಂದು ಗಂಭೀರ ಗಾಯಗೊಂಡು ಬಿದ್ದಿದ್ದ ಯುವಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಇದೀಗ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಬೆಳ್ಳಾರೆ ಪೊಲೀಸರು  ಎಫ್ ಐ ಆರ್ ದಾಖಲು ಮಾಡಿದ್ದಾರೆ. ಸದ್ಯ ಅಜರುದ್ದೀನ್ ಬೆಳ್ಳಾರೆ ಯನ್ನು ಬಂಧಿಸಲಾಗಿದೆ. ಜಮಾಲ್ ಅನ್ನುವ ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಈ ಇಬ್ಬರು ಆರೋಪಿಗಳು ಈ ಹಿಂದೆಯು ಮಸೀದಿ ವಿಚಾರದಲ್ಲಿ ಹಾಗೂ ಇನ್ನಿತರ ವಿಚಾರದಲ್ಲಿ ಹಲವಾರು ಬಾರಿ ಗಲಾಟೆ ಮಾಡಿ ಪ್ರಕರಣ ದಾಖಲಾದ ನಿದರ್ಶನ ಇದೆ . ಕೆಲವು ದಿನಗಳ ಹಿಂದೆ ಇಬ್ರಾಹಿಂ ಖಲೀಲ್ ಎಂಬವರು ಪ್ರವೀಣ್ ನೆಟ್ಟಾರ್ ಕೊಲೆಗೆ ಇವರೇ ಪ್ರಮುಖ ಕಾರಣ ಎಂದು ಆರೋಪ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಲವು ಬರಹಗಳನ್ನು ಹರಿಯಬಿಟ್ಟಿದ್ದರು, ಅದು ವ್ಯಾಪಕವಾಗಿ ವೈರಲ್ ಆಗಿ ಮಾಧ್ಯಮಗಳಲ್ಲಿ ಕೂಡ ವರದಿಯಾಗಿತ್ತು ಎಂದು ತಿಳಿದು ಬಂದಿದೆ.

Related posts

ಕಡಬದಿಂದ ಅಕ್ರಮವಾಗಿ ದನ ಸಾಗಾಟ, ಸುಳ್ಯದಲ್ಲಿ ಹಿಡಿದು ಪೊಲೀಸರಿಗೊಪ್ಪಿಸಿದ ಕಾರ್ಯಕರ್ತರು

ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

ಅರಂತೋಡು -ಎಲಿಮಲೆ ರಸ್ತೆ ಕಾಮಗಾರಿ:ಗುದ್ದಲಿ ಪೂಜೆಯಂದೇ ಕಾಮಗಾರಿ ಆರಂಭಿಸಿ, 15 ದಿನ ಕಾಯುತ್ತೇವೆ,ಇಲ್ಲದಿದ್ದರೆ ಹೋರಾಟ ನಡೆಸುತ್ತೇವೆ:ಹರಿಪ್ರಸಾದ್ ಎ.ಕೆ.