ಕರಾವಳಿ

ಬಿಎಡ್ ಹಾಗೂ ಡಿಎಡ್ ವಿದ್ಯಾರ್ಥಿಗಳಿಗೆ ಭರ್ಜರಿ ಸಿಹಿ ಸುದ್ದಿ

ನ್ಯೂಸ್ ನಾಟೌಟ್: ಬಿಎಡ್ ಹಾಗೂ ಡಿಎಡ್ ವಿದ್ಯಾರ್ಥಿಗಳಿಗೂ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. 2022-23 ಸಾಲಿನಲ್ಲಿ ಬಿಎಡ್ ಹಾಗೂ ಡಿಎಡ್ ನಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತದ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್,ಸಿಖ್,ಜೈನ್,ಬೌದ್ಧ, ಮತ್ತು ಪಾರ್ಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಈ ಹಣವನ್ನು ಅಲ್ಪ ಸಂಖ್ಯಾತರ ಕಲ್ಯಾಣ ವತಿಯಿಂದ ನೀಡಲಾಗುತ್ತಿದೆ.
ನಿಮಗೂ ಕೂಡ ಅರ್ಜಿ ಸಲ್ಲಿಸಲು ಆಸಕ್ತಿ ಇದ್ದರೆ ಈ ಕೂಡಲೇ ಅರ್ಜಿ ಸಲ್ಲಿಸುವಂತೆ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಮನವಿ ಮಾಡಿದೆ. ಆಸಕ್ತರು ತಕ್ಷಣವೇ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

  1. ಅರ್ಜಿದಾರರು ಸೇವಾ ಸಿಂಧು https://sevasindhu.karnataka.gov.in/ ಪೊರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು.
  2. ಅರ್ಜಿ ಸಲ್ಲಿಸಲು 10-12-2022 ಕೊನೆಯ ದಿನಾಂಕ, ಈ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು.
  3. ನ್ಯಾಷನಲ್ ಕೌನ್ಸಿಲ್ ಫಾರ್ ಟೀಚರ್ ಎಜುಕೇಷನ್ ನಿಂದ ಮಾನ್ಯತೆ ಪಡೆದಿರುವ ಬಿ.ಎಡ್ ಹಾಗೂ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಯಿಂದ ಮಾನ್ಯತೆ ಪಡೆದಿರುವ ಡಿ.ಎಡ್ ಕೋರ್ಸ್‌ಗಳನ್ನು ಸರ್ಕಾರಿ/ ಅರೆ ಸರ್ಕಾರಿ / ಅನುದಾನಿತ ಹಾಗು ಖಾಸಗಿ ಕಾಲೇಜುಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
  4. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ 25,000 ರೂಗಳ ವಿಶೇಷ ಪ್ರೋತ್ಸಾಹಧನವನ್ನು ಸಂಬಂಧಪಟ್ಟ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಆನ್‌ಲೈನ್‌ ಮುಖಾಂತರ ಜಮಾ ಮಾಡಲಾಗುತ್ತದೆ.
  5. ನೀವು ಕರ್ನಾಟಕದಲ್ಲಿ ವಾಸವಿದ್ದರೆ ಮಾತ್ರ ಈ ಪ್ರೋತ್ಸಾಹದನಕ್ಕೆ ಅಪ್ಲೈ ಮಾಡಬಹದು.
  6. ಕೋರ್ಸ್‌ಗಳ ಅವಧಿಗೆ ತಕ್ಕಂತೆ ಪ್ರತಿ ವರ್ಷದಂತೆ ಗರಿಷ್ಠ ಎರಡು ವರ್ಷದವರೆಗೆ ಅನುದಾನ ನೀಡಲಾಗುತ್ತದೆ.
  7. ಪೋಷಕರ ವರಮಾನ ಗರಿಷ್ಠ 6 ಲಕ್ಷ ರೂ. ಗಿಂತ ಹೆಚ್ಚಿಗೆ ಇರಬಾರದು.
  8. ಪ್ರೋತ್ಸಾಹಧನಕ್ಕೆ ಅಭ್ಯರ್ಥಿಗಳನ್ನು ಅರ್ಹತೆ ಪರೀಕ್ಷೆ ಹಾಗೂ ಹಿಂದಿನ ಸಾಲಿನ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
  9. ಅರ್ಜಿ ಸಲ್ಲಿಸಲು ಕನಿಷ್ಠ 50 ಅಂಕ ಪಡೆದಿರಬೇಕು.

ಪ್ರತಿ ಜಿಲ್ಲೆಗೆ ಬಿಡುಗಡೆಗೊಳಿಸುವ ಅನುದಾನದಲ್ಲಿ ಶೇಕಡ 50 ರಷ್ಟು ಬಾಲಕಿಯರಿಗೆ ಮೀಸಲಿಟ್ಟಿದ್ದು, ಡಿ.ಎಡ್ ಕೋರ್ಸ್ ಗೆ ಶೇಕಡ 25 ಹಾಗು ಬಿ.ಎಡ್ ಕೋರ್ಸ್‌ಗೆ ಶೇಕಡ 75 ರಷ್ಟು ಅನುದಾನ ಬಳಸಬಹುದಾಗಿದೆ. ಒಂದು ವೇಳೆ ಅಭ್ಯರ್ಥಿಗಳು ಸುಳ್ಳು ಮಾಹಿತಿ ನೀಡಿದರೆ ಹಾಗು ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದರೆ ಅಂಥವರಿಂದ ಪ್ರೋತ್ಸಾಹ ಧನ ವಾಪಸ್ ಪಡೆಯಲಾಗುವುದು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಇಲಾಖಾ ಸಹಾಯವಾಣಿ ಸಂಖ್ಯೆ 8277799990 ಅಥವಾ ಇಲಾಖಾ ವೆಬ್‌ಸೈಟ್‌ https://dom.karnataka.gov.in/ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಿರಿ.

Related posts

ಕಾಂತಾರ ಅಧ್ಯಾಯ 1ರ ಟೀಸರ್ ನೋಡಿ ವಾವ್.. ಎಂದ ಗೂಗಲ್..!ಈ ರೀತಿ ಹೇಳಲು ಕಾರಣವೇನು?ಗೂಗಲ್‌ ಬರೆದುಕೊಂಡ ಪೋಸ್ಟ್‌ನಲ್ಲೇನಿದೆ?

ಸುಳ್ಯದ ಜ್ಯೋತಿ ಸರ್ಕಲ್ ಬಳಿ ಬೈಕ್ ಹಾಗೂ ಕಾರಿನ ನಡುವೆ ಅಪಘಾತ! ಬೈಕ್ ನಲ್ಲಿದ್ದ ವಿದ್ಯಾರ್ಥಿಗಳಿಗೆ ಗಂಭೀರ ಗಾಯ!

ಚಾರ್ಮಾಡಿ: KSRTC ಬಸ್‌ಗಳ ಅಪಘಾತದ ಟ್ರಾಫಿಕ್‌ನಲ್ಲಿ ಹೆರಿಗೆ ನೋವಿನಿಂದ ಗಂಟೆಗಟ್ಟಲೆ ಒದ್ದಾಡಿದ ಗರ್ಭಿಣಿ..! ಆಂಬ್ಯುಲೆನ್ಸ್‌ ಚಾಲಕ ಆರೀಫ್‌ನ ಸಮಯ ಪ್ರಜ್ಞೆಯಿಂದ ಉಳಿಯಿತು ಜೀವ..!