ಕರಾವಳಿಸುಳ್ಯ

ಕಡಬದ ಕಳ್ಳರ ಗ್ಯಾಂಗನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಬಂದಾರು ಗ್ರಾಮಸ್ಥರು, ವಿಡಿಯೋ ವೈರಲ್

ನ್ಯೂಸ್ ನಾಟೌಟ್ : ಖತರ್ನಾಕ್ ಕಳ್ಳರನ್ನು ಊರವರೇ ಸೇರಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಏ.30ರಂದು ಬಂದಾರು ಶಾಲೆಯೊಂದರಿಂದ ಇನ್ವಾರ್ಟರ್ ಮತ್ತು ಕಂಪ್ಯೂಟರ್ ಕದಿಯಲು ಯತ್ನಿಸುತ್ತಿದ್ದಾಗ ಕಳ್ಳರು ಸಿಕ್ಕಿ ಬಿದ್ದಿದ್ದಾರೆ.

ಧರ್ಮಸ್ಥಳ ಸಮೀಪದ  ಸರಕಾರಿ ಪ್ರೌಢಶಾಲೆ ಪೆರ್ಲ ಬೈಪಾಡಿ ಬಂದಾರಿನಲ್ಲಿ ರಾತ್ರಿ 12 ಗಂಟೆ ಸುಮಾರಿಗೆ 4 ಜನ ಕಳ್ಳರು ನುಗ್ಗಿರುವುದನ್ನು ಗಮನಿಸಿ ಸ್ಥಳೀಯರು ಶಾಲಾ ವಠಾರದಲ್ಲಿ  ಒಟ್ಟು ಸೇರಿ ಹಿಡಿದು ಹಿಗ್ಗಾಮುಗ್ಗ ಥಳಿಸಿದ್ದು, ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.ಕಳ್ಳರನ್ನು ಹಿಡಿದು ಎಳೆದೊಯ್ಯುತ್ತಿದ್ದ ವೀಡಿಯೋ ವೈರಲ್ ಆಗಿದೆ.

ಈ ಕಳ್ಳರ ಗ್ಯಾಂಗ್ ಕಡಬ ಪರಿಸರದವರು ಎಂದು ತಿಳಿದು ಬಂದಿದೆ. ಇವರೆಲ್ಲರೂ ಸಂಘಟನೆಯೊಂದರಲ್ಲಿ ಸಕ್ರಿಯರಾಗಿದ್ದವರು ಎಂದು ಹೇಳಲಾಗುತ್ತಿದೆ. ಕಡಬ ಪರಿಸರದಲ್ಲೂ ಹಲವೆಡೆ  ಮನೆ ಕಳ್ಳತನ, ಟಯರ್ ಕಳ್ಳತನ,ಬಿದಿ ಬದಿ ಸೋಲಾರ್ ಬ್ಯಾಟರಿ ಕಳ್ಳತನ ನಡೆದಿದ್ದು   ಈ ತಂಡವೇ  ಕೃತ್ಯಗಳನ್ನು ಮಾಡಿರಬಹುದೆಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.  ಪೊಲೀಸರ ಸೂಕ್ತ ತನಿಖೆಯಿಂದ ಇನ್ನಷ್ಟು ಮಾಹಿತಿ ಲಭ್ಯವಾಗಲಿದೆ.

Related posts

ಆಟೋ ಪಾರ್ಕಿಂಗ್ ವಿಚಾರಕ್ಕೆ ಸುಕುಮಾರ್ ಮನೆಗೆ ನುಗ್ಗಿ ಹೊಡೆದ ಸೈಯದ್ ಸ್ನೇಹಿತರು..! ಭಗವಾ ಧ್ವಜ ಇದಕ್ಕೆ ಕಾರಣ ಎಂದ ಸ್ಥಳೀಯರು..!

ಮಂಗಳೂರು: ಬಸ್ ನಿಂದ ಹೊರಕ್ಕೆಸೆಯಲ್ಪಟ್ಟ ವಿದ್ಯಾರ್ಥಿನಿ..! ತಲೆಗೆ ಗಂಭೀರ ಗಾಯ

ಗೋ ಕಳ್ಳರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಉಸ್ತುವಾರಿ ಸಚಿವರ ಆಗ್ರಹ