ಕರಾವಳಿ

ಗೋ ಕಳ್ಳರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಉಸ್ತುವಾರಿ ಸಚಿವರ ಆಗ್ರಹ

364
Spread the love

ಮಂಗಳೂರು: ಕಳೆದ ಕೆಲವು ಸಮಯಗಳಿಂದ ಗೋ ಕಳ್ಳರ ಹಾವಳಿ ದಕ್ಷಿಣ ಕನ್ನಡದಾದ್ಯಂತ ಹೆಚ್ಚಾಗುತ್ತಿದ್ದು ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ದಕ್ಷಿಣ ಕನ್ನಡ ಜಿಲ್ಲೆಯ ನೂತನ ಉಸ್ತುವಾರಿ ಸಚಿವರಾದ ಸುನಿಲ್ ಕುಮಾರ್, ಗೋ ಕಳ್ಳರನ್ನು ಹಿಡಿದು ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಜಿಲ್ಲೆಯಲ್ಲಿ ಪೊಲೀಸರು ಗಸ್ತು ಹೆಚ್ಚಿಸಬೇಕು, ಚೆಕ್ ಪೋಸ್ಟ್ ಗಳಲ್ಲಿ ನಿಗಾ ಇರಿಸಬೇಕು, ಗೋ ಕಳ್ಳತನದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ತನಿಖೆಗೆ ಒಳಪಡಿಸಬೇಕು. ಮತ್ತೆಂದೂ ಇಂತಹ ಕೃತ್ಯಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.

See also  ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ..!ಬೈಕ್ ಸವಾರ ಬೆಳ್ತಂಗಡಿಯ ಪ್ರದೀಪ್‌ ಶೆಟ್ಟಿ ಮೃತ್ಯು
  Ad Widget   Ad Widget   Ad Widget   Ad Widget   Ad Widget   Ad Widget