ಕರಾವಳಿಸುಳ್ಯ

ಬಾಲಗಂಗಾಧರನಾಥ ಸ್ವಾಮೀಜಿ 78ನೇ ಜಯಂತ್ಯೋತ್ಸವ:ಧರ್ಮಪಾಲನಾಥ ಸ್ವಾಮೀಜಿಗಳಿಂದ ಗ್ರಾಮವಾರು ಭೇಟಿ

ನ್ಯೂಸ್ ನಾಟೌಟ್ : ಆದಿಚುಂಚನಗಿರಿ ಜಗದ್ಗುರು ಡಾ| ಬಾಲಗಂಗಾಧರನಾಥ ಸ್ವಾಮೀಜಿ ಅವರು ಜಗತ್ತಿಗೆ ನೀಡಿದ ಕೊಡುಗೆಗಳನ್ನು ಜ್ಞಾಪಿಸುವ ಮತ್ತು ಸೇವಾ ಕಾರ್ಯಗಳನ್ನು ಸಮಾಜಕ್ಕೆ ತಿಳಿಸುವ ನಿಟ್ಟಿನಲ್ಲಿ ಅವರ 78ನೇ ಜಯಂತ್ಯೋತ್ಸವ ಕಾರ್ಯಕ್ರಮ ಪುತ್ತೂರಿನಲ್ಲಿ ಅದ್ದೂರಿಯಾಗಿ ನಡೆಯಲಿದೆ.ಇದರ ಪೂರ್ವಭಾವಿ ಸಭೆ ನಡೆಯುತ್ತಿದ್ದು,ಮಂಗಳೂರು ಶಾಖಾ ಮಠದ ಪೂಜ್ಯ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ ಅವರು ಸುಳ್ಯ ಹಾಗೂ ಕಡಬ ತಾಲೂಕಿನ ಗ್ರಾಮವಾರು ಭೇಟಿ ನೀಡಿ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ವ್ಯವಸ್ಥಾಪಕರು ತಿಳಿಸಿದ್ದಾರೆ.

ಪೂರ್ವಭಾವಿ ಸಭೆ ಎಲ್ಲೆಲ್ಲಿ ?

ಶನಿವಾರ ಜ.07(ಇಂದು) : 9.00 ಗಂಟೆಗೆ ತ್ರಿಶೂಲಿನಿ ದೇವಸ್ಥಾನ ಬೀದಿಗುಡ್ಡೆ ಬಳ್ಳ ಗ್ರಾಮದಲ್ಲಿ ಸಭೆ ನಡೆಯಿತು.10.30 ಕ್ಕೆ ಸರಿಯಾಗಿ ಏನೆಕಲ್ಲು ಆದಿಶಕ್ತಿ ಭಜನಾ ಮಂಡಳಿ ಬಾಲಾಡಿಯಲ್ಲಿ,12.00 ಗಂಟೆಗೆ ಶ್ರೀರಾಮ ಭಜನಾ ಮಂಡಳಿ ಕೋಡಿಂಬಾಳದಲ್ಲಿ ನಡೆಯಿತು.ಮಧ್ಯಾಹ್ನ 2.00 ಗಂಟೆಗೆ ಮಹಿಷಾಮರ್ಧಿನಿ ದೇವಸ್ಥಾನ ಕೇರ್ಪಡ ವಠಾರದಲ್ಲಿ ಸಭೆ ನಡೆಯಿತು.

ಆದಿತ್ಯವಾರ ಜ:08:ಬೆಳಗ್ಗೆ 9.00 ಗಂಟೆಗೆ ಶ್ರೀ ಬಸವೇಶ್ವರ ದೇವಸ್ಥಾನ ಕುಲ್ಕುಂದದಲ್ಲಿ,9.30ಕ್ಕೆ ಶ್ರೀ ಶಾರದಾಂಬ ಭಜನಾ ಮಂಡಳಿ ಕೈಕಂಬದಲ್ಲಿ ಸಭೆ ನಡೆಯಲಿದೆ.10.00ಗಂಟೆಗೆ ಕೂತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರ,10.30ಕ್ಕೆ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಬೋಳಡ್ಕ ಕೊಂಬಾರು ವಠಾರ,11.30ಗಂಟೆಗೆ ಶ್ರೀ ದುರ್ಗಾಂಬಿಕ ಭಜನಾ ಮಂಡಳಿ ಕಡ್ಯ ಕೊಣಾಜೆ ಹಾಗೂ 12.30ಕ್ಕೆ ಶ್ರೀ ಅಯ್ಯಪ್ಪ ಭಜನಾ ಮಂಡಳಿ ಮರ್ಧಾಳ ವಠಾರ ಮತ್ತು 2:00 ಗಂಟೆಗೆ ಶ್ರೀ ಮಹಾಗಣಪತಿ ಪಂಚಲಿಂಗೇಶ್ವರ ದೇವಸ್ಥಾನ ಅಡಂಜದಲ್ಲಿ ಪೂರ್ವಭಾವಿ ಸಭೆಯಲ್ಲಿ ಮಹಾ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ವ್ಯವಸ್ಥಾಪಕರು ತಿಳಿಸಿದ್ದಾರೆ.

Related posts

ಒಂದೂವರೇ ತಿಂಗಳ ಮಗುವಿಗೆ ಅವಧಿ ಮೀರಿದ ಇಂಜೆಕ್ಷನ್ ಚುಚ್ಚಿದ ವೈದ್ಯ

ಅಮರ ಪಬ್ಲಿಕ್ ಚಾರಿಟೇಬಲ್ ಟ್ರೆಸ್ಟ್‌ಗೆ ದೇಣಿಗೆ ಹಸ್ತಾಂತರ

ಕಚೇರಿಯಲ್ಲಿ ಕೆಲಸ ಮಾಡುತ್ತಲೇ ಪ್ರಾಣ ಬಿಟ್ಟ ಗ್ರಾಮ ಸಹಾಯಕ..!