ಕ್ರೈಂದೇಶ-ಪ್ರಪಂಚವೈರಲ್ ನ್ಯೂಸ್

ನಿದ್ದೆಗೆ ಜಾರಿದ್ದ ಮಗುವನ್ನು ತೊಟ್ಟಿಲ ಬದಲು ಒವನ್‌ ನಲ್ಲಿಟ್ಟ ‘ಮಹಾತಾಯಿ’, ಮುಂದೇನಾಯ್ತು..?

ನ್ಯೂಸ್‌ ನಾಟೌಟ್: ತಾಯಿಯೇ ದೇವರು ಎನ್ನವ ಮಾತಿದೆ ಆದರೆ,ಕಾಲ ಬದಲಾಗಿದೆಯೋ ಮನುಷ್ಯರೇ ಬದಲಾಗಿದ್ದಾರೋ ಗೊತ್ತಿಲ್ಲ, ಎಲ್ಲವೂ ತದ್ವಿರುದ್ಧವಾಗಿ ನಡೆಯುತ್ತಿದೆ.

ಮೊಬೈಲ್ ಒಳಗೆ ಮುಳುಗಿ ಹೋಗಿ ಅವಾಂತರಗಳು ನಡೆದೆ ವರದಿಗಳು ಹೆಚ್ಚಾಗಿ ಕೇಳಿಬರುತ್ತಿದೆ. ಇದೀಗ ತಾಯಿ ತೋಳಲ್ಲಿ ಮಗು ನಿದ್ದೆಗೆ ಜಾರುತ್ತಿತ್ತು. ಮಗುವನ್ನು ತೊಟ್ಟಿಲಲ್ಲಿ ಮಲಗಿಸುವ ಬದಲು, ಯಾವದೋ ವಿಚಾರದಲ್ಲಿ ತಲ್ಲೀನರಾಗಿದ್ದ ತಾಯಿ, ಓವನ್‌(ಎಲೆಕ್ಟ್ರಿಕ್ ಅಡುಗೆ ಒಲೆ)ಒಳಗಿಟ್ಟಿದ್ದಾಳೆ. ಆಟೋಮ್ಯಾಟಿಕ್ ಓವನ್ ಬಾಗಿಲು ಮುಚ್ಚುತ್ತಿದ್ದಂತೆ ಆನ್ ಆಗಿದೆ. ಕೆಲವೇ ಸೆಕೆಂಡ್‌ಗಳಲ್ಲಿ ತಾಯಿಗೆ ತನ್ನ ತಪ್ಪಿನ ಅರಿವಾಗಿದೆ. ಅಷ್ಟರೊಳಗೆ ಕಾಲ ಮಿಂಚಿತ್ತು.

ಈ ಘಟನೆ ಅಮೆರಿಕಕ ಕನ್ಸಾಸ್ ಸಿಟಿಯ ಮಿಸ್ಸೋರಿಯಲ್ಲಿ ವರದಿಯಾಗಿದೆ. ಮರಿಯಾ ಥೋಮಸ್ ಅನ್ನೋ ಮಹಿಳೆ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು,ತನಿಖೆ ನಡೆಯುತ್ತಿದೆ. ಮರಿಯಾ ಥಾಮಸ್ ಎಂದಿನಂತೆ ಮಗುವಿನ ಪಾಲನೆ ಜೊತೆಗೆ ಇತರ ಕೆಲದಲ್ಲಿ ತೊಡಗಿಸಿಕೊಂಡಿದ್ದಳು. ಕೆಲ ಹೊತ್ತಲ್ಲಿ ಮಗುವಿಗೆ ನಿದ್ದೆ ಆವರಿಸುತ್ತಿತ್ತು. ಹೀಗಾಗಿ ಕೆಲಸವನ್ನು ಅರ್ಧಕ್ಕೆ ಬಿಟ್ಟು ಮಗುವನ್ನು ತೋಳಿನಲ್ಲಿ ಮಲಗಿಸಲು ಮುಂದಾಗಿದ್ದಾಳೆ.

ಮಗುವನ್ನು ಎತ್ತಿಕೊಂಡು ಇತ್ತ ಸಣ್ಣ ಪುಟ್ಟ ಕೆಲಸವನ್ನು ಮಾಡುತ್ತಿದ್ದ ಕಾರಣ ಮಗು ನಿದ್ದೆ ಮಾಡಲು ಕೆಲ ಹೊತ್ತು ತೆಗೆದುಕೊಂಡಿದೆ. ಮಗುವಿಗೆ ನಿದ್ದೆ ಆವರಿಸುತ್ತಿದ್ದಂತೆ ಇತ್ತ ಮರಿಯಾ ಥಾಮಸ್ ಯಾವುದೋ ವಿಚಾರದಲ್ಲಿ(ಫೋನ್) ಮಗ್ನರಾಗಿದ್ದಾರೆ. ಮಗುವನ್ನು ತೊಟ್ಟಿಲಲ್ಲಿ ಮಲಗಿಸಬೇಕಿದ್ದ ಮರಿಯಾ ಥಾಮಸ್ ಅದ್ಯಾಕೋ ಏನೋ ಓವನ್ ಬಾಗಿಲು ತೆರೆದು ಮಗುವನ್ನು ಅದರೊಳಗಿಟ್ಟಿದ್ದಾರೆ.

ಓವನ್ ಬಾಗಿಲು ಮುಚ್ಚುತ್ತಿದ್ದಂತೆ ಓವನ್ ಆನ್ ಆಗಿದೆ. ಕೆಲವೇ ಸೆಕೆಂಡ್‌ಗಳಲ್ಲಿ ಮರಿಯಾ ಥಾಮಸ್‌ಗೆ ತನ್ನ ತಪ್ಪಿನ ಅರವಾಗಿದೆ. ಓಡೋಡಿ ಬಂದು ಓವನ್ ಬಾಗಿಲು ತೆರೆದಾಗ ಪರಿಸ್ಥಿತಿ ಚಿಂತಾಜನಕವಾಗಿತ್ತು. ತಕ್ಷಣವೇ ಮಗುವನ್ನು ಎತ್ತಿಕೊಂಡು ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಎಲ್ಲಾ ಪ್ರಯತ್ನ ಮಾಡಿದರೂ ಮಗು ಬದುಕುಳಿಯಲಿಲ್ಲ ಎಂದು ವರದಿ ತಿಳಿಸಿದೆ.

Related posts

ರಾತ್ರೋರಾತ್ರಿ ಸ್ಮಶಾನ ಒಡೆದು ಇಂದಿರಾ ಕ್ಯಾಂಟೀನ್ ನಿರ್ಮಿಸುತ್ತಿದ್ದಾರಾ..? ಹಿಂದೂ ಮುಖಂಡರಿಂದ ಉಗ್ರ ಹೋರಾಟದ ಎಚ್ಚರಿಕೆ..!

ಪ್ರಜ್ವಲ್ ರೇವಣ್ಣ ಪ್ರಕರಣ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಿದ ಹೆಚ್‍.ಡಿ.ಕೆ..! ದೂರಿನಲ್ಲೇನಿತ್ತು..?

ವಿಮಾನದ ಟಾಯ್ಲೆಟ್‌ನಲ್ಲಿ ಕುಸಿದು ಬಿದ್ದ ಪೈಲೆಟ್ ಮತ್ತೆ ಎದ್ದೇಳಲೇ ಇಲ್ಲ,271 ಪ್ರಯಾಣಿಕರೊಂದಿಗೆ ಹೊರಟಿದ್ದ ವಿಮಾನದಲ್ಲಿ ಪೈಲೆಟ್‌ಗೆ ಆಗಿದ್ದೇನು?