ಕರಾವಳಿಸುಳ್ಯ

ಸುಳ್ಯ:ಅಯೋಧ್ಯೆ ರಾಮಮಂದಿರ ಉದ್ಘಾಟನಾ ದಿನದಂದೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ..!ಕಂದಮ್ಮನಿಗೆ ‘ಶ್ರೀರಾಮ’ ಹೆಸರಿಡಲು ತೀರ್ಮಾನಿಸಿದ ದಂಪತಿ..!

ನ್ಯೂಸ್‌ ನಾಟೌಟ್‌ : ಜನವರಿ 22 ಅತ್ತ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತ್ತಿದ್ದರೆ, ಇತ್ತ ಬೆಳ್ತಂಗಡಿ ತಾಲೂಕಿನ ಉಜಿರೆ ಬೆನಕ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿ ಸುದ್ದಿಯಾಗಿದ್ದಾರೆ.ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀ ರಾಮಚಂದ್ರ ಹುಟ್ಟಿದ ನೆಲದಲ್ಲಿ ಭವ್ಯ ರಾಮಮಂದಿರ ಲೋಕಾರ್ಪಣೆ ದಿನದಂದೇ ಗಂಡು ಮಗು ಹುಟ್ಟಿರೋದಕ್ಕೆ ದಂಪತಿ ಭಾರಿ ಸಂತಸ ವ್ಯಕ್ತ ಪಡಿಸಿದ್ದಾರೆ.

ಮಗುವಿನ ತಂದೆ ಮೂಲತಃ ಸುಳ್ಯ ತಾಲೂಕಿನವರು.ಹೆಸರು ಸುರೇಶ್.ಇವರು ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಬಸನಬೆಟ್ಟು ನಿವಾಸಿ ಪವಿತ್ರ ಎಂಬುವವರನ್ನು ಮದುವೆಯಾಗಿದ್ದರು.ದಂಪತಿಗೆ ಮೊದಲ ಮಗು ಹೆಣ್ಣು ಆಗಿದ್ದು, ಆ ಮಗುವಿಗೆ ಇದೀಗ ೬ ವರ್ಷ ತುಂಬಿದೆ.ಆದರೆ ಎರಡನೇ ಮಗುವಿನ ಡೆಲಿವರಿಗೆ ಫೆ.3 ರಂದು ವೈದ್ಯರು ಡೇಟ್ ಅನ್ನು ಫಿಕ್ಸ್‌ ಮಾಡಿದ್ದರು. ಉಜಿರೆಯ ಬೆನಕ ಆಸ್ಪತ್ರೆಯ ಡಾಕ್ಟರ್ ಅಂಕಿತಾ ಭಟ್ ಅವರೊಂದಿಗೆ ಆರೋಗ್ಯವನ್ನು ಪರೀಕ್ಷಿಸಿಕೊಳ್ಳುತ್ತಿದ್ದ ಪವಿತ್ರ ಅವರಿಗೆ ಜ.21 ರಂದು ರಾತ್ರಿ ನೋವು ಕಾಣಿಸಿಕೊಂಡಿದೆ.ತಕ್ಷಣ ಉಜಿರೆ ಬೆನಕ ಆಸ್ಪತ್ರೆಗೆ ಬಂದು ದಾಖಲಾಗಿದ್ದರು. ಜ.22 ರಂದು ಬೆಳಗ್ಗೆ 6:20 ಕ್ಕೆ ನಾರ್ಮಲ್ ಡೆಲಿವರಿ ಆಗಿದೆ ಎಂದು ತಿಳಿದು ಬಂದಿದೆ.

ತಂದೆ ಸುರೇಶ್ ಬೆಂಗಳೂರು ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದಾರೆ. ಬೆಳಗ್ಗೆ ಮಗು ಜನನ ಅಗಿರುವ ಬಗ್ಗೆ ಮಾಹಿತಿ ತಿಳಿದು ನೇರ ಬಸ್ ಹತ್ತಿ ಸಂಜೆ ಆಸ್ಪತ್ರೆಗೆ ಬಂದಿದ್ದಾರೆ. ಸದ್ಯ ಇದೀಗ ತಾಯಿ ಮಗು ಆರೋಗ್ಯವಾಗಿದ್ದಾರೆಂದು ತಿಳಿದು ಬಂದಿದೆ.ಮಗುವಿನ ತಂದೆ ಖುಷಿಯಿಂದ ಬೆಂಗಳೂರಿನಿಂದ ಆಸ್ಪತ್ರೆಗೆ ಬಂದಿದ್ದು ತುಂಬಾ ಸಂತಸ ವ್ಯಕ್ತಪಡಿಸಿದ್ದಾರೆ.ಅಯೋಧ್ಯೆ ರಾಮಮಂದಿರ ಉದ್ಘಾಟನಾ ದಿನ ಗಂಡು ಮಗುವಿಗೆ ಜನ್ಮ ನೀಡುವ ಬಗ್ಗೆ ನಿರೀಕ್ಷಿಸಿಲ್ಲ. ಆದ್ದರಿಂದ ಮಗುವಿಗೆ ‘ಶ್ರೀರಾಮ’ ಎಂದು ಹೆಸರಿಡಲು ನಿರ್ಧರಿಸುತ್ತೇವೆ ಎಂದು ಈ ಸಂದರ್ಭದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಮಗುವಿನ ತಾಯಿ ಪವಿತ್ರ ಅವರು ಕೂಡ ಭಾರಿ ಸಂಭ್ರಮದಲ್ಲಿದ್ದಾರೆ. ತುಂಬಾ ಖುಷಿಯಾಗುತ್ತಿದೆ.‌ಆದ್ರೆ ರಾಮ ಮಂದಿರ ಉದ್ಘಾಟನೆ ದಿನದಂದೇ ಅಚಾನಕ್‌ ಆಗಿ ಗಂಡು ಮಗುವಿಗೆ ತಾಯಿಯಾಗಿರೋದಕ್ಕೆ ಹೆಮ್ಮೆಯಾಗುತ್ತಿದೆ ಎಂದು ಸಂಭ್ರಮದ ಕ್ಷಣವನ್ನು ಹಂಚಿಕೊಂಡಿದ್ದಾರೆ.

Related posts

ಮಂಗಳೂರು: ಅಂಗನವಾಡಿ ಮಕ್ಕಳಿಗೆ ಸರ್ಕಾರ ಮತ್ತೆ ಪೂರೈಸಿತು ಕೊಳೆತ ಮೊಟ್ಟೆ..! ಮೊಟ್ಟೆ ಒಯ್ದಿದ್ದ ಗರ್ಭಿಣಿಯರು, ಬಾಣಂತಿಯರ ಕುಟುಂಬಸ್ಥರಿಂದ ಬೈಗುಳ ಸುರಿಮಳೆ, ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಈಗ ಏನು ಹೇಳ್ತಾರೆ..?

ವಿಟ್ಲ: ಅನ್ಯಕೋಮಿನ ಯುವಕರೊಂದಿಗೆ ಹಿಂದೂ ಯುವತಿ ಪತ್ತೆ,ಸ್ಥಳಕ್ಕಾಗಮಿಸಿದ ಪೊಲೀಸರು

ಕೊಕ್ಕಡ : ಮರದ ಕೊಂಬೆ ಬಿದ್ದು ಮಹಿಳೆ ಮೃತ್ಯು!