ಕರಾವಳಿ

ಕನ್ನಡಿಗ ಅಯ್ಯಪ್ಪ ಭಕ್ತರ ಮೇಲೆ ಕೇರಳದಲ್ಲಿ ಹಲ್ಲೆ

ನ್ಯೂಸ್ ನಾಟೌಟ್: ಶಬರಿಮಲೆಗೆ ಯಾತ್ರೆ ಹೊರಟ ಕನ್ನಡಿಗ ಅಯ್ಯಪ್ಪ ಭಕ್ತರ ಮೇಲೆ ಕೇರಳದ ಕಾಲಡಿ ಹೆದ್ದಾರಿಯಲ್ಲಿ ಹಲ್ಲೆ ನಡೆದಿದೆ.

ಓವರ್‌ ಟೆಕ್ ಮಾಡುವ ವಿಚಾರದಲ್ಲಿ ಎರಡೂ ಕಡೆಯವರ ನಡುವೆ ವಾಗ್ವಾದ ನಡೆದಿದೆ. ಮಾತಿಗೆ ಮಾತು ಬೆಳೆದಿದೆ. ಈ ನಡುವೆ ಕೈಕೈ ಮಿಲಾಯಿಸಿಕೊಡಿದ್ದಾರೆ ಎಂದು ತಿಳಿದು ಬಂದಿದೆ. ಮೈಸೂರಿನಿಂದ ಅಯ್ಯಪ್ಪ ದಶನಕ್ಕೆ ತೆರಳುತ್ತಿದ್ದ ಭಕ್ತರ ತಂಡ ಟೆಂಪೋ ಮೂಲಕ ಶಬರಿ ಮಲೆಗೆ ತೆರಳುತ್ತಿದ್ದರು. ಇದೇ ವೇಳೆ ಶಬರಿಮಲೆಗೆ ಹೊರಟಿದ್ದ ಸ್ಥಳೀಯ ಕಾರೊಂದು ಭಕ್ತಾಧಿಗಳ ಟೆಂಪೊಗೆ ಡಿಕ್ಕಿ ಹೊಡೆದಿದೆ. ಟೆಂಪೋ ಚಾಲಕನ ತಪ್ಪಲ್ಲದಿದ್ದರೂ ಸ್ಥಳೀಯರು ಚಾಲಕನಿಗೆ ಧರ್ಮದೇಟು ನೀಡಿದ್ದಾರೆ. ಮಾತ್ರವಲ್ಲದೇ ಇದನ್ನು ಪ್ರಶ್ನಿಸಿದ ಭಕ್ತರ ಮೇಲೆ ಕೂಡಾ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಕೇರಳ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸಿಸಿ ಟಿವಿ ದೃಶ್ಯಾವಳಿ ಪರಿಶೀಲಿಸಿಲಾಗಿದೆ. ಬಳಿಕ ಕಾರು ಚಾಲಕನದೇ ತಪ್ಪು ಎಂದು ತಿಳಿದುಬಂದಿದೆ. ಅಲ್ಲದೆ ಕಾರು ಚಾಲಕ ಮತ್ತು ಸ್ಥಳೀಯರೊಡನೆ ಅಯ್ಯಪ್ಪ ಭಕ್ತಾದಿಗಳಲ್ಲಿ ಕ್ಷಮೆಯಾಚಿಸುವಂತೆ ಕೇಳಿದ್ದಾರೆ .

Related posts

ಉಯ್ಯಾಲೆ ಆಡುತ್ತಿದ್ದ ಬಾಲಕನಿಗೆ ಕುತ್ತಿಗೆಗೆ ಹಗ್ಗ ಬಿಗಿದು ದಾರುಣ ಮೃತ್ಯು..? 8ನೇ ತರಗತಿಯ ವಿದ್ಯಾರ್ಥಿಯ ದುರಂತ ಅಂತ್ಯ

ಮಂಗಳೂರು ವಿವಿ ಸೆಮಿಸ್ಟರ್‌ ಪರೀಕ್ಷೆ ಮುಂದೂಡಿಕೆ, ಆದೇಶ ಹೊರಡಿಸಿದ ಮಂಗಳೂರು ವಿಶ್ವವಿದ್ಯಾಲಯ

ಪುತ್ತೂರು: ಅಪಘಾತಕ್ಕೀಡಾದವರಿಗೆ ಪ್ರಥಮ ಚಿಕಿತ್ಸೆ ನೀಡಿ ತನ್ನ ವಾಹನದಲ್ಲೇ ಕಾರ್ಯಕ್ರಮಕ್ಕೆ ಕಳಿಸಿಕೊಟ್ಟ ಅರುಣ್ ಪುತ್ತಿಲ