ನ್ಯೂಸ್ ನಾಟೌಟ್: ಸಾಧನೆ ಸಣ್ಣದಿರಲಿ ಅಥವಾ ದೊಡ್ಡದಿರಲಿ ಅದನ್ನು ಗುರುತಿಸುವ ಮನಸ್ಸುಗಳು ಇರಬೇಕಷ್ಟೇ.ಆಗ ಸಾಧಿಸುವವರಿಗೆ ಇನ್ನಷ್ಟು ಆತ್ಮವಿಶ್ವಾಸ ಬೆಳೆಯುತ್ತದೆ.ಅಂತೆಯೇ ಇಲ್ಲೊಬ್ಬ ಬಾಲ ಕಲಾವಿದೆಯನ್ನು ಗುರುತಿಸುವ ಕೆಲಸವಾಗಿದ್ದು, ವೇದಿಕೆಯೊಂದರಲ್ಲಿ ಈಕೆಗೆ ಟಗರು ಪಲ್ಯ ಚಿತ್ರದ ನಾಯಕಿ ಅಮೃತ ಅವರು ಅವಾರ್ಡ್ ನೀಡಿ ಗೌರವಿಸಿದರು.
ಹೌದು, ಸುಳ್ಯದ ಅವನಿ ಎಂ ಎಸ್ ಸುಳ್ಯ ಈಗಾಗ್ಲೇ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರೋ ಪ್ರತಿಭೆ.ಅದರಲ್ಲೂ ಯೋಗ ನೃತ್ಯ ಕಲಾವಿದೆಯಾಗಿ ಸಣ್ಣ ವಯಸ್ಸಿಗೆ ಹೆಸರು ಮಾಡಿದ ಕೀರ್ತಿ ಈಕೆಗೆ ಸಲ್ಲುತ್ತದೆ. ಈಕೆಯ ಸಾಧನೆಯನ್ನು ಗುರುತಿಸಿ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ.) ಕಾಸರಗೋಡು ಇವರು ಈಕೆಗೆ ಕಲಾ ಚೈತನ್ಯ ಪ್ರಶಸ್ತಿ ನೀಡಿ ಇತ್ತೀಚೆಗೆ ಗೌರವಿಸಲಾಯಿತು.
ಇದೀಗ ಅವನಿ ಎಂ ಎಸ್ ಸುಳ್ಯ ಈ ಪ್ರತಿಭೆಯನ್ನು ಈ ವರುಷದ PRIME AWARDS – 2024 (Achiever) winner’s ಪ್ರಶಸ್ತಿಯನ್ನು ಈಕೆಗೆ ನೀಡಿ ಗೌರವಿಸಲಾಯಿತು. ಚಲನಚಿತ್ರ ನಟ ಪ್ರೇಮ್ ಮಗಳು, ಟಗರುಪಲ್ಯ ಚಲನಚಿತ್ರ ನಟಿ ಅಮೃತ ಇವರು ಅವನಿ ಎಂ ಎಸ್ ಸುಳ್ಯ ಇವರಿಗೆ ಅವಾರ್ಡ್ ನೀಡಿ ಗೌರವಿಸಿದರು.ಈ ಅದ್ದೂರಿ ಕಾರ್ಯಕ್ರಮದಲ್ಲಿ ಕನ್ನಡದ ಖ್ಯಾತ ನಟ-ನಟಿಯರು ಅಲ್ಲದೇ ಬಿಗ್ ಬಾಸ್ ವಿಜೇತರು ಉಪಸ್ಥಿತರಿದ್ದರು.ರವಿಕೆ ಪ್ರಸಂಗ, ಮಂಡ್ಯಹೈದ, ಮೆಹಬೂಬ್ ಚಿತ್ರಗಳ ಟ್ರೈಲರ್ ಬಿಡುಗಡೆ ಹಾಗೂ ವಿಭಿನ್ನ ಪ್ರತಿಭೆ ಹೊಂದಿದ ಮಕ್ಕಳಿಗೆ ವೇದಿಕೆ ಕಲ್ಪಿಸಲಾಯಿತು.
ಅವನಿ ಎಂ.ಎಸ್. ಸುಳ್ಯ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ನೀರಬಿದಿರೆ ನಿವಾಸಿಗಳಾದ ಮೋಂಟಡ್ಕ ಶಶಿಧರ ಎಂ ಜೆ ಮತ್ತು ರೇಷ್ಮಾ ದಂಪತಿಗಳ ಪುತ್ರಿ. ಪ್ರಸ್ತುತ ಸುಳ್ಯದ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ 5ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾರೆ. ಅವನಿ ತನ್ನ 4ನೇ ವಯಸ್ಸಿನಿಂದ ಸುಗಮ ಸಂಗೀತವನ್ನು ಡಾ. ಕಿರಣ್ ಕುಮಾರ್ ಗಾನಸಿರಿ ಪುತ್ತೂರು, ಶಾಸ್ತ್ರೀಯ ಸಂಗೀತ ಅಭ್ಯಾಸವನ್ನು ವಿದುಷಿ ಕಾಂಚನಾ ಈಶ್ವರ ಭಟ್ ಇವರಿಂದ ತರಬೇತಿ ಪಡೆಯುತ್ತಿದ್ದಾಳೆ.
ಯೋಗಾಭ್ಯಾಸವನ್ನು ತನ್ನ 5ನೇ ವಯಸಿನಲ್ಲಿಯೇ ಯೋಗ ಗುರು ಸಂತೋಷ್ ಅವರಿಂದ ಕಲಿತು, ಪ್ರಸ್ತುತ ಯೋಗ ಗುರು ಶರತ್ ಮರ್ಗಿಲಡ್ಕರ ಜೊತೆ ಕಲಿಕೆ ಮುಂದುವರಿಸುತ್ತಿದ್ದಾರೆ. ಚಿತ್ರಕಲೆಯನ್ನು 1ನೇ ತರಗತಿಯಿಂದ ಕ್ರಿಯೇಟಿವ್ ಆರ್ಟ್ ಪ್ರಸನ್ನ ಐವರ್ನಾಡು ಇವರಿಂದ, ನೃತ್ಯವನ್ನು ಯುನೈಟೆಡ್ ಡಾನ್ಸ್ ಸ್ಟುಡಿಯೋ ಅಭಿ ಕುಲಾಲ್ ರವರಿಂದ ಪಡೆದಿದ್ದಾರೆ. ಚೆಸ್ ತರಬೇತಿಯನ್ನು ರೂಪಾ ಶೆಟ್ಟಿ ಬೆಂಗಳೂರು ಇವರಿಂದ ಪಡೆಯುತ್ತಿದ್ದಾರೆ. ಭರತನಾಟ್ಯವನ್ನು ಸುಜಾತ ಕಲಾಕ್ಷೇತ್ರ ಕೇರಳ ಅವರಿಂದ ಅಭ್ಯಾಸ ಮಾಡುತ್ತಿದ್ದಾರೆ. ನವೀನ್ ಐವರ್ನಾಡು ಅವರಿಂದ ಚಿತ್ರಕಲೆಯನ್ನು ಅಭ್ಯಾಸ ಮಾಡುತ್ತಿದ್ದಾಳೆ.