ಕರಾವಳಿಕ್ರೈಂ

ಬಂಟ್ವಾಳ: ಆಟೋ ರಿಕ್ಷಾ ಕಳವು! ಪ್ರಕರಣ ದಾಖಲು

ನ್ಯೂಸ್ ನಾಟೌಟ್: ಮಾ. 09. ರಂದು ಪ್ರತಿಭಟನೆಯಲ್ಲಿ ಭಾಗವಹಿಸಲು ಬಂದ ವ್ಯಕ್ತಿಯೋರ್ವರ ಆಟೋ ರಿಕ್ಷಾವನ್ನು ಹಾಡುಹಗಲೇ ಕಳ್ಳರು ಕದ್ದೊಯ್ದ ಘಟನೆ ಬಿಸಿರೋಡ್ ನಲ್ಲಿ ನಡೆದಿದೆ.

400 ಕೆವಿ ವಿದ್ಯುತ್ ಮಾರ್ಗವನ್ನು ವಿರೋಧಿಸಿ ಬಂಟ್ವಾಳ ತಾಲೂಕು ಕಛೇರಿ ಎದುರು ರೈತಸಂಘವು ಆಯೋಜಿಸಿದ್ದ ಪ್ರತಿಭಟನೆಗೆ ಬಂದ ವಿಟ್ಲದ ವ್ಯಕ್ತಿಯೋರ್ವರು ಬಿಸಿರೋಡ್ ಲಯನ್ಸ್ ಕ್ಲಬ್ ಭವನದ ಬಳಿ ತನ್ನ ಆಟೋವನ್ನು ನಿಲ್ಲಿಸಿದ್ದರು.

ಬಳಿಕ ಪ್ರತಿಭಟನೆ ಮುಗಿಸಿ ಹಿಂತಿರುಗಿ ಬಂದು ನೋಡಿದಾಗ ಆಟೋ ಕಾಣದೇ ಇದ್ದು ಯಾರೋ ಕಿಡಿಗೇಡಿಗಳು ಕಳವುಗೈದಿದ್ದಾರೆ ಎಂದು ಶಂಕಿಸಲಾಗಿದೆ. ಈ ಕುರಿತು ವಿಟ್ಲದ ಯೋಗಿಶ್ ಎಂಬವರು ನೀಡಿದ ದೂರಿನಂತೆ ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Related posts

CM ಸಿದ್ದರಾಮಯ್ಯ ವಿರುದ್ಧ ಆಕ್ಷೇಪಾರ್ಹ ಮತ್ತು ಕೋಮು ಭಾವನೆ ಕೆರಳಿಸುವ ಭಾಷಣದ ಆರೋಪ ,ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಭಾಷಣದ ಸಿಡಿ ಒದಗಿಸಲು ಹೈಕೋರ್ಟ್ ಸೂಚನೆ?ಏನಿದು ಪ್ರಕರಣ?

ಮಂಗಳೂರು: ಸರಗಳ್ಳತನ ಪ್ರಕರಣ ಭೇದಿಸಿದ ಪೊಲೀಸರು, ಏಳು ಮಂದಿ ಖದೀಮರು ಬಲೆಗೆ

ಮಂಗಳೂರು: 3 ಯುವತಿಯರ ಮೃತದೇಹ ಪೋಷಕರಿಗೆ ಹಸ್ತಾಂತರ, ರೆಸಾರ್ಟ್ ಮಾಲಕ ಮತ್ತು ಮ್ಯಾನೇಜರ್ ಅರೆಸ್ಟ್..!