ಕರಾವಳಿ

ಸುಳ್ಯ: ಹಠಾತ್ ಕುಸಿದು ಬಿದ್ದು ಆಟೋ ಚಾಲಕ ಗಂಭೀರ

ವರದಿ: ರಸಿಕಾ ಮುರುಳ್ಯ

ನ್ಯೂಸ್ ನಾಟೌಟ್: ಆರಾಮವಾಗಿದ್ದ ಆಟೋ ಚಾಲಕರೊಬ್ಬರು ಇದ್ದಕಿದ್ದಂತೆ ಪಾರ್ಶವವಾಯುಗೆ ತುತ್ತಾಗಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಸುಳ್ಯ ನಗರದಲ್ಲಿ ನಡೆದಿದೆ. ಸದ್ಯ ಗಂಭೀರ ಸ್ಥಿತಿಯಲ್ಲಿ ಹೇಮನಾಥ್ ಆರ್.ಬಿ.(32) ಎಂಬುವವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಸಂಪಾಜೆಯಿಂದ ಅನಾರೋಗ್ಯ ಪೀಡಿತ ವ್ಯಕ್ತಿಯೊಬ್ಬರನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ಹೇಮನಾಥ್‌ ತಮ್ಮ ಆಟೋದಲ್ಲಿ ಕರೆದುಕೊಂಡು ಬಂದಿದ್ದರು. ಈ ವೇಳೆ ಆಸ್ಪತ್ರೆಯಲ್ಲಿ ಹೇಮನಾಥ್‌ ಇದ್ದಕಿದ್ದಂತೆ ಕುಸಿದು ಬಿದ್ದಿದ್ದಾರೆ. ತಕ್ಷಣ ಆಸ್ಪತ್ರೆ ಸಿಬ್ಬಂದಿ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿದರು. ಸದ್ಯ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಲೇಬೇಕಾದ ಅನಿವಾರ್ಯತೆ ಇದೆ. ಇದಕ್ಕಾಗಿ ಸುಮಾರು 4 ಲಕ್ಷಕ್ಕೂ ಅಧಿಕ ಹಣದ ಅಗತ್ಯತೆ ಇದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಆತನ ಪ್ರಾಣ ರಕ್ಷಣೆ ಮಾಡುವುದಕ್ಕೆ ಸಹೃದಯರು ನೆರವಾಗುವಂತೆ ಕೋರಲಾಗಿದೆ.

ಹೇಮನಾಥ್‌ ಸುಳ್ಯ ತಾಲೂಕಿನ ದೊಡ್ಡಡ್ಕದ ರಾಜರಾಂಪುರದ ನಿವಾಸಿ, ಜೀವನ ನಿರ್ವಹಿಸುವುದಕ್ಕಾಗಿ ಆಟೋ ಚಾಲನೆಯನ್ನು ಅವಲಂಬಿಸಿದ್ದಾರೆ. ಆರ್ಥಿಕವಾಗಿ ಅವರು ಸಬಲರಲ್ಲದ ಕಾರಣಕ್ಕೆ ದುಬಾರಿ ವೆಚ್ಚದ ಚಿಕಿತ್ಸೆಯನ್ನು ನೀಡುವುದು ಕಷ್ಟಕರವಾಗಿದೆ. ಹೀಗಾಗಿ ಓದುಗರು ಅವರಿಗೆ ನೆರವು ನೀಡಬಹುದು. ಹೆಚ್ಚಿನ ವಿವರಕ್ಕೆ ಸಂಪರ್ಕಿಸಿರಿ.ದಾನಿಗಳು ಅವರ ತಾಯಿಯ ಬ್ಯಾಂಕ್ ಖಾತೆಗೆ ಹಣ ಕಳುಹಿಸಬಹುದು.

ಖಾತೆದಾರರ ವಿವರ: ಲಕ್ಷ್ಮಿ (ಹೇಮನಾಥ್ ರವರ ತಾಯಿ)

ಬ್ರಾಂಚ್ : ಕೆನರಾ ಬ್ಯಾಂಕ್‌ ಕಲ್ಲು ಗುಂಡಿ

 ಬ್ಯಾಂಕ್ ಖಾತೆಯ ಸಂಖ್ಯೆ : 0643101011105

IFSC CODE: CNRB0000643

PHONE PAY/GOOGLE PAY: 7353733818

Related posts

ಪಟ್ಟಣಗೆರೆ ಶೆಡ್​ ನಲ್ಲಿ ಕೊಲೆಗೂ ಮುನ್ನ ತೆಗೆದ ಫೋಟೋಗಳು ವೈರಲ್..! ಶೆಡ್ ​ನಲ್ಲಿ ಕೈ ಮುಗಿದು ಅಂಗಲಾಚುತ್ತಿರುವ ರೇಣುಕಾಸ್ವಾಮಿ..!

ಸುಳ್ಯ ಜಾತ್ರೋತ್ಸವ: ಹಿಂದೂಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ, ಅನ್ಯಧರ್ಮೀಯರಿಗೆ ಇಲ್ಲ

ಕೆವಿಜಿ ಅಮರ ಜ್ಯೋತಿ ಪಿಯು ಕಾಲೇಜಿನಲ್ಲಿ ರಾಷ್ಟ್ರೀಯ ಯುವ ದಿನದ ಆಚರಣೆ